AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?

ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ಗೃಹಿಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನದ‌ ಬಳಿಕ ಹಂತಕ ಪೊಲೀಸರಿಗೆ ಸಿಕ್ಕಿಬಿದ್ದಾನೆ. ತನ್ನಿಂದ ದೂರವಾದ ಸಿಟ್ಟಿಗೆ ಅತ್ತೆ ಮಗಳನ್ನೇ‌ ಆರೋಪಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಸದ್ಯ ಆಲ್ದೂರು ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?
ಕೊಲೆಯಾದ ಗೃಹಿಣಿ, ಆರೋಪಿ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 04, 2025 | 10:02 PM

Share

ಚಿಕ್ಕಮಗಳೂರು, ಡಿಸೆಂಬರ್​ 04: ತನ್ನಿಂದ ದೂರವಾದ ಸಿಟ್ಟಿಗೆ ಅತ್ತೆ ಮಗಳನ್ನೇ‌ ಹತ್ಯೆ (murder) ಮಾಡಿ ಪರಾರಿಯಾಗಿದ್ದ ಹಂತಕನನ್ನು ಪೊಲೀಸರು ಎರಡು ದಿನದ‌ ಬಳಿಕ ಬಂಧಿಸಿ (arrest) ಜೈಲಿಗಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ವಾಟೆಖಾನ್ ಗ್ರಾಮದ ನಿವಾಸಿ ಜನಾರ್ಧನ್​ (38) ಬಂಧಿತ ಆರೋಪಿ. ಜನಾರ್ಧನ್​​ಗೆ ಹೆಂಡತಿ ಇದ್ದರೂ ಗಂಡನನ್ನ ಬಿಟ್ಟಿದ್ದ ಅತ್ತೆ ಮಗಳು ಸಂಧ್ಯಾ ಮೇಲೆ ಪ್ರೀತಿ ಇತ್ತು. ತನ್ನೊಂದಿಗೆ ಬಂದವಳು ವಾಪಸ್ ಮನೆಗೆ ತೆರಳಿದ್ದಕ್ಕೆ ಆಕ್ರೋಶಗೊಂಡು ಕೊಲೆಗೈದಿದ್ದ.

ನಡೆದದ್ದೇನು?

ಡಿಸೆಂಬರ್ 1ರ ಬೆಳಗ್ಗೆ ಅರೇನೂರು ಗ್ರಾಮದ ಸಂಧ್ಯಾ ಎಂಬ ಮಹಿಳೆಯನ್ನ ಮನೆಯ ಹಿಂಭಾಗದಲ್ಲಿ ಕತ್ತು ಕೂಯ್ದು ಬರ್ಬರವಾಗಿ ಹತ್ಯೆ ಮಾಡಿ ಹಂತಕ ಎಸ್ಕೇಪ್ ಆಗಿದ್ದ. ಘಟನೆ ನಡೆದು ಎರಡು ದಿನಗಳ ಬಳಿಕ ಸಂಧ್ಯಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದ ಹಂತಕನನ್ನ ಪೊಲೀಸರು ಬಂಧಿಸಿದ್ದಾರೆ. ಅತ್ತೆ ಮಗನಿಂದಲೇ ಸಂಧ್ಯಾ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಇದಕ್ಕೆ ಕಾರಣವಾಗಿದ್ದು, ಅನೈತಿಕ ಸಂಬಂಧ.

ಇದನ್ನೂ ಓದಿ: ಮೂವರು ಮಕ್ಕಳ ತಾಯಿಯ ಡೆಡ್ಲಿ ಮರ್ಡರ್​​: ಪ್ರಾಣಕ್ಕೆ ಸಂಚು ತಂತಾ ಲವ್ವಿಡವ್ವಿ?

ಜನಾರ್ಧನ್ ಸಂಧ್ಯಾಳ ಅತ್ತೆ ಮಗ. ಸಂಧ್ಯಾಳ‌ ಹತ್ಯೆ ಮಾಡಿ ವಾಟೆಖಾನ್ ಕಾಡು ಸೇರಿದ್ದ ಆತನನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಇದೀಗ ಬಂಧಿಸಿದ್ದಾರೆ. ಸಂಧ್ಯಾ ಹತ್ಯೆಯಾದ ದಿನವೇ ಆಲ್ದೂರು ಪೊಲೀಸರಿಗೆ ಜನಾರ್ಧನ್ ಮೇಲೆ ಅನುಮಾನ ಮೂಡಿತ್ತು. ಆ ಅನುಮಾನಕ್ಕೆ ಕಾರಣವಾಗಿದ್ದು ಸಂಧ್ಯಾ ಮತ್ತು ಜನಾರ್ಧನ್ ನಡುವಿನ ಲವ್ ಸ್ಟೋರಿ. ಹತ್ಯೆಯಾದ ಹಿಂದಿನ ದಿನ ವಾಟೆಖಾನ್ ಗ್ರಾಮದಿಂದ ಅರೇನೂರು ಗ್ರಾಮಕ್ಕೆ ವಾಪಸ್ ಬಂದಿದ್ದ ಸಂಧ್ಯಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಒಂದು ಕಡೆ ಹೆಂಡತಿ ಕಾಟ, ಮತ್ತೊಂದು ಕಡೆ ಅತ್ತೆ ಮಗಳ ಲವ್ ಟಾರ್ಚರ್.

ಕಳೆದ ಒಂದು ತಿಂಗಳ ಹಿಂದೆ ಸಂಧ್ಯಾ ಅರೇನೂರು ಗ್ರಾಮದ ತನ್ನ ತಾಯಿ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಕುಟುಂಬದವರು ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ‌ದಾಖಲು ಮಾಡಿದ್ದರು. ಸಂಧ್ಯಾಳಿಗಾಗಿ ಹುಡುಕಾಟ ನಡೆಸಿದ ಪೊಲೀಸರು, ಸಂಧ್ಯಾ ಮೂಡಿಗೆರೆ ತಾಲೂಕಿನ ವಾಟೆಖಾನ್ ಗ್ರಾಮದ ತನ್ನ ಅತ್ತೆ ಮನೆಯಲ್ಲಿ ಇರುವುದು ಗೊತ್ತಾಗಿತ್ತು. ಆದರೆ ನವೆಂಬರ್ 30ರ ಸಂಜೆ ಸಂಧ್ಯಾ ಅರೇನೂರು ಗ್ರಾಮದ ಮನೆಗೆ ಬಂದಿದ್ದು, ಬೆಳಗ್ಗೆ ಮನೆಯ ಹಿಂಭಾಗದಲ್ಲಿ ಹೆಣವಾಗಿದ್ದಳು.

ತನ್ನ ಅತ್ತೆ ಮಗ ಜನಾರ್ಧನ್​​ ಜೊತೆ ಸಂಧ್ಯಾಳಿಗೆ ಬಾಲ್ಯದಿಂದಲೇ ಸಲಿಗೆ ಬೆಳೆದಿತ್ತು. ಇದೇ ಸಲುಗೆ ಪ್ರೇಮವಾಗಿತ್ತು. ಆದರೆ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡದ ಹಿನ್ನೆಲೆ ಸಂಧ್ಯಾಳನ್ನ ಬಾಳೆಹೊನ್ನೂರು ಸಮೀಪದ ಶಿರಗೋಳ ಗ್ರಾಮದ ರವಿ ಜೊತೆ ಮದುವೆ ಮಾಡಲಾಗಿತ್ತು. ಜನಾರ್ಧನ್ ಕೂಡ ಮೂಡಿಗೆರೆ ಮೂಲದ ಯುವತಿ ಜೊತೆ ವಿವಾಹವಾಗಿದ್ದ. ಆದರೆ ಸಂಧ್ಯಾ ಮತ್ತು ಜನಾರ್ಧನ್ ಮಧ್ಯೆ ಅನೈತಿಕ ಸಂಬಂಧ ಬೆಳೆದಿತ್ತು. ಇದೆ ವಿಚಾರಕ್ಕೆ ಸಂಧ್ಯಾ ಮತ್ತು ಪತಿ ರವಿ ಜೊತೆ ಗಲಾಟೆಯಾಗಿ ಸಂಧ್ಯಾ ಮೂರು ವರ್ಷದ ಹಿಂದೆ ತನ್ನ ಮೂವರು ಮಕ್ಕಳ ಜೊತೆ ಅರೆನೂರು ಗ್ರಾಮದ ತಾಯಿ ಮನೆ ಸೇರಿದ್ದಳು.

ಇದನ್ನೂ ಓದಿ: ಮಹಿಳೆ ಜತೆ ಲಿವಿಂಗ್​​​​​​​ ರಿಲೇಶನ್ ಶಿಪ್​: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ ಈಗ ಜೈಲು ಪಾಲು

ಜನಾರ್ಧನ್ ಮತ್ತು ಸಂಧ್ಯಾಳ ಆತ್ಮೀಯತೆ ಇನ್ನೂ ಹೆಚ್ಚಾಗಿತ್ತು. ಇದೇ ವಿಷಯಕ್ಕೆ ಜನಾರ್ಧನ್ ಪತ್ನಿ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿದ್ದಳು. ಜನಾರ್ಧನ್ ಪತ್ನಿ ತವರುಮನೆ ಸೇರುತ್ತಿದ್ದಂತೆ ಸಂಧ್ಯಾ ಮದುವೆಯಾಗುವಂತೆ ಪೀಡಿಸಿದ್ದಾಳೆ. ಯಾರಿಗೂ ಹೇಳಿದೆ ವಾಟೆಖಾನ್ ಗ್ರಾಮದಲ್ಲಿರುವ ಜನಾರ್ಧನ್ ಮನೆಗೆ ಹೋಗಿ ಅಲ್ಲೇ ವಾಸವಾಗಿದ್ದಳು. ಈ ವಿಷಯ ಪೊಲೀಸ್ ಠಾಣೆವರೆಗೂ ಹೋಗುತ್ತಿದ್ದಂತೆ ವಾಪಸ್ ಬಂದಿದ್ದಳು. ಮನೆಯವರಿಗೆ ಹೇಳಿ ತನ್ನನ್ನು ಕರೆದುಕೊಂಡು ಹೋಗುವಂತೆ ಡಿಸೆಂಬರ್ 1ರ ಬೆಳಗ್ಗೆ ಜನಾರ್ಧನ್​​ಗೆ ಫೋನ್​​ ಮಾಡಿದ್ದಳು. ಒಂದು ‌ಕಡೆ ಹೆಂಡತಿ ಕಾಟ ಮತ್ತೊಂದು ಕಡೆ ‌ಅತ್ತೆ ಮಗಳ ಕಾಟಕ್ಕೆ‌‌ ಆಕ್ರೋಶಗೊಂಡ ಜನಾರ್ಧನ್, ಸಂಧ್ಯಾಳ ಕುತ್ತಿಗೆಯನ್ನ ತಾನು ‌ತಂದಿದ್ದ ಚಾಕುವಿನಿಂದ ಕೊಯ್ದು ತನ್ನ ವಾಟೆಖಾನ್ ಗ್ರಾಮದ‌ ಮನೆಯ ಹಿಂಭಾಗದ‌ ಕಾಡು ಸೇರಿದ್ದ.

ಸದ್ಯ ತನ್ನ ಪ್ರೇಯಸಿ ಅತ್ತೆ ಮಗಳನ್ನೇ ಕೊಂದ ಜನಾರ್ಧನ್ ಜೈಲು ಸೇರಿದ್ದಾನೆ. ಇವರಿಬ್ಬರ ಅನೈತಿಕ ಸಂಬಂಧಕ್ಕೆ ನಾಲ್ಕು ಕುಟುಂಬಗಳು ಕಣ್ಣೀರು ಹಾಕಿದರೆ, ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ತಮ್ಮನ್ನ ಸಾಕಿ ಬೆಳೆಸಬೇಕಿದ್ದ ಅಪ್ಪ ಜೈಲು ಸೇರಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಹಿಜಾಬ್ Vs ಕೇಸರಿ ಶಾಲು: ಮತ್ತೆ ಮುನ್ನೆಲೆಗೆ ಬಂದ ವಿವಾದ
ಹಿಜಾಬ್ Vs ಕೇಸರಿ ಶಾಲು: ಮತ್ತೆ ಮುನ್ನೆಲೆಗೆ ಬಂದ ವಿವಾದ