AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ಹಿಂದುತ್ವವನ್ನು ಎಂದೂ ನಂಬುವುದಿಲ್ಲ, ಕೇಸರಿ ಪಕ್ಷವು ರಾಜ್ಯದಲ್ಲಿ ಗಲಭೆಯನ್ನು ಪ್ರಚೋದಿಸುತ್ತಿದೆ: ಆದಿತ್ಯ ಠಾಕ್ರೆ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ(Aaditya Thackeray)  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ ಆಡಳಿತಾರೂಢ ಶಿವಸೇನೆಯ ಮಿತ್ರಪಕ್ಷವು ರಾಜ್ಯದಲ್ಲಿ ಗಲಭೆಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಹಿಂದುತ್ವವನ್ನು ಎಂದೂ ನಂಬುವುದಿಲ್ಲ, ಕೇಸರಿ ಪಕ್ಷವು ರಾಜ್ಯದಲ್ಲಿ ಗಲಭೆಯನ್ನು ಪ್ರಚೋದಿಸುತ್ತಿದೆ: ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ
ನಯನಾ ರಾಜೀವ್
|

Updated on: Apr 12, 2023 | 8:47 AM

Share

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ(Aaditya Thackeray)  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೂ ಆಡಳಿತಾರೂಢ ಶಿವಸೇನೆಯ ಮಿತ್ರಪಕ್ಷವು ರಾಜ್ಯದಲ್ಲಿ ಗಲಭೆಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿಲ್ಲ ಎಂದರು.

ಬಿಜೆಪಿಯ ಹಿಂದುತ್ವದ ಬಗ್ಗೆ ನಮಗೆ ನಂಬಿಕೆ ಇಲ್ಲ. ಕೇಂದ್ರ ಸರ್ಕಾರದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ನೀವು ಭಾವಿಸಿದರೆ ಅದು ತಪ್ಪು, ಸುಪ್ರೀಂ ಕೋರ್ಟ್ ತೀರ್ಪು ನೀಡಿದೆಯೇ ಹೊರತು ಕೇಂದ್ರವಲ್ಲ ಎಂದು ಅವರು ಹೇಳಿದರು. 2014ರಲ್ಲಿ ಅಂದಿನ ಶಿವಸೇನೆಗೆ ಬಿಜೆಪಿ ಬೆನ್ನಿಗೆ ಚೂರಿ ಹಾಕಿತ್ತು ಎಂದು ಆರೋಪಿಸಿದರು.

2014 ರಲ್ಲಿ ನಾವು ಕೂಡ ಹಿಂದುವೇ ಆಗಿದ್ದೆವು ಆದರೂ ಬಿಜೆಪಿ ಶಿವಸೇನೆಯ ಬೆನ್ನಿಗೆ ಚೂರಿ ಹಾಕಿತ್ತು. ಈಗ ರಾಜ್ಯದಲ್ಲಿ ಗಲಭೆಯನ್ನು ಸೃಷ್ಟಿಸಲು ನೋಡುತ್ತಿದೆ. ಕಾಶ್ಮೀರಿ ಪಂಡಿತರು ಹಿಂದೂಗಳಲ್ಲವೇ?, ಆದರೆ ಕಾಶ್ಮೀರಿ ಪಂಡಿತರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ಮಾತನ್ನು ಯಾರೂ ಆಡುತ್ತಿಲ್ಲ.

ಮತ್ತಷ್ಟು ಓದಿ: ಆದಿತ್ಯ ಠಾಕ್ರೆ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ; ಇದು ಸಂಚು ಎಂದು ಆರೋಪಿಸಿದ ಶಿವಸೇನಾ ನಾಯಕ

ನನ್ನ ಅಜ್ಜನ ಸಿದ್ಧಾಂತದ ಬಗ್ಗೆ ಬಿಜೆಪಿ ತುಂಬಾ ಎಚ್ಚರಿಕೆ ವಹಿಸಿದ್ದರೆ, ಅವರು ನನ್ನ ತಾತ ರಚಿಸಿದ ಪಕ್ಷವನ್ನು ನಾಶಮಾಡಲು ಪ್ರಯತ್ನಿಸುತ್ತಿರಲಿಲ್ಲ ಎಂದು ಠಾಕ್ರೆ ಹೇಳಿದರು.

ಆದಿತ್ಯ ಠಾಕ್ರೆ ಹೈದರಾಬಾದ್‌ಗೆ ಒಂದು ದಿನದ ಭೇಟಿಯಲ್ಲಿದ್ದರು ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರ ಜೊತೆಗಿದ್ದರು. ಇದಕ್ಕೂ ಮುನ್ನ ಅವರು ಟಿ-ಹಬ್‌ನಲ್ಲಿ ತೆಲಂಗಾಣ ಸಚಿವ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಕೆಟಿ ರಾಮರಾವ್ ಅವರನ್ನು ಭೇಟಿಯಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ