ಹೈದರಾಬಾದ್: ಆತ ಜನರಿಗೆ ಬುದ್ಧಿ ಹೇಳಬೇಕಾದವನು. ಆದ್ರೆ ಆತನೇ ಮಹಿಳೆಯರನ್ನ ವಂಚಿಸಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಮದುವೆ ಮಾಡಿಕೊಂಡಿದ್ದ. ಇದೀಗ ಆತನ ವಿರುದ್ಧ ಆತನ ಹೆಂಡತಿಯರು ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇಷ್ಟೆಲ್ಲಾ ನಡೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ.
ಬುದ್ಧಿ ಹೇಳಬೇಕಾದ ವ್ಯಕ್ತಿಯೇ ತಪ್ಪು ಮಾಡಿದ!
ಮಹೇಶ ಮೊದಲಿಗೆ 2014ರಲ್ಲಿ ಮೋತ ಮಂಡಲದ ನಿವಾಸಿಯಾಗಿದ್ದ ಮಹಿಳೆಯನ್ನ ಮದುವೆಯಾಗಿದ್ದನಂತೆ. 1 ವರ್ಷ ಕಳೆಯುವುದರ ಒಳಗಾಗಿ ಆಕೆಯೊಂದಿಗೆ ಕಿತ್ತಾಡಿಕೊಂಡು ವಿವಾಹ ವಿಚ್ಚೇದನ ಪಡೆದುಕೊಂಡಿದ್ದಾನೆ. ಮತ್ತೆ 2016ರಲ್ಲಿ 2ನೇ ವಿವಾಹವಾಗಿದ್ದ, 2018ರಲ್ಲಿ 3ನೇ ಮದುವೆಯಾಗಿದ್ದ ಮಲ್ಲಯ್ಯ ಅಕ್ಟೋಬರ್ 29ರಂದು 4ನೇ ಮದುವೆಯಾಗಿ ಲಾಕ್ ಆಗಿದ್ದಾನೆ. ಈತನ ವಿರುದ್ಧ ದೂರು ನೀಡಿದ್ರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತನ ಜೊತೆ ಸಪ್ತಪದಿ ತುಳಿದಿದ್ದ ಮಹಿಳೆಯರು ದಾರಿ ಕಾಣದೆ ಪರದಾಡ್ತಿದ್ದಾರೆ.
ಒಟ್ನಲ್ಲಿ ಈಗ ತೆಲಂಗಾಣದಲ್ಲಿ ಪೊಲೀಸಪ್ಪನ ಮದುವೆ ಪುರಾಣದ ಬಗ್ಗೆಯೇ ಮಾತು. ಇಷ್ಟೆಲ್ಲಾ ಆರೋಪಗಳು ಕೇಳಿಬಂದಿದ್ದರೂ ಕಾನ್ಸ್ಟೇಬಲ್ ವಿರುದ್ಧ ದೂರು ಕೂಡ ದಾಖಲಾಗಿಲ್ಲ ಹಾಗೂ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಬೇಕಿದೆ. ಈ ಮೂಲವಾದ್ರು ನೊಂದವರಿಗೆ ನ್ಯಾಯ ಕೊಡಿಸಬೇಕಿದೆ. ಇಲ್ಲವಾದ್ರೆ ಈತನಿಗೆ ಮದುವೆ ಆಗೋದೆ ಕೆಲಸವಾಗಿಬಿಟ್ರೂ ಅಚ್ಚರಿಯಿಲ್ಲ.