Kedarnath Yatra: ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ಬುಕಿಂಗ್ ಶುರು; ಇಲ್ಲಿದೆ ಪೂರ್ಣ ವಿವರ

ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ರೈಡ್ ಬುಕ್ಕಿಂಗ್ ಆರಂಭವಾಗಿದೆ. ಹೆಲಿಕಾಪ್ಟರ್ ಮೂಲಕ ಯಾತ್ರೆಗಾಗಿ ಐಆರ್​​ಸಿಟಿಸಿ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.

Kedarnath Yatra: ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ಬುಕಿಂಗ್ ಶುರು; ಇಲ್ಲಿದೆ ಪೂರ್ಣ ವಿವರ
ಕೇದಾರನಾಥ ದೇಗುಲ
Follow us
Ganapathi Sharma
|

Updated on: May 23, 2023 | 10:52 PM

ಕೇದಾರನಾಥ ಯಾತ್ರೆಗೆ (Kedarnath Yatra) ಹೆಲಿಕಾಪ್ಟರ್ ರೈಡ್ ಬುಕ್ಕಿಂಗ್ ಆರಂಭವಾಗಿದೆ. ಹೆಲಿಕಾಪ್ಟರ್ ಮೂಲಕ ಯಾತ್ರೆಗಾಗಿ ಐಆರ್​​ಸಿಟಿಸಿ (IRCTC) ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಬುಕಿಂಗ್‌ಗಾಗಿ ಪೋರ್ಟಲ್ ತೆರೆಯಲಾಗಿದೆ. ಪ್ರಯಾಣಿಕರು 2023 ಮೇ 28 ಮತ್ತು 2023 ರ ಜೂನ್ 15 ರ ನಡುವೆ ಹೆಲಿಕಾಪ್ಟರ್ ರೈಡ್ ಅನ್ನು ಬುಕ್ ಮಾಡಬಹುದು. ಹೆಲಿಕಾಪ್ಟರ್ ಸವಾರಿಗಾಗಿ ಸ್ಲಾಟ್‌ಗಳನ್ನು ವಿಸ್ತರಿಸಲಾಗಿದೆ. ಕೇದಾರನಾಥ ಧಾಮ ಹಿಂದೂಗಳ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಕೇದಾರನಾಥ ಧಾಮವು ಉತ್ತರಾಖಂಡದ ಗುಡ್ಡಗಾಡು ಪ್ರದೇಶದಲ್ಲಿ 12,000 ಅಡಿ ಎತ್ತರದಲ್ಲಿದೆ. ಕಷ್ಟಕರವಾದ ಭೂಪ್ರದೇಶವನ್ನು ತಲುಪಲು ಹೆಲಿಕಾಪ್ಟರ್ ಸುರಕ್ಷಿತ ಮಾರ್ಗವಾಗಿದೆ.

ಕೇದಾರನಾಥ ದೇವಸ್ಥಾನಕ್ಕೆ ರಸ್ತೆ ಇಲ್ಲ. ಸೋನ್‌ಪ್ರಯಾಗದಿಂದ ಭಕ್ತರು 18 ಕಿ.ಮೀ ನಡೆದುಕೊಂಡೇ ಏರಬೇಕು. ದೇವಸ್ಥಾನವನ್ನು ತಲುಪಲು ಅಗತ್ಯವಿರುವ ದೂರ ಮತ್ತು ಎತ್ತರದ ಕಾರಣ, ಕೆಲವೇ ಜನರು ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿತ್ತು. ಈ ಕಷ್ಟವನ್ನು ಕಂಡ ಉತ್ತರಾಖಂಡ ಸರ್ಕಾರ ದೇವಸ್ಥಾನಕ್ಕೆ ಹೋಗಲು ಹೆಲಿಕಾಪ್ಟರ್ ಸೇವೆ ಆರಂಭಿಸಿತು.

ಕೇದಾರನಾಥಕ್ಕೆ ಹೆಲಿಕಾಪ್ಟರ್​​ಗಳು ನಿಯಮಿತವಾಗಿ ಲಭ್ಯವಿವೆ. ಪವನ್ ಹನ್ಸ್, ಆರ್ಯನ್ ಏವಿಯೇಷನ್, ಪಿನಾಕಲ್ ಏರ್, ಹೆರಿಟೇಜ್ ಏವಿಯೇಷನ್‌ನಂತಹ ಅನೇಕ ವಿಮಾನಯಾನ ಸಂಸ್ಥೆಗಳು ಈ ಪ್ರದೇಶದಲ್ಲಿ ಸೀಟ್ ಆಧಾರದ ಮೇಲೆ ಸೇವೆ ಸಲ್ಲಿಸುತ್ತವೆ. ಅನೇಕ ಕಂಪನಿಗಳು 5-7 ಆಸನಗಳ ಹೆಲಿಕಾಪ್ಟರ್‌ಗಳನ್ನು ಬಳಸುತ್ತವೆ. ಇವುಗಳನ್ನು ಬಾಡಿಗೆಗೆ ಪಡೆಯಬಹುದು. ದೇವಾಲಯದ ಬಳಿ ಏಕಮುಖ ಮತ್ತು ರೌಂಡ್-ಟ್ರಿಪ್ ಸೇವೆಗಳಿಗೆ ಅವು ಲಭ್ಯವಿವೆ.

ಇದನ್ನೂ ಓದಿ: Dal Lake: ಜಗತ್ತಿನ ಅತ್ಯಂತ ಸುಂದರ ಸರೋವರ ದಾಲ್ ಲೇಕ್ ಕುರಿತು ತಿಳಿಯಲೇಬೇಕಾದ ಮಾಹಿತಿ

ಬುಕಿಂಗ್‌ಗಾಗಿ, ನೀವು ಮೊದಲು ಕೇದಾರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳಬೇಕು. ಇದರ ನಂತರ ಐಆರ್​ಸಿಟಿಸಿ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬೇಕಾಗುತ್ತದೆ. ಇದರ ನಂತರ ಲಾಗಿನ್ ಐಡಿಯನ್ನು ರಚಿಸಬೇಕು. ಲಾಗಿನ್ ಮಾಡಿದ ನಂತರ ಬಳಕೆದಾರರು ಹೆಲಿ ಆಪರೇಟರ್ ಕಂಪನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು, ಪ್ರಯಾಣಿಕರು ಪ್ರಯಾಣದ ದಿನಾಂಕ, ಸ್ಲಾಟ್ ಸಮಯವನ್ನು ಭರ್ತಿ ಮಾಡಬೇಕು. ಇದರೊಂದಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಮತ್ತು ಮಾಹಿತಿ ನೀಡಬೇಕು.

ಕೇದಾರನಾಥ ಧಾಮದಿಂದ ಒಂದು ದಿನದ ಪ್ರವಾಸಕ್ಕೆ ಹೆಲಿಕಾಪ್ಟರ್ ಕಂಪನಿಗಳು 6500 ರೂ.ನಿಂದ 8000 ರೂ. ಶುಲ್ಕ ವಿಧಿಸುತ್ತವೆ. ಒಂದು ಮಾರ್ಗದ ಟಿಕೆಟ್ ದರ ರೂ. 3000 ರೂ.ನಿಂದ 3500 ರೂ. ವರೆಗೆ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ