G20 Summit: ಆಕಾಶದಲ್ಲಿ ತೇಲಾಡಿದ ಜಿ20 ಶೃಂಗಸಭೆ ಧ್ವಜ, ಸಭೆಗೆ ಸ್ಕೈಡೈವಿಂಗ್ ಮೂಲಕ ಶುಭಕೋರಿದ ವ್ಯಕ್ತಿ

|

Updated on: Sep 09, 2023 | 12:28 PM

ಜಿ20ಗೆ ವ್ಯಕ್ತಿಯೊಬ್ಬರು ವಿಭಿನ್ನವಾಗಿ ಶುಭಕೋರಿರುವ ವಿಡಿಯೋ ವೈರಲ್​​​ ಆಗಿದೆ. ಜಿ20 ಧ್ವಜವನ್ನು ಹಿಡಿದುಕೊಂಡು ಸ್ಕೈಡೈವಿಂಗ್ ಮಾಡುವ ಮೂಲಕ ಜಿ20ಗೆ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಭಾರತದ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ.

G20 Summit: ಆಕಾಶದಲ್ಲಿ ತೇಲಾಡಿದ ಜಿ20 ಶೃಂಗಸಭೆ ಧ್ವಜ, ಸಭೆಗೆ ಸ್ಕೈಡೈವಿಂಗ್ ಮೂಲಕ ಶುಭಕೋರಿದ ವ್ಯಕ್ತಿ
ವೈರಲ್​​ ವಿಡಿಯೋ ಮತ್ತು ಮೋದಿ
Follow us on

ದೆಹಲಿ, ಸೆ.9: ರಾಷ್ಟ್ರರಾಜಧಾನಿಯಲ್ಲಿ ಜಿ20 ಶೃಂಗಸಭೆ (G20 Summit) ನಡೆಯುತ್ತಿದ್ದು, ಅನೇಕ ದೇಶದ ನಾಯಕರುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಈ ಸಭೆ ಆರಂಭವಾಗಿದ್ದು, ಆಫ್ರಿಕಾವನ್ನು ಜಿ20 ಸಭೆಯ ಸದಸ್ಯರಾಗಿ ಸೇರಿಸಿಕೊಳ್ಳಲಾಗಿದೆ. ಈ ನಡುವೆ ಜಿ20ಗೆ ವ್ಯಕ್ತಿಯೊಬ್ಬರು ವಿಭಿನ್ನವಾಗಿ ಶುಭಕೋರಿರುವ ವಿಡಿಯೋ ವೈರಲ್​​​ ಆಗಿದೆ. ಜಿ20 ಧ್ವಜವನ್ನು ಹಿಡಿದುಕೊಂಡು ಸ್ಕೈಡೈವಿಂಗ್ ಮಾಡುವ ಮೂಲಕ ಜಿ20ಗೆ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಭಾರತದ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. ಜಿ20 ಧ್ವಜವನ್ನು ಹಿಡಿದುಕೊಂಡು ಆಕಾಶದಲ್ಲಿ ತೇಲಾಡುತ್ತಾ ಶೃಂಗಸಭೆಗೆ ಶುಭಕೋರಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿಯ ನೂತನವಾಗಿ ಉದ್ಘಾಟನೆಗೊಂಡ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಹಲವು ದೇಶಗಳ ನಾಯಕರುಗಳು ಭಾಗವಹಿಸುತ್ತಿದ್ದಾರೆ. ಈ ಸಮಯದಲ್ಲಿ ಈ ಸಭೆಗೆ ಈ ವ್ಯಕ್ತಿ ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ. ಇನ್ನು ಈ ವಿಡಿಯೊವನ್ನು ಹಂಚಿಕೊಂಡ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ನನಗೆ ಈ ವಿಡಿಯೋ ತುಂಬಾ ಇಷ್ಟವಾಯಿತು ಎಂದು ಟ್ವಿಟರ್​​ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಆದರೆ ವಿಡಿಯೋ ಯಾವಾಗ ಮತ್ತು ಎಲ್ಲಿ ಚಿತ್ರೀಕರಣಗೊಂಡಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.

ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ ಕಿರಣ್ ರಿಜಿಜು

ಇಂತಹದೇ ಒಂದು ವಿಡಿಯೋ ಮಾರ್ಚ್ ​​7ರಂದು ಟ್ವಿಟರ್​​ನಲ್ಲಿ ಸೌತ್ ವೆಸ್ಟರ್ನ್ ಏರ್ ಕಮಾಂಡ್ ಹಂಚಿಕೊಂಡಿತ್ತು. ಭಾರತೀಯ ವಾಯುಪಡೆಯ (IAF) ಅಧಿಕಾರಿಯೊಬ್ಬರು ರಾಜಸ್ಥಾನದಲ್ಲಿ ಜಿ20 ಪ್ಲಾಗ್​​​ ಹಿಡಿದುಕೊಂಡು ಸ್ಕೈಡೈವಿಂಗ್ ಮಾಡಿರುವ ವಿಡಿಯೊ  ಇದ್ದಾಗಿದೆ. ಸೌತ್ ವೆಸ್ಟರ್ನ್ ಏರ್ ಕಮಾಂಡ್ ಪ್ರಕಾರ ವಿಂಗ್ ಕಮಾಂಡರ್ ಗಜಾನಂದ ಯಾದವ, 10,000 ಅಡಿ ಎತ್ತರದಿಂದ ‘ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ವಿಚಾರದಡಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಧ್ವಜವನ್ನು ಹಿಡಿದುಕೊಂಡು ಸ್ಕೈಡೈವಿಂಗ್ ಮಾಡಿದ್ದರು ಎಂದು ಟ್ವೀಟ್​​​ ಮೂಲಕ ತಿಳಿಸಿತ್ತು.

ಮಾರ್ಚ್ ​​7ರಂದು ಸೌತ್ ವೆಸ್ಟರ್ನ್ ಏರ್ ಕಮಾಂಡ್ ಹಂಚಿಕೊಂಡ ವಿಡಿಯೋ

ಇದನ್ನೂ ಓದಿ: G20 Summit 2023: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ 2023 ನೇರಪ್ರಸಾರ

ಇನ್ನು ಜಿ20 ಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೆಲ್ ಈಗಾಗಲೇ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:24 pm, Sat, 9 September 23