Punjab: ಪಂಜಾಬ್​​ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ, ನಾಲ್ಕು ಸಾವು

ಪಂಜಾಬ್​​ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ ನಡೆದಿದೆ ಎಂದು ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್ ತಿಳಿಸಿದೆ.

ಪಂಜಾಬ್: ಇಂದು (ಏ.12) ಬೆಳಗ್ಗೆ ಪಂಜಾಬ್​​ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ ನಡೆದಿದೆ ಎಂದು ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್ ತಿಳಿಸಿದೆ. ಇದೀಗ ಈ ಪ್ರದೇಶದಲ್ಲಿ ತಂಡಗಳು ಸಕ್ರಿಯಗೊಂಡು ತ್ವರಿತ ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಈ ಪ್ರದೇಶವನ್ನು ಸುತ್ತುವರಿದ ಮತ್ತು ಕೆಲವೊಂದು ಕಡೆ ನಿರ್ಬಂಧವೇರಿದ್ದಾರೆ. ಹಂತಕರ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿವೆ.

ಮುಂಜಾನೆ ವೇಳೆ ಬಟಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ಈಗಾಗಲೇ ಸ್ಟೇಷನ್ ಕ್ವಿಕ್ ರಿಯಾಕ್ಷನ್ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಬಟಿಂಡಾದ ಹಿರಿಯ ಪೊಲೀಸ್ ಅಧೀಕ್ಷಕ ಜಿಎಸ್ ಖುರಾನಾ ಅವರು ನೀಡಿರುವ ಹೇಳಿಕೆಯ ಪ್ರಕಾರ ಪೊಲೀಸ್ ತಂಡವು ಸೇನಾ ಠಾಣೆಯ ಹೊರಗೆ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ, ಹಂತಕರನ್ನು ಠಾಣೆಯ ಒಳಗೆ ಬರದಂತೆ ತಡೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದು ಭಯೋತ್ಪಾದಕ ದಾಳಿಯಾಗಿ ಕಂಡುಬರುತ್ತಿಲ್ಲ. ಇದು ಆಂತರಿಕ ವಿಷಯ ಆಗಿರಬಹುದು ಎಂದು ಅವರು ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಬಟಿಂಡಾ ಮಿಲಿಟರಿ ನಿಲ್ದಾಣದ ಗುಂಡಿನ ಘಟನೆಯ ಕುರಿತು  ಮಾಹಿತಿ ನೀಡಲಿದ್ದಾರೆ.

Published On - 9:58 am, Wed, 12 April 23