Dal Lake: ಜಗತ್ತಿನ ಅತ್ಯಂತ ಸುಂದರ ಸರೋವರ ದಾಲ್ ಲೇಕ್ ಕುರಿತು ತಿಳಿಯಲೇಬೇಕಾದ ಮಾಹಿತಿ

|

Updated on: May 23, 2023 | 10:11 PM

ಭೂಮಿಯ ಮೇಲಿನ ಸ್ವರ್ಗ ಎಂದೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಶ್ರೀನಗರದ ದಾಲ್ ಸರೋವರದ ಪ್ರವಾಸಿಗರ ಕೇಂದ್ರ ಬಿಂದುವೂ ಆಗಿದೆ. ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ದಾಲ್ ಸರೋವರಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

Dal Lake: ಜಗತ್ತಿನ ಅತ್ಯಂತ ಸುಂದರ ಸರೋವರ ದಾಲ್ ಲೇಕ್ ಕುರಿತು ತಿಳಿಯಲೇಬೇಕಾದ ಮಾಹಿತಿ
ದಾಲ್ ಸರೋವರ
Follow us on

ಭೂಮಿಯ ಮೇಲಿನ ಸ್ವರ್ಗ ಎಂದೇ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಶ್ರೀನಗರದ ದಾಲ್ ಸರೋವರದ (Dal Lake) ಪ್ರವಾಸಿಗರ ಕೇಂದ್ರ ಬಿಂದುವೂ ಆಗಿದೆ. ಪ್ರಸ್ತುತ ಜಿ20 ಸಭೆ (G-20 Summit) ಕಾಶ್ಮೀರದಲ್ಲಿ (Kashmir) ನಡೆಯುತ್ತಿದೆ. ಜಿ20ಯ 17 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ದಾಲ್ ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಿದರು. ಶ್ರೀನಗರದಲ್ಲಿ ಜಿ 20 ಸಭೆಯು ಮೇ 24 ರವರೆಗೆ ನಡೆಯಲಿದೆ. ಹೀಗಾಗಿ ಸದ್ಯ ದಾಲ್ ಸರೋವರವು ವಿದೇಶಗಳ ಅತಿಥಿಗಳ ಆಕರ್ಷಣೆಯ ಕೇಂದ್ರವಾಗಿದೆ. ದಾಲ್ ಸರೋವರವು ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ವಿಶೇಷವಾಗಿ ಬೋಟ್‌ಹೌಸ್‌ಗಳಿಗೆ ಹೆಸರುವಾಸಿಯಾಗಿದೆ. ಅದರ ದಡದಲ್ಲಿ ಮೊಘಲ್ ಉದ್ಯಾನಗಳು ಮತ್ತು ಇತರ ಅನೇಕ ಉದ್ಯಾನಗಳಿದ್ದು, ಸರೋವರದ ಸೌಂದರ್ಯವನ್ನು ಹೆಚ್ಚಿಸುತ್ತಿವೆ. ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ದಾಲ್ ಸರೋವರಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ದಾಲ್ ಸರೋವರ ಹೇಗೆ ರೂಪುಗೊಂಡಿತು?

ದಾಲ್ ಸರೋವರ ರೂಪುಗೊಂಡ ಬಗ್ಗೆ ಹಲವು ಊಹೆಗಳಿವೆ. ಒಂದು ನಂಬಿಕೆಯ ಪ್ರಕಾರ, ಇದು ಹಿಮನದಿಯಾಗಿದ್ದು ಅದು ಕಾಲಾನಂತರದಲ್ಲಿ ಸರೋವರವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗಿದೆ. ಇನ್ನೊಂದು ಮಾಹಿತಿ ಪ್ರಕಾರ, ಖಾಬಿ ಝೀಲಂ ನದಿಯಲ್ಲಿ ಭೀಕರ ಪ್ರವಾಹದಿಂದಾಗಿ ದಾಲ್ ಸರೋವರವು ರೂಪುಗೊಂಡಿರಬಹುದು ಎಂದು ಹೇಳಲಾಗಿದೆ. ಆದಾಗ್ಯೂ, ಈ ಪ್ರಶ್ನೆಗೆ ಯಾವುದೇ ನಿರ್ದಿಷ್ಟ ಉತ್ತರವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ.

ದಾಲ್ ಸರೋವರ ಎಷ್ಟು ದೊಡ್ಡದಾಗಿದೆ?

ದಾಲ್ ಸರೋವರವು ಸುಮಾರು 18 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಇದರ ಅಗಲ ಸುಮಾರು 3.5 ಕಿಲೋಮೀಟರ್ ಮತ್ತು ಗರಿಷ್ಠ ಆಳ 20 ಅಡಿ. ದಾಲ್ ಸರೋವರವು ಬೋಡ್ ದಾಲ್, ನಾಗಿನ್, ಗಾಗ್ರಿಬಲ್ ಮತ್ತು ಲೋಕುತ್ ದಾಲ್ ಎಂಬ ನಾಲ್ಕು ಜಲಾನಯನ ಪ್ರದೇಶಗಳನ್ನು ಹೊಂದಿದೆ. ಮೊಘಲರ ಕಾಲದಲ್ಲಿ ನಿರ್ಮಿಸಲಾದ ಉದ್ಯಾನವನಗಳು ಮತ್ತು ಸುಂದರವಾದ ಉದ್ಯಾನವನಗಳು ಈ ಸರೋವರದ ಸೌಂದರ್ಯವನ್ನು ಹೆಚ್ಚಿಸಿವೆ.

ಸರೋವರಕ್ಕೆ ದಾಲ್ ಎಂದು ಏಕೆ ಹೆಸರಿಡಲಾಯಿತು?

ದಾಲ್ ಲೇಕ್ ಎಂಬ ಪದವು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಕಾಶ್ಮೀರಿ ಭಾಷೆಯಲ್ಲಿ ‘ದಳ’ ಎಂಬ ಪದದ ಅರ್ಥವೇ ಸರೋವರ. ಇದುವೇ ಅಪಭ್ರಂಶಗೊಂಡು ‘ದಾಲ್’ ಆಗಿದ್ದು ಕಾಲಾನಂತರದಲ್ಲಿ ಅದರ ಜತೆ ‘ಲೇಕ್’ ಪದವು ಸೇರಿಕೊಂಡಿತು. ನಂತರ ಅದು ‘ದಾಲ್ ಲೇಕ್’ ಆಯಿತು ಎನ್ನಲಾಗಿದೆ.

ದಾಲ್ ಸರೋವರವನ್ನು ಕಾಶ್ಮೀರದ ಕಿರೀಟದಲ್ಲಿರುವ ರತ್ನ ಅಥವಾ ಶ್ರೀನಗರದ ಆಭರಣ ಎಂದೂ ಕರೆಯಲಾಗುತ್ತದೆ. ಜುಲೈ-ಆಗಸ್ಟ್ ತಿಂಗಳಿನಲ್ಲಿ ಇಲ್ಲಿನ ಉದ್ಯಾನಗಳ ಸೌಂದರ್ಯ ಕಣ್ಮನ ಸೆಳೆಯುತ್ತದೆ.

ದಾಲ್ ಸರೋವರ ಏಕೆ ಪ್ರಸಿದ್ಧವಾಗಿದೆ?

ಈ ಸರೋವರವು ಪ್ರವಾಸೋದ್ಯಮ ಮತ್ತು ಮನರಂಜನೆಗೆ ಪ್ರಮುಖ ತಾಣವಾಗಿದೆ. ಪ್ರವಾಸೋದ್ಯಮವನ್ನು ಹೊರತುಪಡಿಸಿ, ಮೀನುಗಾರಿಕೆ ಇಲ್ಲಿ ಎರಡನೇ ದೊಡ್ಡ ವ್ಯಾಪಾರವಾಗಿದೆ. ಇದು ಸ್ಥಳೀಯ ಜನರ ಜೀವನೋಪಾಯಕ್ಕೆ ಆಧಾರವಾಗಿದೆ.

ದಾಲ್ ಸರೋವರದ ಪ್ರಮುಖ ಆಕರ್ಷಣೆ ಯಾವುದು?

ಬೋಟ್‌ಹೌಸ್‌ ದಾಲ್ ಸರೋವರದ ಪ್ರಮುಖ ಆಕರ್ಷಣೆಯಾಗದೆ. ಪ್ರವಾಸೋದ್ಯಮದ ದೃಷ್ಟಿಕೋನದಿಂದ, ದಾಲ್ ಸರೋವರದ ಇತರ ಪ್ರಮುಖ ಸ್ಥಳಗಳೆಂದರೆ, ಶಾಲಿಮಾರ್ ಬಾಗ್ ಮತ್ತು ನಿಶಾತ್ ಬಾಗ್ ಆಗಿವೆ. ಸಿಹಿ ನೀರಿನ ಬುಗ್ಗೆ ಮತ್ತು ಉದ್ಯಾನವನವು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಇಲ್ಲಿನ ಹಜರತ್ಬಾಲ್ ತೀರ್ಥಯಾತ್ರೆಯ ಹೊರತಾಗಿ, ದಾಲ್ ಸರೋವರದ ಮೇಲೆ ಮತ್ತೊಂದು ಜನಪ್ರಿಯ ಧಾರ್ಮಿಕ ಪ್ರವಾಸಿ ತಾಣವಿದೆ. ಅದು ಶಂಕರಾಚಾರ್ಯ ದೇವಸ್ಥಾನವಾಗಿದೆ. ಇದು ಪ್ರಾಚೀನ ಸಂರಚನೆಯ ದೇಗುಲವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Tue, 23 May 23