ಮಗಳ ವಿಚಾರದಲ್ಲಿ ಜಗಳ, ಮನೆ ಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿದ ಬಾಡಿಗೆದಾರ ಮಹಿಳೆ
ಯಾವುದೋ ಸಣ್ಣ ವಿಚಾರಕ್ಕೆ ಬಾಡಿಗೆದಾರ ಮಹಿಳೆ ಮಾಲೀಕರ ಹೆಬ್ಬೆರಳು ಕಚ್ಚಿ ಕತ್ತರಿಸಿರುವ ಘಟನೆ ಹೌರಾದಲ್ಲಿ ನಡೆದಿದೆ. ಮಗಳ ಮೇಲಿನ ಕೋಪಕ್ಕೆ ಬಾಡಿಗೆದಾರ ಮಹಿಳೆ ಮನೆ ಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿರುವ ಘಟನೆ ಹೌರಾದ ಶಿಬ್ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಕುಟುಂಬದ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆ ಮಾಲೀಕರ ಮಗಳು ತನ್ನ ಮೇಲೆ ದೌರ್ಜನ್ಯವೆಸಗಿದ್ದಾಳೆ ಎಂದು ಆರೋಪುಸಲು ಬಂದಿದ್ದ ಆಕೆ ಮಾಲೀಕರ ಹೆಬ್ಬೆರಳನ್ನೇ ಕಚ್ಚಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾಳೆ.
ಶಿಬ್ಪುರ, ಡಿಸೆಂಬರ್ 05: ಮಗಳ ಮೇಲಿನ ಕೋಪಕ್ಕೆ ಬಾಡಿಗೆದಾರ ಮಹಿಳೆ ಮನೆ ಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿರುವ ಘಟನೆ ಹೌರಾದ ಶಿಬ್ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಕುಟುಂಬದ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆ ಮಾಲೀಕರ ಮಗಳು(Daughter) ತನ್ನ ಮೇಲೆ ದೌರ್ಜನ್ಯವೆಸಗಿದ್ದಾಳೆ ಎಂದು ಆರೋಪುಸಲು ಬಂದಿದ್ದ ಆಕೆ ಮಾಲೀಕರ ಹೆಬ್ಬೆರಳನ್ನೇ ಕಚ್ಚಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾಳೆ.
ಹೆಬ್ಬೆರಳನ್ನು ಕಳೆದುಕೊಂಡ ಮಹಿಳೆ ಕೈನತ್ ಜಾನ್ ರಜಿಯಾ ಖಾತೂನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ರಜಿಯಾ ಜಾನ್ ಅವರ ಮೂರು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿ ಕೆಲವು ವರ್ಷಗಳ ಕಾಲ ವಾಸಿಸುತ್ತಿದ್ದರು. ಆಗಾಗ ಇಬ್ಬರ ನಡುವೆ ಜಗಳಗಳು ನಡೆಯುತ್ತಿದ್ದವು.
ಕೈನತ್ ಅವರ ಹೆಬ್ಬೆರಳನ್ನು ಮತ್ತೆ ಜೋಡಿಸುವ ಪ್ರಯತ್ನ ವಿಫಲವಾದ ನಂತರ ಆಸ್ಪತ್ರೆಯ ವೈದ್ಯರು ಅವರಿಗೆ ಮನೆಗೆ ಹೋಗಲು ಅವಕಾಶ ನೀಡಿದರು.ಗುರುವಾರ ತಡರಾತ್ರಿಯವರೆಗೂ ರಜಿಯಾ ಪತ್ತೆಯಾಗಿರಲಿಲ್ಲ. ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ನನ್ನ ಮಗಳು ಆಟವಾಡಲು ಟೆರೇಸ್‌ಗೆ ಹೋಗಿದ್ದಳು.
ಮತ್ತಷ್ಟು ಓದಿ: ಮುಂಬೈ: ಪತ್ನಿ ಹಾಗೂ ಅಪ್ರಾಪ್ತ ಮಗಳ ಹತ್ಯೆಗೆ ಯತ್ನ, ವ್ಯಕ್ತಿಯ ಬಂಧನ
ಆಗ ಆ ಮಹಿಳೆ ನಮ್ಮ ಮನೆಗೆ ನುಗ್ಗಿ ನನ್ನ ಮೇಲೆ, ನನ್ನ ತಂದೆ ಮತ್ತು ನನ್ನ ಗಂಡನ ಮೇಲೆ ಹಲ್ಲೆ ನಡೆಸಿ, ನನ್ನ ಮಗು ತನ್ನ ಮೇಲೆ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದ್ದಾಳೆ ಎಂದು ಕೈನತ್ ಹೇಳಿದರು. ಕೈನತ್ ತನ್ನ ತಂದೆ ಮತ್ತು ಪತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ದಾಳಿ ಮಾಡಲಾಗಿದೆ.
ಆರೋಪಿಯು ಆಕೆಯ ಹೆಬ್ಬೆರಳಿಗೆ ಹಲ್ಲು ಚುಚ್ಚಿ ಸುಮಾರು ಎರಡು ನಿಮಿಷಗಳ ಕಾಲ ಹಾಗೆಯೇ ಹಿಡಿದಿದ್ದಳು. ಆಕೆ ಕೈನತ್ ಬಿಟ್ಟು ಹೋದಾಗ ಬಲಗೈ ಹೆಬ್ಬೆರಳು ತುಂಡಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




