Karnataka Polls 2023: ಕಾಂಗ್ರೆಸ್​ ಕಾರ್ಯಕರ್ತರ ಕ್ಷಮೆಯಾಚಿಸಿದ ಸುಮಲತಾ ಅಂಬರೀಶ್, ಯಾಕೆ ಗೊತ್ತಾ?

ಜಿಲ್ಲೆಯ ನಾಗಮಂಗಲದಲ್ಲಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಅಭ್ಯರ್ಥಿ ಸುಧಾ ಪರ ಭರ್ಜರಿ ಪ್ರಚಾರ ಮಾಡಿದ್ದು, ಈ ವೇಳೆ ಜಿಲ್ಲೆಯ ಕಾಂಗ್ರೆಸ್​ ಕಾರ್ಯಕರ್ತರಿಗೆ ಕ್ಷಮೆಯಾಚಿಸಿದ್ದಾರೆ.

Karnataka Polls 2023: ಕಾಂಗ್ರೆಸ್​ ಕಾರ್ಯಕರ್ತರ ಕ್ಷಮೆಯಾಚಿಸಿದ ಸುಮಲತಾ ಅಂಬರೀಶ್, ಯಾಕೆ ಗೊತ್ತಾ?
ಸಂಸದೆ ಸುಮಲತಾ ಅಂಬರೀಶ್
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 05, 2023 | 3:01 PM

ಮಂಡ್ಯ: ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನು ಐದು ದಿನಗಳು ಬಾಕಿಯಿದ್ದು, ಎಲ್ಲ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಇಂದು(ಮೇ.5) ಜಿಲ್ಲೆಯ ನಾಗಮಂಗಲದಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ನಾಗಮಂಗಲದ ಬಿಜೆಪಿ ಅಭ್ಯರ್ಥಿ ಸುಧಾ ಪರ ಭರ್ಜರಿ ಪ್ರಚಾರ ಮಾಡಿದ್ದಾರೆ. ಹೌದು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ಸುಮಲತಾ ಅಂಬರೀಶ್​ ಪ್ರಚಾರ ಮಾಡುತ್ತಾ ಜಿಲ್ಲೆಯ ಕಾಂಗ್ರೆಸ್​ ಕಾರ್ಯಕರ್ತರಿಗೆ ಕ್ಷಮೆಯಾಚಿಸಿದ್ದಾರೆ. ‘ನನ್ನ ನಡೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರವಾಗಿದ್ದರೆ ಕ್ಷಮೆ ಇರಲಿ, ಎಂದರು.

27 ವರ್ಷಗಳ ಕಾಲ ಅಂಬರೀಶ್​​ ಕಾಂಗ್ರೆಸ್​ನಲ್ಲಿ ಸಕ್ರಿಯವಾಗಿದ್ದರು. ಅಂಬರೀಶ್​​ ನಿಧನದ ಬಳಿಕ ಕಾಂಗ್ರೆಸ್​ನಲ್ಲಿ ನನಗೆ ಅವಕಾಶ ಸಿಗಲಿಲ್ಲ. ನನ್ನ ಗೆಲುವಿಗೆ ಬಿಜೆಪಿ, ಕಾಂಗ್ರೆಸ್, ರೈತ ಸಂಘ ಕಾರಣ, ಬದಲಾದ ಕಾಲದಲ್ಲಿ ರಾಜಕೀಯ ತೀರ್ಮಾನವನ್ನು ಕೈಗೊಳ್ಳಬೇಕಾಯ್ತು ಎಂದು ಸಂಸದೆ ಸುಮಲತಾ ಅಂಬರೀಶ್ ಮನದ ಮಾತನ್ನಾಡಿದರು.

​​ ಮಾ.10 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸಿದ್ದರು​​

ಸಂಸದೆ ಸುಮಲತಾ ಅಂಬರೀಶ್​​ ಮಾ.10 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಬಾಹ್ಯ ಬೆಂಬಲ ಸೂಚಿಸಿದ್ದರು. ಬೆಂಗಳೂರುಮೈಸೂರು ಎಕ್ಸಪ್ರೆಸ್​ವೇ ಉದ್ಘಾಟನೆಗೆ ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಸಂಸದೆ ಸುಮಲತಾ ಸ್ವಾಗತಿಸಿ, ಈ ವೇಳೆ ಮೋದಿಯವರಿಗೆ ಸಾವಯವ ಬೆಲ್ಲವನ್ನು ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ:ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗ ಕೆಂಡ; ರಾಜಕೀಯ ಮುಖಂಡರಿಗೆ ನೀಡಿತು ಖಡಕ್ ಎಚ್ಚರಿಕೆ

ನಾನು ರಾಜಕಾರಣದಲ್ಲಿ ಇರೋವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ; ಸುಮಲತಾ ಅಂಬರೀಶ್​

ಮಂಡ್ಯ: ‘ಸ್ಪಷ್ಟವಾಗಿ ಹೇಳುತ್ತಿದ್ದೇನೆ ನಾನು ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣ ಮಾಡಲ್ಲ. ಇದುವರೆಗೂ ಯಾರ ಹತ್ತಿರವಾದರೂ ನನ್ನ ಮಗನಿಗೆ ನಿಮ್ಮ ಪಕ್ಷದಲ್ಲಿ ಟಿಕೆಟ್​ ಕೊಡಿ ಎಂದು ಕೇಳಿದರೇ ನಾನು ಅಂಬರೀಶ್​ ಪತ್ನಿ ಅಂತ ಹೇಳಿಕೊಳ್ಳೋಕೆ ಲಾಯಕ್ಕಿಲ್ಲವೆಂದಿದ್ದರು. ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಶ್ ‘ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ, ನನ್ನ ಮಗ ಕೂಡ ತಂದೆಯಂತೆ ಅವರ ದಾರಿಯಲ್ಲಿ ನಡೆದುಕೊಂಡು ಬರಬೇಕು ಎಂಬುದು ಅವನ ಆಸೆ ಎಂದು ಹೇಳಿದ್ದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ