Azadi Ka Amrit Mahotsav: ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಕನ್ನಡಿಗರ ಅಪರೂಪದ ಸಾಧನೆ !

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಕರ್ನಾಟಕಕ್ಕೆ ‘ಅಮೃತ’ ಗಳಿಗೆ ಬಂದಿದ್ದು ತೀರಾ ಅಪರೂಪ ಎನ್ನಬಹುದು.

Azadi Ka Amrit Mahotsav: ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಕನ್ನಡಿಗರ ಅಪರೂಪದ ಸಾಧನೆ !
BD Jatti, HD Deve Gowda
Follow us
TV9 Web
| Updated By: ನಯನಾ ರಾಜೀವ್

Updated on: Aug 04, 2022 | 5:34 PM

ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಕರ್ನಾಟಕಕ್ಕೆ ‘ಅಮೃತ’ ಗಳಿಗೆ ಬಂದಿದ್ದು ತೀರಾ ಅಪರೂಪ ಎನ್ನಬಹುದು. 75 ವರ್ಷದ ಸ್ವತಂತ್ರ ಭಾರತದಲ್ಲಿ ಕೇವಲ ಮೂರು ಬಾರಿ ಮಾತ್ರ ಕನ್ನಡಿಗರು ದೇಶದ ಅತ್ಯುನ್ನತ ಸಂವಿಧಾನ ಹುದ್ದೆಯಲ್ಲಿ ಅಲಂಕರಿಸಿ ಸಂಭ್ರಮಿಸಲು ಕಾರಣರಾಗಿದ್ದಾರೆ. ಒಮ್ಮೆ ಪ್ರಧಾನಿ, ಮಗದೊಮ್ಮೆ ರಾಷ್ಟ್ರಪತಿ ಹಾಗೂ ಇನ್ನೊಮ್ಮೆ ಉಪ ರಾಷ್ಟ್ರಪತಿ ಹುದ್ದೆಯು ಕನ್ನಡಿಗರಿಗೆ ದೊರೆತಿದೆ.

ಈ ಮೂರು ಅವಕಾಶ ಬಿಟ್ಟರೆ ಕನ್ನಡಿಗರು ಬೇರೆ ಸಂದರ್ಭದಲ್ಲಿ ದೇಶದ ಯಾವುದೇ ರಾಜಕೀಯ ಸಂವಿಧಾನ ಹುದ್ದೆಯನ್ನು ಅಲಂಕರಿಸಿಲ್ಲ. ಇದು ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಲೋಕಸಭೆಯ ಅಧ್ಯಕ್ಷರ ಹುದ್ದೆಗೆ ಅನ್ವಯಿಸಬಹುದು. ರಾಜಕೀಯ ಕಾರಣಗಳಿಂದ ಈ ನಾಲ್ಕು ಹುದ್ದೆಗಳು ಅಗ್ರಗಣ್ಯವಾಗಿವೆ.

ಬಸಪ್ಪ ದಾನಪ್ಪ ಜತ್ತಿ

ದೇಶದ ಪ್ರಥಮ ಪ್ರಜೆಯಾದ ಜಮಖಂಡಿಯ ಜತ್ತಿ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಬಸಪ್ಪ ದಾನಪ್ಪ ಜತ್ತಿ, ಬಿ.ಡಿ ಜತ್ತಿ ಎಂದು ಪ್ರಚಲಿತರು. ನಿಜಲಿಂಗಪ್ಪ ಅವರ ಬಳಿಕ ಮೂರು ವರ್ಷಕ್ಕೂ ಅಧಿಕ ಕಾಲದವರೆಗೆ ಕರ್ನಾಟಕದ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದರು.

ಬಳಿಕ ಪದುಚೇರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಕೆಲಸ ಮಾಡಿದರು. ನಂತರ ಓಡಿಶಾದ ರಾಜ್ಯಪಾಲರಾಗಿ ನೇಮಕರಾದರು. ಕಾಂಗ್ರೆಸ್‌ ನಾಯಕತ್ವಕ್ಕೆ ಆತ್ಮೀಯರಾಗಿದ್ದ ಅವರು 1974ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಆದರೆ 1977ರಲ್ಲಿ ಹಠಾತ್‌ ಆಗಿ ಅಂದಿನ ರಾಷ್ಟ್ರಪತಿ ಫಕರುದ್ದೀನ್‌ ಅಲಿ ಅಹ್ಮದ್‌ ನಿಧನರಾದ ಹಿನ್ನೆಲೆಯಲ್ಲಿ ಜತ್ತಿ ಅವರು 164 ದಿನಗಳ ಮಟ್ಟಿಗೆ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದರು.

ಇದಕ್ಕೂ ಮೊದಲು ಹಾಗೂ ಬಳಿಕ ಕರ್ನಾಟಕದ ಯಾವುದೇ ವ್ಯಕ್ತಿಯು ಈ ಉನ್ನತ ಹುದ್ದೆಗೆ ಏರಿಲ್ಲ. ಮುಂದಿನ ಅವಧಿಗೆ ಜತ್ತಿ ಅವರನ್ನು ಮುಂದುವರಿಸಲಿಲ್ಲ. ಬದಲಿಗೆ ನೀಲಂ ಸಂಜೀವ್‌ ರೆಡ್ಡಿ ಅವರು ಮುಂದಿನ ರಾಷ್ಟ್ರಪತಿಯಾದರು. ಮಣ್ಣಿನ ಮಗ ದೇವೇಗೌಡ 1990ರ ಭಾರತದ ರಾಜಕೀಯ ಇತಿಹಾಸವು ಸಾಕಷ್ಟು ಏರಿಳಿತವನ್ನು ಕಂಡಿದೆ. ಪಿ ವಿ ನರಸಿಂಹರಾವ್‌ ಸರ್ಕಾರ ಚುನಾವಣೆಯಲ್ಲಿ ಸೋತ ಬಳಿಕ ಅತಂತ್ರ ಲೋಕಸಭೆ ಸೃಷ್ಟಿಯಾಯಿತು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಕೇವಲ 13 ದಿನಕ್ಕೆ ಪತನವಾಯಿತು.

ಎಚ್​ಡಿ ದೇವೇಗೌಡರು

ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವೇ ಇಲ್ಲದ ಸಂದರ್ಭದಲ್ಲಿ ಅಚಾನಕ್‌ ಆಗಿ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿ ಸೈ ಎನಿಸಿಕೊಂಡವರು ರಾಜ್ಯದ ಮಣ್ಣಿನ ಮಗ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ. ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ದೇವೇಗೌಡರು ಜನತಾ ದಳದ ಪ್ರಧಾನಿಯಾಗಿ 324 ದಿನಗಳ ಕಾಲ ದೇಶವನ್ನು ಮುನ್ನಡೆಸಿದರು.

ರಾಷ್ಟ್ರೀಯ ಮಾಧ್ಯಮಗಳ ಸಾಕಷ್ಟು ಟೀಕೆಗಳ ಮಧ್ಯೆಯೂ ದೇವೇಗೌಡರು ಕೆಲವು ಕಠಿಣ ನಿಲುವುಗಳ ಮೂಲಕ ರಾಷ್ಟ್ರ ರಾಜಕೀಯ ಹಾಗೂ ಆಡಳಿತದಲ್ಲಿ ಛಾಪು ಮೂಡಿಸಿದರು. ಆದರೆ ಕಾಂಗ್ರೆಸ್‌ ಬೆಂಬಲ ಹಿಂಪಡೆದ ಕಾರಣದಿಂದ ದೇವೇಗೌಡರು ರಾಜೀನಾಮೆ ನೀಡಬೇಕಾಯಿತು. ಅವರ ಜಾಗಕ್ಕೆ ಐ ಕೆ ಗುಜ್ರಾಲ್‌ ಬಂದು ಆಸೀನರಾದರು. ನ್ಯಾಯಾಂಗದಲ್ಲಿ ಅಮೃತ ಗಳಿಗೆ ಭಾರತದ ರಾಜಕೀಯ ಇತಿಹಾಸಕ್ಕಿಂತ ನ್ಯಾಯಾಂಗದಲ್ಲಿ ಕರ್ನಾಟಕಕ್ಕೆ ಒಂದಿಷ್ಟು ನ್ಯಾಯ ದೊರೆತಿದೆ ಎನ್ನಬಹುದು.

ರಾಜ್ಯದ ನಾಲ್ವರು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ನ್ಯಾಯಾಂಗ ಭೀಷ್ಮ ಎನಿಸಿಕೊಂಡಿರುವ ನ್ಯಾ.ಎಂ.ಎನ್‌.ವೆಂಕಟಾಚಲಯ್ಯ ಕೂಡ ಒಬ್ಬರು. 1989ರಲ್ಲಿ ನ್ಯಾ.ಇ.ಎಸ್‌.ವೆಂಕಟರಾಮಯ್ಯ ಅವರು 181 ದಿನಗಳ ಅವಧಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದರು. ಇವು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿಯೂ ಕೆಲಸ ಮಾಡಿದ್ದರು.

ದೇಶದ ನ್ಯಾಯಾಂಗದ ಭೀಷ್ಮ ಎನಿಸಿಕೊಳ್ಳುವ ಕೋಲಾರದ ಎಂ.ಎನ್‌.ವೆಂಕಟಾಚಲಯ್ಯ ಅವರು ಸುಪ್ರೀಂ ಕೋರ್ಟ್‌ನ ಉನ್ನತ ಹುದ್ದೆಯನ್ನು 1 ವರ್ಷದ 254 ದಿನಗಳ ಕಾಲ ಅಲಂಕರಿಸಿದ್ದರು. ಕರ್ನಾಟಕ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದು 1993 ರಲ್ಲಿ ಸಿಜೆಐ ಆಗಿ ನೇಮಕವಾಗಿದ್ದರು.

ದೇಶದ ನ್ಯಾಯಾಂಗ ಸುಧಾರಣೆ ಹಾಗೂ ಆಧುನಿಕ ಸ್ಪರ್ಶಕ್ಕೆ ಇವರ ಕೊಡುಗೆ ಅಪಾರ. ನ್ಯಾ.ವೆಂಕಟಾಚಲಯ್ಯ ಅವರ ಬಳಿಕ ಸುಮಾರು ಒಂದು ದಶಕದ ನಂತರ 2004ರಲ್ಲಿ 29 ದಿನಗಳ ಅಲ್ಪಾವಧಿಗೆ ನ್ಯಾ.ಎಸ್‌.ರಾಜೇಂದ್ರ ಬಾಬು ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದರು.

ಇದಾದ ಬಳಿಕ 2014 ಕರ್ನಾಟಕದ ನ್ಯಾ.ಎಚ್‌.ಎಲ್‌.ದತ್ತು ಅವರು 1 ವರ್ಷ 65 ದಿನಗಳ ಅವಧಿಗೆ ನ್ಯಾಯಾಂಗದ ಉನ್ನತ ಹುದ್ದೆಗೆ ಏರಿದ ಶ್ರೇಯಕ್ಕೆ ಪಾತ್ರರಾದರು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್