ಉಸಿರಾಟದ ಸಮಸ್ಯೆ, ಕೊರೊನಾದಿಂದ ಬಿಹಾರದಲ್ಲಿ ನಾಲ್ವರು ಮಕ್ಕಳ ಸಾವು

|

Updated on: May 31, 2021 | 11:34 AM

Bihar Darbhanga Medical College: ಒಂದು ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಉಳಿದ ಮೂವರು ಮಕ್ಕಳಿಗೆ ಕೊರೊನಾ ನೆಗೆಟಿವ್ ಇತ್ತು. ನಾಲ್ವರೂ ಮಕ್ಕಳಿಗೆ ನ್ಯುಮೋನಿಯಾ ಲಕ್ಷಣ ಸಹ ಇತ್ತು. ಮೊದಲು, ಉಸಿರಾಟ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಉಸಿರಾಟದ ಸಮಸ್ಯೆ, ಕೊರೊನಾದಿಂದ ಬಿಹಾರದಲ್ಲಿ ನಾಲ್ವರು ಮಕ್ಕಳ ಸಾವು
ಉಸಿರಾಟದ ಸಮಸ್ಯೆ, ಕೊರೊನಾದಿಂದ ಬಿಹಾರದಲ್ಲಿ ನಾಲ್ವರು ಮಕ್ಕಳ ಸಾವು
Follow us on

ಬಿಹಾರ: ರಾಜ್ಯದ ಉತ್ತರ ಭಾಗದಲ್ಲಿರುವ ಅತ್ಯಂತ ದೊಡ್ಡ ದರ್ಭಂಗಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ನಾಲ್ವರು ಮಕ್ಕಳು ಸಾವಿಗೀಡಾಗಿದ್ದಾರೆ. ಬಿಹಾರದ DMCHನಲ್ಲಿ ಕಳೆದ 24 ಗಂಟೆಯಲ್ಲಿ ಈ ನಾಲ್ವರ ಸಾವು ಸಂಭವಿಸಿದೆ. ಅದರಲ್ಲಿ ಎರಡೂವರೆ ವರ್ಷದ ಒಂದು ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಉಳಿದ ಮೂವರು ಮಕ್ಕಳಿಗೆ ಕೊರೊನಾ ನೆಗೆಟಿವ್ ಇತ್ತು. ನಾಲ್ವರೂ ಮಕ್ಕಳಿಗೆ ನ್ಯುಮೋನಿಯಾ ಲಕ್ಷಣ ಸಹ ಇತ್ತು. ಮೊದಲು, ಉಸಿರಾಟ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಿಹಾರದ DMCHನಲ್ಲಿ ಕಳೆದ 24 ಗಂಟೆಯಲ್ಲಿ ಈ ನಾಲ್ವರ ಸಾವು ಸಂಭವಿಸಿದೆ. ಅದರಲ್ಲಿ ಒಂದು ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಉಳಿದ ಮೂವರು ಮಕ್ಕಳಿಗೆ ಕೊರೊನಾ ನೆಗೆಟಿವ್ ಇತ್ತು ಎಂದು ಎಎನ್​ಐ ಸುದ್ದಿ ಸಂಸ್ಥೆ ಟ್ವೀಟ್​ ಮಾಡಿ ಹೇಳಿದೆ. ಮೃತಪಟ್ಟ ಎಲ್ಲ ಮಕ್ಕಳ ದೇಹಗಳನ್ನು ಕೊರೊನಾ ಮಾರ್ಗಸೂಚಿಯಂತೆ ಅವರ ಪೋಷಕರಿಗೆ ಒಪ್ಪಿಸಿ, ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಆಸ್ಪತ್ರೆ ಮೂಗಳು ಹೇಳಿವೆ.

ಈ ಮಧ್ಯೆ ಬಿಹಾರದಲ್ಲಿ ನಿನ್ನೆ ಭಾನುವಾರ ಸುಮಾರು 1,500 ಮಂದಿಗೆ ಕೊರೊನಾ ತಗುಲಿದೆ. 52 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ರಅಜ್ಯದಲ್ಲಿ ಇದುವರೆಗೂ 7ಲಕ್ಷ ಮಂದಿಗೆ ಕೊರೊನಾ ಸೋಂಕು ಬಂದಿದ್ದು, ಅವರಲ್ಲಿ 5104 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅವರಲ್ಲಿ 6.82 ಲಕ್ಷ ಮಂದಿ ಗುಣಮುಖರಾಗಿದ್ದು, ಸಾವಿನ ಪ್ರಮಾಣವೂ ಕುಗ್ಗುತ್ತಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

(Four children die in Bihar Darbhanga Medical College experiencing breathlessness and pneumonia)

ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ; ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆ

Published On - 11:17 am, Mon, 31 May 21