G20 Logo: ಜಿ20 ಲೋಗೋದಲ್ಲಿ ಕಮಲದ ಹೂವು; ಕಾಂಗ್ರೆಸ್​ ಟೀಕೆಗೆ ತಿರುಗೇಟು ನೀಡಿದ ಬಿಜೆಪಿ

| Updated By: ಸುಷ್ಮಾ ಚಕ್ರೆ

Updated on: Nov 09, 2022 | 4:55 PM

ಜಿ20 ಲೋಗೋದಲ್ಲಿ 7 ಕಮಲದ ದಳಗಳ ಮೇಲೆ ಅರಳುತ್ತಿರುವ ವಿಶ್ವವನ್ನು ಚಿತ್ರಿಸಿ, ಅದರಲ್ಲಿ ಜಿ20 ಎಂಬ ಇಂಗ್ಲಿಷ್ ಅಕ್ಷರಗಳನ್ನು ಮೂಡಿಸಲಾಗಿದೆ. ಜಿ20 ಲೋಗೋದಲ್ಲಿ ಬಿಜೆಪಿಯ ಲಾಂಛನವಾದ ಕಮಲವನ್ನು ಚಿತ್ರಿಸಿರುವುದಕ್ಕೆ ಕಾಂಗ್ರೆಸ್ ಟೀಕೆ ಮಾಡಿದೆ.

G20 Logo: ಜಿ20 ಲೋಗೋದಲ್ಲಿ ಕಮಲದ ಹೂವು; ಕಾಂಗ್ರೆಸ್​ ಟೀಕೆಗೆ ತಿರುಗೇಟು ನೀಡಿದ ಬಿಜೆಪಿ
ಜಿ20 ಲೋಗೋ
Follow us on

ನವದೆಹಲಿ: 2023ರ ಸೆಪ್ಟೆಂಬರ್​​ನಲ್ಲಿ ನಡೆಯುವ ಜಿ20 (G20) ಒಕ್ಕೂಟದ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳಲಿದೆ. ಈ ಕಾರ್ಯಕ್ರಮದ ನೆನಪಿಗಾಗಿ ಸಿದ್ಧಪಡಿಸಲಾಗಿರುವ ಲೋಗೋವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಬಿಡುಗಡೆ ಮಾಡಿದ್ದಾರೆ. ಈ ಲೋಗೋ ಇದೀಗ ಚರ್ಚೆಯ ವಿಷಯವಾಗಿದೆ. ಜಿ20 ಲೋಗೋದಲ್ಲಿ 7 ಕಮಲದ ದಳಗಳ ಮೇಲೆ ಅರಳುತ್ತಿರುವ ವಿಶ್ವವನ್ನು ಚಿತ್ರಿಸಿ, ಅದರಲ್ಲಿ ಜಿ20 ಎಂಬ ಇಂಗ್ಲಿಷ್ ಅಕ್ಷರಗಳನ್ನು ಮೂಡಿಸಲಾಗಿದೆ. ಜಿ20 ಲೋಗೋದಲ್ಲಿ ಬಿಜೆಪಿಯ ಲಾಂಛನವಾದ ಕಮಲವನ್ನು ಚಿತ್ರಿಸಿರುವುದಕ್ಕೆ ಕಾಂಗ್ರೆಸ್ ಟೀಕೆ ಮಾಡಿದೆ.

ಭಾರತ ಅಧ್ಯಕ್ಷತೆ ವಹಿಸಲಿರುವ ಜಿ20 ಶೃಂಗಸಭೆಯ ಲಾಂಛನದಲ್ಲಿ ಬಿಜೆಪಿಯ ಪಕ್ಷದ ಚಿಹ್ನೆಯಾದ ಕಮಲವನ್ನು ಬಳಸಿರುವುದು ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಕಾರಣವಾಗಿದೆ. ಬಿಜೆಪಿ ನಾಚಿಕೆಯಿಲ್ಲದೆ ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಇದೇ ಕ್ರಮವನ್ನು ತಿರಸ್ಕರಿಸಿದ್ದರು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. 70 ವರ್ಷಗಳ ಹಿಂದೆ ನೆಹರು ಅವರು ಕಾಂಗ್ರೆಸ್ ಧ್ವಜವನ್ನು ಭಾರತದ ಧ್ವಜವನ್ನಾಗಿ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಈಗ, ಬಿಜೆಪಿಯ ಚುನಾವಣಾ ಚಿಹ್ನೆಯು ಭಾರತ ಅಧ್ಯಕ್ಷತೆ ವಹಿಸಲಿರುವ ಜಿ20ರ ಅಧಿಕೃತ ಲಾಂಛನವಾಗಿದೆ! ನಾಚಿಕೆಯಿಲ್ಲದೆ ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುವ ಯಾವುದೇ ಅವಕಾಶವನ್ನು ಬಿಜೆಪಿ ನಾಯಕರು ಮಿಸ್ ಮಾಡಿಕೊಳ್ಳುವುದಿಲ್ಲ! ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊಟೊ ಜಿ20 ನಂತರ ಮೊಟೊ ಜಿ70 ಟ್ಯಾಬನ್ನು ಭಾರತದಲ್ಲಿ ಲಾಂಚ್ ಮಾಡಲು ಮೊಟೊರೊಲ ಭರದ ಸಿದ್ಧತೆ ನಡೆಸಿದೆ

ಇದಕ್ಕೆ ಸ್ವಲ್ಪ ಸಮಯದ ನಂತರ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, “ಕಮಲನಾಥ್ ಅವರ ಹೆಸರಿನಿಂದ ಕಮಲವನ್ನು ತೆಗೆದುಹಾಕುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಕಮಲವು ನಮ್ಮ ರಾಷ್ಟ್ರೀಯ ಪುಷ್ಪವಾಗಿದೆ! ಇದು ಲಕ್ಷ್ಮಿ ದೇವಿಯ ಆಸನವೂ ಆಗಿದೆ. ನಮ್ಮ ರಾಷ್ಟ್ರೀಯ ಹೂವನ್ನು ನೀವು ವಿರೋಧಿಸುತ್ತೀರಾ? ನೀವು ಕಮಲ್ ನಾಥ್ ಅವರ ಹೆಸರಿನಿಂದ ಕಮಲ್ ಅನ್ನು ತೆಗೆದುಹಾಕುತ್ತೀರಾ? ರಾಜೀವ್ ಎಂದರೆ ಕಮಲ ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಪೂನಾವಾಲಾ ಪ್ರಶ್ನಿಸಿದ್ದಾರೆ.

ಭಾರತದ G20 ಅಧ್ಯಕ್ಷರ ಐತಿಹಾಸಿಕ ಸಂದರ್ಭದಲ್ಲಿ ನಾನು ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ‘ವಸುಧೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ)’ ಎಂಬುದು ಭಾರತದ ತತ್ವವಾಗಿದೆ. ಕಮಲವು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಜಗತ್ತನ್ನು ಒಟ್ಟುಗೂಡಿಸುವ ನಂಬಿಕೆಯನ್ನು ಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

“ಈ G20 ಲಾಂಛನವು ಕೇವಲ ಸಂಕೇತವಲ್ಲ, ಇದು ಒಂದು ಸಂದೇಶ, ನಮ್ಮ ರಕ್ತನಾಳಗಳಲ್ಲಿ ಹರಿಯುವ ಭಾವನೆಯಾಗಿದೆ. ಇದು ಒಂದು ಸಂಕಲ್ಪವಾಗಿದೆ, ಇದು ಈಗ ನಮ್ಮ ಆಲೋಚನೆಗಳಲ್ಲಿ ಸೇರಿದೆ” ಎಂದು ಪ್ರಧಾನಮಂತ್ರಿ ಲೋಗೋ ಉದ್ಘಾಟನೆ ವೇಳೆ ಹೇಳಿದ್ದರು.

ಇದನ್ನೂ ಓದಿ: ಜಿ20 ಸಮಾವೇಶದಲ್ಲಿ ಭಾರತಕ್ಕೆ ಗಮನಾರ್ಹ ಯಶಸ್ಸು: ವಿಶ್ವದ ಪ್ರಬಲ ದೇಶಗಳ ಮುಂದಿನ ಹೆಜ್ಜೆಗಳ ಮೇಲೆ ಪ್ರಭಾವ

ಈ ಜಿ20 ಲಾಂಛನ ಆಶಾವಾದದ ಪ್ರತೀಕ. ಎಂತಹುದೇ ಪರಿಸ್ಥಿತಿ ಇದ್ದರೂ ಕಮಲ ಅರಳುತ್ತದೆ ಎಂಬುದರ ಸೂಚಕ. ಲಾಂಛನದಲ್ಲಿರುವ ಕಮಲದ 7 ದಳಗಳು ವಿಶ್ವದ 7 ಖಂಡಗಳನ್ನು, ಸಂಗೀತದ 7 ಸ್ವರಗಳನ್ನು ಪ್ರತಿನಿಧಿಸುತ್ತದೆ. ಜಿ20 ಎಂಬುದು ವಿಶ್ವವನ್ನು ಸೌಹಾರ್ದತೆಯೆಡೆಗೆ ಒಯ್ಯುತ್ತದೆ. ಈ ಲಾಂಛನ ಭಾರತದ ಪುರಾತನ ಸಂಸ್ಕೃತಿ, ನಂಬಿಕೆ, ಬುದ್ಧಿವಂತಿಕೆಯನ್ನು ಬಿಂಬಿಸುತ್ತದೆ ಎಂದು ಮೋದಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ