ಬಜರಂಗದಳದವರು ಏನು ಟೆರರಿಸ್ಟ್​ಗಳಾ? ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನೆ

ಬಜರಂಗದಳ‌ ಬ್ಯಾನ್ ಮಾಡುತ್ತೆ ಅಂತ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್​ಗೆ ನಾಚಿಕೆ ಆಗಬೇಕು. ಬಜರಂಗದಳ ಏನು ಟೆರರಿಸ್ಟ್​ಗಳಾ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ವಾಗ್ದಾಳಿ ಮಾಡಿದ್ದಾರೆ.

ಬಜರಂಗದಳದವರು ಏನು ಟೆರರಿಸ್ಟ್​ಗಳಾ? ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನೆ
ಕೇಂದ್ರ ಸಚಿವ ಕಿಶನ್ ರೆಡ್ಡಿ
Follow us
ಗಂಗಾಧರ​ ಬ. ಸಾಬೋಜಿ
|

Updated on: May 05, 2023 | 3:35 PM

ಆನೇಕಲ್​: ಬಜರಂಗದಳ‌ (bajrang dal) ಬ್ಯಾನ್ ಮಾಡುತ್ತೆ ಅಂತ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್​ಗೆ ನಾಚಿಕೆ ಆಗಬೇಕು. ಬಜರಂಗದಳದವರು ಏನು ಟೆರರಿಸ್ಟ್​ಗಳಾ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ (Kishan Reddy) ವಾಗ್ದಾಳಿ ಮಾಡಿದ್ದಾರೆ. ಆನೇಕಲ್‌ ತಾಲೂಕಿನ ಚಂದಾಪುರದಲ್ಲಿ‌ ಆಯೋಜನೆ ಮಾಡಿದ್ದ ರೆಡ್ಡಿ ಸಮುದಾಯ ಹಾಗೂ ತೆಲುಗು ಭಾಷಿಕರ‌ ಉದ್ದೇಶಿಸಿ ಅವರು ಮಾತನಾಡಿದರು. ಭಾರತ ದೇಶದ ಮೇಲೆ ಬಜರಂಗದಳ ಏನಾದ್ರೂ ದಾಳಿ ಮಾಡಿತ್ತಾ? ಬಜರಂಗದಳ ಬ್ಯಾನ್ ಮಾಡೋಕೆ ನಿಮಗೆ ಧೈರ್ಯ ಇದೆನಾ ಎಂದು ಪ್ರಶ್ನಿಸಿದರು. ಯುವಕರಿಗೆ ಚೈತನ್ಯ ನೀಡುವಂಥಾ‌ ಸಂಘಟನೆ ಬಜರಂಗದಳ. ಇವತ್ತು ಬಜರಂಗದಳ ಬ್ಯಾನ್ ಅಂತೀರಾ. ನಾಳೆ ಜೈ ಶ್ರೀರಾಮ್​ ಹೇಳಬಾರದು ಅಂತ ಹೇಳುತ್ತೀರಾ. ಆ ಮೇಲೆ ಭಾರತ್ ಮಾತಾಕಿ ಜೈ ಹೇಳಬಾರದು ಅಂತೀರಾ. ಇದು ಕಾಂಗ್ರೆಸ್​ನ ಯೋಚನೆ ಎಂದು ಕಿಡಿಕಾರಿದರು.

ಪುಲ್ವಾಮದಲ್ಲಿ ಘಟನೆ ನಡೆಯಿತು. ಕಾನ್ವೇ ಮೇಲೆ ಬಾಂಬ್ ದಾಳಿ ಆಯಿತು. ವ್ಯಕ್ತಿ‌ಯೊಬ್ಬ ದೇಹದಲ್ಲಿ ಬಾಂಬ್ ಇಟ್ಟುಕೊಂಡು ಬ್ಲಾಸ್ಟ್ ಮಾಡಿದ್ರು. ಬಾಂಬ್ ಬ್ಲಾಸ್ಟ್ ಮಾಡಿದವರ ವಿರುದ್ಧ, ಅವರು ಯಾರು ಎಲ್ಲಿಂದ ಬಂದಿದ್ದರು ಅಂತ ಸೆಟ್ ಲೈಟ್​ನಿಂದ ಹುಡುಕಿ, ಒಬ್ಬೊಬ್ಬರ‌ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರು. ಪಾಕಿಸ್ತಾನ ಇವತ್ತು ಎಂಥಾ ಸ್ಥಿತಿಯಲ್ಲಿದೆ.

ರೊಟ್ಟಿಗಾಗಿ ಹೊಡೆದುಕೊಂಡು ಸಾಯುತ್ತಿದ್ದಾರೆ. ಗ್ಯಾಸ್ ಇಲ್ಲ ಅಂತ ಹಸಿವಿಗೆ ಸಾಯುತ್ತಿದ್ದಾರೆ. ಈ ಹಿಂದೆ ಭಾರತದ ಮೇಲೆ ದಾಳಿ ಮಾಡಿ ನಮ್ಮನ್ನು ಕೊಲ್ಲಿ ಎಂದು ನಗುತ್ತಿದ್ದರು. ಇವತ್ತು ಒಂದೊತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿಯಿದೆ ಎಂದರು.

ಅಭಿವೃದ್ಧಿ ಆಗಬೇಕು ಎನ್ನುವವರು ಪ್ರಧಾನಿ ಮೋದಿ ಬೇಕು ಎನ್ನುತ್ತಿದ್ದಾರೆ

ಬಿಜೆಪಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಕಾರ್ಯ‌ ನಡೆತಯತ್ತಿದೆ. ಆದರೆ ಕೆಲ ದೇಶಗಳಿಗೆ ಆಗುತ್ತಿಲ್ಲ. ಹೀಗಾಗಿ ಪಾಕಿಸ್ತಾನ, ನೇಪಾಳ, ಚೈನಾ ದೇಶಗಳಿಗೆ ಮೋದಿ ತೆರಳಬೇಕು ಅನ್ನೋ ಆಸೆ ಇದೆ. ಭಾರತ ದೇಶ ಗೌರವದಿಂದ, ಎಲ್ಲಾ ರಂಗದಲ್ಲಿ ಅಭಿವೃದ್ಧಿ ಆಗಬೇಕು ಎಂದು ಯೋಚಿಸುವವರು ಮೋದಿ ಇರಲೇ ಬೇಕು ಅಂತಿದ್ದಾರೆ.

ನಾನು ಬೆಂಗಳೂರು ತಿರುಗಿದ್ದೇನೆ,‌ ಎಲ್ಲಾ ಕಡೆ ಸಿಮೆಂಟ್ ರೋಡ್ ಆಗಿದೆ. ಈ ಹಿಂದೆ ಅಮೇರಿಕಾ ಹೋದಾಗ ಈ ಥರದ ರೋಡ್ ಬರುತ್ತಾ ಅಂತ ಯೋಚನೆ ಮಾಡಿದ್ದೆ. ಈಗ ಮೋದಿ ನಾಯಕತ್ವದಲ್ಲಿ ಅದಕ್ಕಿಂತ ಮಿಂಚಿರುವ ರೋಡ್ ನಿರ್ಮಾಣ‌ ಆಗಿವೆ. ರಸ್ತೆಯಿಲ್ಲ ಅಂದರೆ ಅಭಿವೃದ್ಧಿಯೇ ಇಲ್ಲ, ರಸ್ತೆಯಿಲ್ಲ‌ಅಂದರೆ ಏನೇನೂ ಸಾಧ್ಯ ಇಲ್ಲ. 2014‌ ಕ್ಕಿಂತ ಅಧಿಕಾರಕ್ಕೆ ಬರೋಕ್ಕಿಂತ ಮೊದಲು ಸೋನಿಯಾ ಗಾಂಧಿ,‌ ಮನಮೋಹನ್ ಸಿಂಗ್ ಎಂಥಾ ಕಾಲ‌ ಇತ್ತು. ಹತ್ತು ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡಿಯಿತು.

ಭ್ರಷ್ಟಾಚಾರ ಆಗೋಕೆ ಬಿಡಲಿಲ್ಲ

ಇಷ್ಟೆಲ್ಲಾ ಅಕ್ರಮ ನಡೀತಿದ್ದರು ಮನಮೋಹನ್ ಸಿಂಗ್ ಮೌನ ಬಾಬಾ ಆಗಿದ್ದರು. ಅದಕ್ಕೆ ಜನ ನಿರ್ಣಯ ಮಾಡಿದರು. ರಿಮೋಟ್ ಕಂಟ್ರೋಲ್ ಪ್ರಧಾನಿಯನ್ನು ಬದಲಾಯಿಸಿದರು. ಸಮರ್ಥ, ದಿಟ್ಟ ನಾಯಕಬೇಕು ಅಂತ ಜನ ನಿಶ್ಚಯಿಸಿದರು. ಅದಕ್ಕೆ ನರೆಂದ್ರ ಮೋದಿ ಪ್ರಧಾನಿಯಾಗಿ ಬಂದ್ದರು. ಆಗಿನಿಂದ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆಗೋಕೆ ಬಿಡಲಿಲ್ಲ.

ಮೋದಿ ಆಡಳಿತದ‌ ಬಗ್ಗೆ ಕಾಂಗ್ರೆಸ್​ ಆಗಲಿ, ವಿರೋಧ ಪಕ್ಷಗಳು ಯಾರು ಭ್ರಷ್ಟಾಚಾರ ನಡೆದಿದೆ ಅಂತ ಹೇಳಲ್ಲ. ಅಸಮರ್ಥ ನಾಯಕ, ಬಾಂಬ್ ಬ್ಲಾಸ್ಟ್, ಮತ ಕಲಹಗಳು, ಕರ್ಫ್ಯು, ಆರ್​ಡಿಎಕ್ಸ್‌ ಬ್ಲಾಸ್ಟ್, ಪಾಕಿಸ್ತಾನದ ಅರಾಜಕತೆ ಇತ್ತು. ಈಗ ಬಾಂಬ್ ಬ್ಲಾಸ್ಟ್ ಇಲ್ಲ, ಕರ್ಪ್ಯು ಇಲ್ಲ, ಪಾಕಿಸ್ತಾನದ ಅರಾಜಕತೆ ಇಲ್ಲ. ಸ್ವಾತಂತ್ರ್ಯ ಬರೋದಿಕ್ಕಿಂತ ಮೊದಲು ಪಾಕಿಸ್ತಾನ ಕೊಲ್ಲುತ್ತಿತ್ತು. ನಾವು ಸಾಯುತ್ತಿದ್ದೇವು. ಕಳೆದ ಒಂಭತ್ತು ವರ್ಷದಲ್ಲಿ ಅಂಥಾದ್ದೇನು ನಡೆದಿಲ್ಲ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್