ವಿಡಿಯೋ: G20 ಭಾರತ್ ಮಂಟಪದ ಕಲರ್​ಫುಲ್ ಕಾರಂಜಿ ಚಿತ್ತಾರ ಇಲ್ಲಿದೆ ನೋಡಿ

ದೆಹಲಿಯಲ್ಲಿ ನಾಳೆಯಿಂದ 2 ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದ್ದು, ಜಿ20 ಶೃಂಗಸಭೆ ನಡೆಯುವ ಸ್ಥಳ ‘ಭಾರತ್ ಮಂಟಪಂ’ ಬಳಿ ಕಲರ್​ಫುಲ್​ ಲೈಟಿಂಗ್ಸ್​ ಹಾಕಲಾಗಿದೆ. ಅದರಲ್ಲೂ ಈ ಕಾರಂಜಿ ಚಿತ್ತಾರ ನೋಡುಗರನ್ನು ಒಮ್ಮೆ ಮಂತ್ರಮುಗ್ಧರನ್ನಾಗಿಸುತ್ತಿದೆ.

ವಿಡಿಯೋ: G20 ಭಾರತ್ ಮಂಟಪದ ಕಲರ್​ಫುಲ್ ಕಾರಂಜಿ ಚಿತ್ತಾರ ಇಲ್ಲಿದೆ ನೋಡಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2023 | 10:14 PM

ನವದೆಹಲಿ, ಸೆ.08: ದೆಹಲಿಯಲ್ಲಿ ನಾಳೆಯಿಂದ 2 ದಿನಗಳ ಕಾಲ ಜಿ20 ಶೃಂಗಸಭೆ(G20 Summit)  ನಡೆಯಲಿದ್ದು, ಜಿ20 ಶೃಂಗಸಭೆ ನಡೆಯುವ ಸ್ಥಳ ‘ಭಾರತ್ ಮಂಟಪಂ’ ಬಳಿ ಕಲರ್​ಫುಲ್​ ಲೈಟಿಂಗ್ಸ್​ ಹಾಕಲಾಗಿದೆ. ಅದರಲ್ಲೂ ಈ ಕಾರಂಜಿ ಚಿತ್ತಾರ ನೋಡುಗರನ್ನು ಒಮ್ಮೆ ಮಂತ್ರಮುಗ್ಧರನ್ನಾಗಿಸುತ್ತಿದೆ. ಹೌದು, ಈಗಾಗಲೇ ಜಿ20 ಶೃಂಗಸಭೆಗೆ ಗಣ್ಯಾತಿಗಣ್ಯರು ಆಗಮಿಸಿದ್ದು, ಎರಡು ದಿನಗಳ ಕಾಲ ಶೃಂಗಸಭೆ ನಡೆಯಲಿದೆ. ಇನ್ನು ಮೊದಲ ದಿನದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಬೆಳಗ್ಗೆ 9.30ರಿಂದ ಬೆಳಗ್ಗೆ 10.30ರ ತನಕ ಗಣ್ಯ ವ್ಯಕ್ತಿಗಳ ಆಗಮನವಾಗಲಿದೆ.

ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಗಣ್ಯರ ಛಾಯಾಚಿತ್ರ ವಿಕ್ಷಿಸಿ ನಂತರ ‘ಭಾರತ್ ಮಂಟಪಂ’ನ 2ನೇ ಹಂತದಲ್ಲಿರುವ ಲೀಡರ್ಸ್ ಲಾಂಜ್‌ನಲ್ಲಿ ನಾಯಕರು, ಮುಖ್ಯಸ್ಥರು ಸೇರಲಿದ್ದಾರೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ‘ಒನ್ ಅರ್ಥ್’ ಕುರಿತ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಸಮಾವೇಶದ ಜೊತೆಗೆ ಮಧ್ಯಾಹ್ನದ ಊಟ ಸವಿದು, ಮಧ್ಯಾಹ್ನ 1.30ರಿಂದ ಮಧ್ಯಾಹ್ನ 3 ಗಂಟೆವರೆಗೆ ದ್ವಿಪಕ್ಷೀಯ ಸಭೆಗಳು ನಡೆಯಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us