AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ: ಪತ್ನಿ ಹಾಗೂ ಅಪ್ರಾಪ್ತ ಮಗಳ ಹತ್ಯೆಗೆ ಯತ್ನ, ವ್ಯಕ್ತಿಯ ಬಂಧನ

ಪತ್ನಿ ಹಾಗೂ ಅಪ್ರಾಪ್ತ ಮಗಳ ಹತ್ಯೆ(Murder)ಗೆ ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ದಹಿಸರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹನುಮಂತ್ ಸೋನ್ವಾಲ್ ಎಂಬುವವರು 14 ವರ್ಷದ ಮಗಳು ಪ್ರಿಯಾಂಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯ ಎಷ್ಟು ಆಳವಾಗಿತ್ತೆಂದರೆ ಕುತ್ತಿಗೆಗೆ ಐದು ಹೊಲಿಗೆಗಳನ್ನು ಹಾಕಲಾಗಿದೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಮುಂಬೈ: ಪತ್ನಿ ಹಾಗೂ ಅಪ್ರಾಪ್ತ ಮಗಳ ಹತ್ಯೆಗೆ ಯತ್ನ, ವ್ಯಕ್ತಿಯ ಬಂಧನ
ಬಂಧನ
ನಯನಾ ರಾಜೀವ್
|

Updated on: Dec 02, 2025 | 1:03 PM

Share

ಮುಂಬೈ, ಡಿಸೆಂಬರ್ 02: ಪತ್ನಿ ಹಾಗೂ ಅಪ್ರಾಪ್ತ ಮಗಳ ಹತ್ಯೆ(Murder)ಗೆ ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ದಹಿಸರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹನುಮಂತ್ ಸೋನ್ವಾಲ್ ಎಂಬುವವರು 14 ವರ್ಷದ ಮಗಳು ಪ್ರಿಯಾಂಶಿ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯ ಎಷ್ಟು ಆಳವಾಗಿತ್ತೆಂದರೆ ಕುತ್ತಿಗೆಗೆ ಐದು ಹೊಲಿಗೆಗಳನ್ನು ಹಾಕಲಾಗಿದೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸೋನ್ವಾಲ್‌ನನ್ನು ಡಿಸೆಂಬರ್ 3 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಿಯಾಂಶಿ ತನ್ನ ಹೆತ್ತವರಾದ ರಾಜಶ್ರೀ ಮತ್ತು ಹನುಮಂತ್ ಜೊತೆ ದಹಿಸರ್‌ನಲ್ಲಿ ವಾಸವಿದ್ದಾಳೆ.ರಾಜಶ್ರೀ ವಜ್ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸೋನ್ವಾಲ್ ಕೀಟ ನಿಯಂತ್ರಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.ನಿರಂತರ ಕೌಟುಂಬಿಕ ಹಿಂಸೆ ಮತ್ತು ಕಿರುಕುಳದಿಂದಾಗಿ ರಾಜಶ್ರೀ ಈಗಾಗಲೇ ಬಾಂದ್ರಾ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರು .

ತನ್ನ ತಂದೆ ಹೆಚ್ಚಾಗಿ ತನ್ನ ತಾಯಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು, ಕುಡಿದಾಗ ಅವರು ಮನುಷ್ಯರೇ ಆಗಿರುತ್ತಿರಲಿಲ್ಲ. ಶನಿವಾರ, ರಾಜಶ್ರೀ ಮತ್ತು ಪ್ರಿಯಾಂಶಿ ಹುಟ್ಟುಹಬ್ಬವನ್ನು ಆಚರಿಸಲು ರೆಸ್ಟೋರೆಂಟ್​ಗೆ ತೆರಳಿದ್ದರು. ಸೋನ್ವಾಲ್ ಅವರನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಅವರಿಬ್ಬರು ಹಿಂದಿರುಗಿದ ಬಳಿಕ ನಿಂದಿಸಿದ್ದಾರೆ.ವಿಚ್ಛೇದನದ ಕುರಿತು ವಕೀಲರನ್ನು ಸಂಪರ್ಕಿಸಲು ರಾಜಶ್ರೀ ನಲಸೋಪಾರಕ್ಕೆ ಹೋದರು.

ಮತ್ತಷ್ಟು ಓದಿ: ತಾಯಿ ಇಲ್ಲದ 15 ವರ್ಷದ ಬಾಲಕಿಯ ಬರ್ಬರ ಹತ್ಯೆ: ದ್ವೇಷದ ಕಥೆ ಬಿಚ್ಚಿಟ್ಟ SP

ಅವರು ಮನೆಗೆ ಹಿಂದಿರುಗಿದಾಗ, ಮತ್ತೊಂದು ಬಿಸಿ ವಾಗ್ವಾದ ನಡೆಯಿತು. ಘರ್ಷಣೆಯ ಸಮಯದಲ್ಲಿ, ರಾಜಶ್ರೀ ಅವರು ತಮ್ಮ ಮನೆಯನ್ನು ಮಾರಿ ಪ್ರಿಯಾಂಶಿಯೊಂದಿಗೆ ಪುಣೆಗೆ ಸ್ಥಳಾಂತರಗೊಳ್ಳಲು ಉದ್ದೇಶಿಸಿರುವುದಾಗಿ ಸೋನ್ವಾಲ್‌ಗೆ ತಿಳಿಸಿರುವುದಾಗಿ ವರದಿಯಾಗಿದೆ.

ರಾತ್ರಿ 10 ಗಂಟೆ ಸುಮಾರಿಗೆ ಸೋನ್ವಾಲ್ ಮನೆಯಿಂದ ಹೊರಗೆಹೋಗಿದ್ದರು. ನಂತರ ತಾಯಿ ಮತ್ತು ಮಗಳು ಮಲಗಲು ಹೋದರು. ಮಧ್ಯರಾತ್ರಿಯ ಸುಮಾರಿಗೆ ಪ್ರಿಯಾಂಶಿ ಇದ್ದಕ್ಕಿದ್ದಂತೆ ತೀವ್ರ ನೋವಿನಿಂದ ಎಚ್ಚರಗೊಂಡಳು ಮತ್ತು ಅವಳ ಕುತ್ತಿಗೆಯಿಂದ ರಕ್ತಸ್ರಾವವಾಗುವುದನ್ನು ಗಮನಿಸಿದಳು.ಘಾತಕ್ಕೊಳಗಾದ ಅವಳು, ತನ್ನ ತಂದೆ ಬ್ಲೇಡ್ ಹಿಡಿದುಕೊಂಡು ತನ್ನ ತಾಯಿಯ ಬಳಿ ನಿಂತಿರುವುದನ್ನು ನೋಡಿ ಭಯಗೊಂಡಿದ್ದಳು.

ಕೂಡಲೇ ತನ್ನ ತಾಯಿಯನ್ನು ಎಚ್ಚರಗೊಳಿಸಿದ್ದಳು. ಪ್ರಿಯಾಂಶಿಯನ್ನು ಚಿಕಿತ್ಸೆಗಾಗಿ ಶತಾಬ್ದಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಪರೀಕ್ಷೆಯ ನಂತರ, ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡರು, ಇದು ಸೋನ್ವಾಲ್ ವಿರುದ್ಧದ ಪ್ರಕರಣಕ್ಕೆ ಆಧಾರವಾಗಿದೆ.

ನಂತರ ಅಧಿಕಾರಿಗಳು ಆತನನ್ನು ಆ ಸ್ಥಳದಿಂದಲೇ ಬಂಧಿಸಿದ್ದಾರೆ. ದಹಿಸರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸೆರ್ಜೆರಾವ್ ಪಾಟೀಲ್, ಆರೋಪಿಯ ವಿರುದ್ಧ ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್