ಕೊರೊನಾ ಆರ್ಭಟದ ನಡುವೆ ಸದ್ದಿಲ್ಲದೆ ಏರ್ತಿದೆ ಪೆಟ್ರೋಲ್, ಡೀಸೆಲ್ ದರ: ಈಗ ಎಷ್ಟಿದೆ ​ ರೇಟು?

| Updated By: ganapathi bhat

Updated on: Apr 06, 2022 | 8:07 PM

ದೇಶಾದ್ಯಂತ ಸತತ ಐದು ದಿನಗಳಿಂದ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಮತ್ತಷ್ಟು ಹೊರೆಯಾಗಲಿದೆ.

ಕೊರೊನಾ ಆರ್ಭಟದ ನಡುವೆ ಸದ್ದಿಲ್ಲದೆ ಏರ್ತಿದೆ ಪೆಟ್ರೋಲ್, ಡೀಸೆಲ್ ದರ: ಈಗ ಎಷ್ಟಿದೆ ​ ರೇಟು?
ಇಂಧನ ದರ ಏರಿಕೆ
Follow us on

ಬೆಂಗಳೂರು:ಕೊವಿಡ್ ಆರ್ಭಟದ ನಡುವೆ ಜನಸಾಮಾನ್ಯರಿಗೆ ಇದೀಗ ಇಂಧನ ಬೆಲೆ ಏರಿಕೆ ಮತ್ತೊಂದು ಆಘಾತ ಉಂಟುಮಾಡಿದೆ. ದೇಶಾದ್ಯಂತ ಸತತ ಐದು ದಿನಗಳಿಂದ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಮತ್ತಷ್ಟು ಹೊರೆಯಾಗಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಐದನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗಿರುವ ಏರಿಕೆಯಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಸಹ ಇಂಧನ ದರ ಹೆಚ್ಚಿಸಲಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ
ಇನ್ನು ನಗರದಲ್ಲಿ, ಪೆಟ್ರೋಲ್ ದರ ಇಂದು (ನವೆಬರ್ 24) 84.31 ರೂಪಾಯಿ ಆಗಿದ್ದು, ಕಳೆದ 5 ದಿನದಲ್ಲಿ 62 ಪೈಸೆ ಏರಿಕೆ ಕಂಡಿದೆ. ಇತ್ತ, ಡೀಸೆಲ್ ದರ ಇಂದು (ನವೆಬರ್ 24) 75.7 ರೂಪಾಯಿ ಆಗಿದ್ದು, ಕಳೆದ 5 ದಿನದಲ್ಲಿ1 ರೂ. 7 ಪೈಸೆ ಹೆಚ್ಚಳವಾಗಿದೆ.

ಭಾರತದ ಪ್ರಮಖ ನಗರಗಳ ಇಂಧನ ದರ
ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 81.59 ರೂ. ಮತ್ತು ಡೀಸೆಲ್ ದರ 71.41 ರೂ.ಗಳಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 88.29 ರೂ. ಮತ್ತು ಡೀಸೆಲ್ ದರ 77.9 ರೂ.ಗಳಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 84.64 ರೂ. ಮತ್ತು ಡೀಸೆಲ್ ದರ 76.88 ರೂ. ಗಳಾಗಿವೆ. ಕಳೆದ 48 ದಿನಗಳಿಂದ ಸಮಸ್ಥಿತಿ ಕಾಯ್ದುಕೊಂಡಿದ್ದ ಇಂಧನ ದರವು ನವಂಬರ್ 20ರಿಂದ ಪ್ರತಿನಿತ್ಯ ಏರಿಕೆ ಕಾಣುತ್ತಿದೆ.

Published On - 6:47 pm, Tue, 24 November 20