ಮುಂಬೈ: ಗುಜರಾತ್‌ನಲ್ಲಿ (Gujarat) ಎಮ್ಮೆಗಳಿಗೆ ಡಿಕ್ಕಿ ಹೊಡೆದು ಹಾನಿಗೊಳಗಾದ ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಮುಂಭಾಗವನ್ನು ರೈಲ್ವೆ ಅಧಿಕಾರಿಗಳು ಬದಲಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ನಡೆದ 24 ಗಂಟೆಗಳಲ್ಲಿ ವಂದೇ ಭಾರತ್ ರೈಲನ್ನು ದುರಸ್ತಿ ಮಾಡಲಾಗಿದೆ. ಹೊಸದಾಗಿ ಪ್ರಾರಂಭಿಸಲಾದ ಮುಂಬೈ ಸೆಂಟ್ರಲ್-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಾಂಧಿನಗರಕ್ಕೆ ತೆರಳುತ್ತಿದ್ದಾಗ ಅಹಮದಾಬಾದ್ ಬಳಿ ಗುರುವಾರ ಬೆಳಿಗ್ಗೆ 11:15 ರ ಸುಮಾರಿಗೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಮುಂಭಾಗಕ್ಕೆ ಹಾನಿಯಾಗಿತ್ತು. ಜಾನುವಾರುಗಳಿಗೆ ಗುದ್ದಿದ ನಂತರ ರೈಲಿನ ಡ್ರೈವರ್ ಕೋಚ್‌ನ ಮುಂಭಾಗದ ಕೋನ್ ಕವರ್ ಮತ್ತು ಅದರ ಮೌಂಟಿಂಗ್ ಬ್ರಾಕೆಟ್‌ಗಳಿಗೆ ಹಾನಿಯಾಗಿದೆ. ಆದಾಗ್ಯೂ, ರೈಲಿನ ಪ್ರಮುಖ ಭಾಗಗಳಿಗೆ ಏನೂ ಹಾನಿಯಾಗಿಲ್ಲ. ಹಾನಿಗೊಳಗಾದ ಮುಂಭಾಗವನ್ನು ಮುಂಬೈ ಸೆಂಟ್ರಲ್‌ನಲ್ಲಿರುವ ಕೋಚ್ ಕೇರ್ ಸೆಂಟರ್‌ನಲ್ಲಿ ಬದಲಾಯಿಸಲಾಯಿತು ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ. ರೈಲಿನ ಮುಂಭಾಗವನ್ನು FRP (ಫೈಬರ್ ರಿಇನ್ಫೋರ್ಸ್ಡ್ ಪ್ಲಾಸ್ಟಿಕ್) ನಿಂದ ಮಾಡಲಾಗಿದೆ.
ಅಹಮದಾಬಾದ್‌ನ ವತ್ವಾ ಮತ್ತು ಮಣಿನಗರ ಪ್ರದೇಶಗಳ ನಡುವೆ ಈ ಘಟನೆ ಸಂಭವಿಸಿದೆ. ಘಟನೆ ಸಂಭವಿಸಿದ ನಂತರವೂ ರೈಲು ಗುರುವಾರ ಪ್ಯಾನೆಲ್ ಇಲ್ಲದೆ ಗಾಂಧಿನಗರ ಕ್ಯಾಪಿಟಲ್ ಸ್ಟೇಷನ್ಗೆ ತಲುಪಿ ಅಲ್ಲಿಂದ ಮುಂಬೈ ಸೆಂಟ್ರಲ್‌ಗೆ ಹಿಂತಿರುಗಿತು.
#UPDATE | Nose Cone Cover of the front coach was replaced with a new one in Mumbai Central depot during the maintenance & the train is put back into service without any extra downtime. We’re taking all actions to prevent such types of incidents in future: Western Railway CPRO pic.twitter.com/gPp62pUbUA
— ANI (@ANI) October 7, 2022
ಮುಂಭಾಗದ ಕವರ್ ಏನೇ ಆದರೂ ಇತರ ಭಾಗಗಳಿಗೆ ಯಾವುದೇ ಹಾನಿಯಾಗದಂತೆ ತಡೆದುಕೊಳ್ಳು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಇದನ್ನು ಬದಲಾಯಿಸಬಹುದಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
ಈ ರೀತಿಯ ಮುಂಭಾಗದ ಕವರ್ಗಳು ಹೆಚ್ಚುವರಿಯಾಗಿ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.
ಹಾನಿಗೊಳಗಾದ ಭಾಗವನ್ನು ಮುಂಬೈ ಸೆಂಟ್ರಲ್ ಡಿಪೋದಲ್ಲಿ ಬದಲಾಯಿಸಲಾಗಿದೆ. ಯಾವುದೇ ಹೆಚ್ಚುವರಿ ಸಮಯ ವ್ಯಯಿಸದೆ ರೈಲು ಮತ್ತೆ ಸೇವೆ ಆರಂಭಿಸಿದೆ . ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆಯಾಗದಂತೆ ರೈಲು ಇಂದು ಮುಂಬೈನಿಂದ ಹೊರಟಿದೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಪಶ್ಚಿಮ ರೈಲ್ವೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. ವಂದೇ ಭಾರತ್ ಸರಣಿಯ ಮೂರನೇ ಸೇವೆಯಾದ ಸ್ವದೇಶಿ ವಿನ್ಯಾಸದ ಸೆಮಿ-ಹೈಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30 ರಂದು ಗಾಂಧಿನಗರ ಕ್ಯಾಪಿಟಲ್‌ನಿಂದ ಚಾಲನೆ ನೀಡಿದ್ದರು.
ಇದನ್ನೂ ಓದಿ: Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ, ಇಂಜಿನ್‌ನ ಮುಂಭಾಗಕ್ಕೆ ಹಾನಿ
Published On - 12:57 pm, Fri, 7 October 22