AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking ಪತ್ರಾ ಚಾವ್ಲ್ ಹಗರಣ: ಸಂಜಯ್ ರಾವತ್ ಪತ್ನಿ ವರ್ಷಾ ರಾವತ್​​ಗೆ ಇಡಿ ಸಮನ್ಸ್

ವರ್ಷಾ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಡಿ ಸಮನ್ಸ್ ಕಳುಹಿಸಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

Breaking ಪತ್ರಾ ಚಾವ್ಲ್ ಹಗರಣ: ಸಂಜಯ್ ರಾವತ್ ಪತ್ನಿ ವರ್ಷಾ ರಾವತ್​​ಗೆ ಇಡಿ ಸಮನ್ಸ್
TV9 Web
| Edited By: |

Updated on:Aug 04, 2022 | 5:07 PM

Share

ಪತ್ರಾ ಚಾವ್ಲ್  ಭೂಹಗರಣಕ್ಕೆ  (Patra ‘Chawl’ redevelopment case)ಸಂಬಂಧಿಸಿದಂತೆ ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ  ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರ ಪತ್ನಿ ವರ್ಷಾ ರಾವತ್ (Varsha Raut) ಅವರಿಗೆ ಇಂದು (ಗುರುವಾರ)  ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿದೆ. ವಿಶೇಷ  ನ್ಯಾಯಾಲಯ ಸಂಜಯ್ ರಾವತ್ ಅವರ ಇಡಿ ಕಸ್ಟಡಿಯನ್ನು ಇಂದು ಆಗಸ್ಟ್ 8ರವರೆಗೆ ವಿಸ್ತರಿಸಿದ ಬೆನ್ನಲ್ಲೇ ವರ್ಷಾ ಅವರಿಗೆ ಈ ಸಮನ್ಸ್ ಕಳುಹಿಸಲಾಗಿದೆ. ವರ್ಷಾ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಡಿ ಸಮನ್ಸ್ ಕಳುಹಿಸಿದೆ. ಸಂಜಯ್ ರಾವತ್ ಅವರ ಇಡಿ ಕಸ್ಟಡಿ ಬಗ್ಗೆ ಇಂದು ಮುಂಬೈ ವಿಶೇಷ  ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ, ಯಾವುದೋ ವ್ಯಕ್ತಿಯಿಂದ ವರ್ಷಾ ರಾವತ್ ಬ್ಯಾಂಕ್ ಖಾತೆಗೆ ₹1.08 ಕೋಟಿ ಹಣ ಬಂದಿದೆ ಎಂದು ಇಡಿ ಹೇಳಿದ. ರಾಜ್ಯಸಭಾ ಸಂಸದ ಸಂಜಯ್ ರಾವತ್ ಮನೆ ಮೇಲೆ ಇಡಿ ದಾಳಿ ನಡೆಸಿದ  ನಂತರ ಕಳೆದ ಭಾನುವಾರ ರಾತ್ರಿ  ಅವರನ್ನು ಬಂಧಿಸಲಾಗಿತ್ತು.

ಪಾತ್ರ ಚಾವ್ಲ್ ಪುನರಭಿವೃದ್ಧಿಯಲ್ಲಿ ಆರ್ಥಿಕ ಅವ್ಯವಹಾರ ಮಚತ್ತು ಅದಕ್ಕೆ ಸಂಬಂಧಿಸಿದ ಆರ್ಥಿಕ ಆಸ್ತಿ ವಹಿವಾಟುಗಳಲ್ಲಿ  ಅಕ್ರಮ ನಡೆದಿದ್ದು ಅದರಲ್ಲಿ ಶಿವಸೇನಾ ಸಂಸದರ ಪತ್ನಿ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.

ಏಪ್ರಿಲ್ ತಿಂಗಳಲ್ಲಿ ವರ್ಷಾ ರಾವತ್ ಮತ್ತು ಸಂಜಯ್ ರಾವತ್ ಅವರ ಇಬ್ಬರು ಸಹಾಯಕರಿಗೆ ಸೇರಿದ  11.15 ಕೋಟಿಗಿಂತಲೂ ಮೊತ್ತದ ಹಣವನ್ನು ಇಡಿ ಮುಟ್ಟುಗೋಲು ಹಾಕಿತ್ತು.

ಮುಟ್ಟುಗೋಲು ಹಾಕಿದ ಆಸ್ತಿಯಲ್ಲಿ  ಸಂಜಯ್ ರಾವತ್ ಅವರ ಸಹಾಯಕ, ಪಾಲ್ಘಾರ್  ಮತ್ತು ಪಾದ್ಘಾದಲ್ಲಿರುವ ಗುರು ಆಶಿಶ್ ಕನ್ ಸ್ಟ್ರಕ್ಷನ್ ಪ್ರೈ ಲಿಮಿಟೆಡ್ ನ ಮಾಜಿ ನಿರ್ದೇಶಕ ಪ್ರವೀಣ್ ಎಂ ರಾವತ್ ಅವರಿಗೆ ಸೇರಿದ್ದಾಗಿದೆ.

ಈ ಆಸ್ತಿಯಲ್ಲಿ ವರ್ಷಾ ರಾವತ್ ಅವರಿಗೆ ಸೇರಿದ ಮುಂಬೈನ  ಸಬರ್ಬ್ ದಾದರ್ ನಲ್ಲಿರುವ ಫ್ಲಾಟ್  ಮತ್ತು ವರ್ಷಾ ರಾವತ್ ಮತ್ತು ಸಂಜಯ್ ರಾವತ್ ಆಪ್ತ ಸುಜಿತ್ ಪಾಟ್ಕರ್ ಪತ್ನಿ ಸ್ವಪ್ನಾ ಪಾಟ್ಕರ್ ಅವರಿಗೆ ಸೇರಿದ    ಅಲಿ ಭಾಗ್  ಖಿಲಿಂ ಬೀಚ್ ನಲ್ಲಿರುವ 8 ಜಮೀನು ಸೇರಿದೆ ಎಂದು ಇಡಿ ಹೇಳಿದೆ.

Published On - 4:31 pm, Thu, 4 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ