G20 Summit 2023: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ 2023 ನೇರಪ್ರಸಾರ
ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಜಿ 20 ಶೃಂಗಸಭೆ ನಡೆಯುತ್ತಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದೆಹಲಿಯಲ್ಲಿ ಇಂದು ಸಂಚಾರದ ಮೇಲೆ ಪರಿಣಾಮ ಬೀರಲಿದೆ. ದೆಹಲಿ ಪೊಲೀಸರು ಸಂಚಾರ ಸಲಹೆಯನ್ನು ಸಹ ನೀಡಿದ್ದಾರೆ. ಜಿ 20 ಸಮ್ಮೇಳನಕ್ಕೆ ಬಂದ ಜಾಗತಿಕ ನಾಯಕರ ಸುರಕ್ಷತೆಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ.
ದೆಹಲಿಯಲ್ಲಿ ಆಯೋಜಿಸಿರುವ ಜಿ20 ಶೃಂಗಸಭೆಯ (G20 Summit 2023) ಎರಡು ದಿನಗಳ ಕಾರ್ಯಕ್ರಮ ಇಂದಿನಿಂದ ಆರಂಭವಾಗಿದೆ. ಮೊದಲ ದಿನ ಕಾರ್ಯಕ್ರಮಗಳನ್ನು ಎರಡು ಅವಧಿಗಳಾಗಿ ವಿಂಗಡಿಸಲಾಗಿದೆ. ಜಿ 20 ಸಮ್ಮೇಳನಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಗುಂಪಿನ ಇತರ ನಾಯಕರು ಮತ್ತು ಇತರ ಹಲವು ದೇಶಗಳ ಪ್ರತಿನಿಧಿಗಳು ದೆಹಲಿಗೆ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಭಾರತ ಮಂಟಪದಲ್ಲಿ ಜಾಗತಿಕ ನಾಯಕರನ್ನು ಸ್ವಾಗತಿಸುತ್ತಿದ್ದಾರೆ. ಮೊದಲ ದಿನದ ಕಾರ್ಯಕ್ರಮ ಬೆಳಗ್ಗೆ 9.30ರಿಂದ ಆರಂಭವಾಗಿದೆ. G20 ಶೃಂಗಸಭೆಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್ಡೇಟ್ ಇಲ್ಲಿ ಲಭ್ಯ.
Latest Videos