Mehul Choksi: ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಡೊಮಿನಿಕಾದಲ್ಲಿ ಅರೆಸ್ಟ್​; ಕ್ಯೂಬಾಕ್ಕೆ ಹೊರಡಲು ನಡೆದಿತ್ತು ಸಿದ್ಧತೆ

ಮೆಹುಲ್ ಚೋಸ್ಕಿಯನ್ನು ಕಸ್ಟಡಿಗೆ ಪಡೆಯುವ ಸಂಬಂಧ ಆಂಟಿಗೋವಾ ಪೊಲೀಸರು ಡೊಮಿನಿಕಾ ಪೊಲೀಸರನ್ನು ಸಂಪರ್ಕಿಸಿದ್ದಾರೆ.

Mehul Choksi: ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಡೊಮಿನಿಕಾದಲ್ಲಿ ಅರೆಸ್ಟ್​; ಕ್ಯೂಬಾಕ್ಕೆ ಹೊರಡಲು ನಡೆದಿತ್ತು ಸಿದ್ಧತೆ
ಮೆಹುಲ್ ಚೋಸ್ಕಿ

Updated on: May 26, 2021 | 11:17 PM

ಆಂಟಿಗುವಾ​: ದೇಶ ಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಮೊನ್ನೆ ಆಂಟಿಗೋವಾದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿತ್ತು. ಈತನೀಗ ಕೆರೆಬಿಯನ್​ ಸೀಯಲ್ಲಿರುವ ಸಣ್ಣ ಐಸ್​ಲ್ಯಾಂಡ್​ ದೇಶ ಡೊಮಿನಿಕಾದಲ್ಲಿ ಬಂಧಿತನಾಗಿದ್ದಾನೆ ಎಂದು ವರದಿಯಾಗಿದೆ. ಡೊಮಿನಿಕಾದ ಪೊಲೀಸರೇ ಆತನನ್ನ ಬಂಧಿಸಿದ್ದಾರೆ.
ಮೆಹುಲ್ ಚೋಸ್ಕಿಯನ್ನು ಕಸ್ಟಡಿಗೆ ಪಡೆಯುವ ಸಂಬಂಧ ಆಂಟಿಗೋವಾ ಪೊಲೀಸರು ಡೊಮಿನಿಕಾ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆಂಟಿಗೋವಾದಿಂದ ಪರಾರಿಯಾಗಿದ್ದ ಮೆಹುಲ್​ ಚೋಸ್ಕಿಗೆ ಇಂಟರ್​ಪೋಲ್​​ನಿಂದ ಯೆಲ್ಲೋ ನೋಟಿಸ್​ ಜಾರಿ ಮಾಡಲಾಗಿತ್ತು. ಡೊಮಿನಿಕಾಗೆ ಪರಾರಿಯಾಗಿದ್ದ ಮೆಹುಲ್​ ಚೋಸ್ಕಿ ಅಲ್ಲಿಂದ ಕ್ಯೂಬಾಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

61 ವರ್ಷ ಪ್ರಾಯದ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧೀ ನೀರವ್​ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​​ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ. ಇಬ್ಬರು ವಿರುದ್ಧವೂ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದ್ದು, ಇಬ್ಬರೂ ಭಾರತಕ್ಕೆ ವಾಪಸಾಗಬೇಕಾಗಿದ್ದಾರೆ.

ವಿಯಾನ್ (WION) ಟಿವಿ ಮಾಧ್ಯಮದ ಜೊತೆ ಮೆಹುಲ್ ಚೋಸ್ಕಿ ಆಂಟಿಗೋವಾದಿಂದ ಪರಾರಿಯಾಗಿರುವ ವರದಿಗಳ ಬಗ್ಗೆ ಮಾತನಾಡಿರುವ ಆಂಟಿಗುವಾ ಪ್ರಧಾನಿ, ಸ್ವತಃ ಉದ್ಯಮಿ ಮತ್ತು ಬ್ಯಾಂಕರ್​ ಆಗಿದ್ದ ಗಷ್ಟನ್ ಬ್ರೌನ್ ಅವರು ​‘24 ಗಂಟೆಯಾದರೂ ಮೆಹುಲ್ ಚೋಸ್ಕಿ ಪತ್ತೆಯಾಗಿಲ್ಲ. ಹಾಗಾಗಿ ಆತನ ವಿರುದ್ಧ ಕಣ್ಮರೆಯಾಗಿರುವ ಬಗ್ಗೆ ಸ್ಥಳೀಯವಾಗಿ ಬಿತ್ರರಿಸಲಾಗಿದೆ. ಅದನ್ನ ಈಗ ಇಂಟರ್​ಪೋಲ್​ ಜೊತೆಗೂ ಹಂಚಿಕೊಳ್ಳಲಾಗಿದೆ. ಮೆಹುಲ್ ಚೋಸ್ಕಿ ವಿರುದ್ಧ ಸ್ಥಳೀಯ ಕೋರ್ಟ್​ಗಳಲ್ಲಿ 2 ವಿಷಯಗಳು ದಾಖಲಾಗಿವೆ: ಒಂದು ಆತನ ಪೌರತ್ವವನ್ನು ಹಿಂತೆಗೆದುಕೊಳ್ಳುವುದು, ಮತ್ತೊಂದು ಆತನನ್ನು ಭಾರತಕ್ಕೆ ಹಸ್ತಾಂತರಿಸುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ: ಕೋವಿಡ್-19 ಮೂರನೇ ಅಲೆ, ಬ್ಲ್ಯಾಕ್ ಫಂಗಸ್​ನಿಂದ ಮಕ್ಕಳ ರಕ್ಷಣೆ ಹೇಗೆನ್ನುವುದನ್ನು ತಜ್ಞರು ಇಲ್ಲಿ ವಿವರಿಸಿದ್ದಾರೆ

Published On - 11:15 pm, Wed, 26 May 21