ತೆಲಂಗಾಣದಿಂದ ಹೆಚ್ಚುವರಿ 6.80 ಲಕ್ಷ ಮೆಟ್ರಿಕ್ ಟನ್ ಪ್ಯಾರಾ ಬಾಯಿಲ್ಡ್ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ; ಕಿಶನ್ ರೆಡ್ಡಿ

|

Updated on: May 26, 2023 | 9:28 PM

ಸಾರ ವರ್ಧಿತ ಪ್ಯಾರಾ ಬಾಯಿಲ್ಡ್ ಅಕ್ಕಿ ಖರೀದಿ ವಿಚಾರದಲ್ಲಿ (Fortified Parboiled Rice) ಕೇಂದ್ರ ಸರ್ಕಾರವು ತೆಲಂಗಾಣದ ರೈತರಿಗೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾರಿಫ್ ಮಾರ್ಕೆಟಿಂಗ್ ಸೀಸನ್ (KMS) 2022-2023 ಅವಧಿಗಾಗಿ ಹೆಚ್ಚುವರಿ 6.80 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

ತೆಲಂಗಾಣದಿಂದ ಹೆಚ್ಚುವರಿ 6.80 ಲಕ್ಷ ಮೆಟ್ರಿಕ್ ಟನ್ ಪ್ಯಾರಾ ಬಾಯಿಲ್ಡ್ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ; ಕಿಶನ್ ರೆಡ್ಡಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಸಾರ ವರ್ಧಿತ ಪ್ಯಾರಾ ಬಾಯಿಲ್ಡ್ ಅಕ್ಕಿ ಖರೀದಿ ವಿಚಾರದಲ್ಲಿ (Fortified Parboiled Rice) ಕೇಂದ್ರ ಸರ್ಕಾರವು ತೆಲಂಗಾಣದ ರೈತರಿಗೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾರಿಫ್ ಮಾರ್ಕೆಟಿಂಗ್ ಸೀಸನ್ (KMS) 2022-2023 ಅವಧಿಗಾಗಿ ಹೆಚ್ಚುವರಿ 6.80 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಹೇಳಿದ್ದಾರೆ. 2021-22 ರಾಬಿ ಹಂಗಾಮಿಗೆ ಮತ್ತು 2022-23 ಖಾರಿಫ್ ಹಂಗಾಮಿಗೆ 13.73 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಸಂಗ್ರಹಣೆಗೆ ಅನುಮೋದಿಸಲಾಗಿತ್ತು. ಅದಕ್ಕೆ ಪೂರಕವಾಗಿ ಹೆಚ್ಚುವರಿಯಾಗಿ ಈಗ 6.80 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದರು.

ತೆಲಂಗಾಣದ ರೈತರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಿ ಕಿಶನ್ ರೆಡ್ಡಿ, ಕೇಂದ್ರ ಸರ್ಕಾರದ ಈ ನಿರ್ಧಾರವು ಇತ್ತೀಚಿನ ಅಕಾಲಿಕ ಮಳೆಯಿಂದ ನಷ್ಟಕ್ಕೊಳಗಾದ ರೈತರಿಗೆ ಸಹಾಯ ಮಾಡಲಿದೆ ಎಂದು ಹೇಳಿದರು. ತೆಲಂಗಾಣ ಸರ್ಕಾರವು ಕೇಂದ್ರ ಸರ್ಕಾರ ನೀಡಿದ ಸಹಕಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ರೈತರಿಂದ ಧಾನ್ಯವನ್ನು ಸಮರೋಪಾದಿಯಲ್ಲಿ ಸಂಗ್ರಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗಿರಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಮತ್ತು ನಿಗದಿತ ಸಮಯದೊಳಗೆ ಅಕ್ಕಿಯನ್ನು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ತಲುಪಿಸಬೇಕು ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಬಜರಂಗದಳದವರು ಏನು ಟೆರರಿಸ್ಟ್​ಗಳಾ? ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನೆ

ಕಳೆದ ತಿಂಗಳು ಕಿಶನ್ ರೆಡ್ಡಿ ಅವರು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ತೆಲಂಗಾಣದಿಂದ ಪ್ಯಾರಾಬಾಯಿಲ್ಡ್ ಅಕ್ಕಿಯನ್ನು ಖರೀದಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ರಾಜ್ಯ ಸರ್ಕಾರ ಎಫ್‌ಸಿಐಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಸಕಾಲದಲ್ಲಿ ಅಕ್ಕಿ ಖರದಿಸಲು ಮುಂದಾಗಿರಲಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ