ಕೆಆರ್ ಎಸ್ ಜಲಾಶಯ ಒಳಭಾಗಕ್ಕೆ ಎಲ್ಲರಿಗಿಂತ ಮೊದಲು ಬಂದ ಸುಮಲತಾ ಅಂಬರೀಶ್ ವಿರುದ್ಧ ದಿಕ್ಕಿನಡೆ ನಡೆದರು!
ಅವರ ಹಿಂದೆ ಬರುವ ಆರ್ ಅಶೋಕ ಒಳಗಡೆ ಬಂದು ಪೊಲೀಸರೊಂದಿಗೆ ಯಾವಕಡೆ ಹೋಗಬೇಕೆಂದು ವಿಚಾರಿಸುತ್ತಾರೆ. ಅಮೇಲೆ ಬಿಜೆಪಿ ನಿಯೋಗದ ಸದಸ್ಯರು ಒಬ್ಬೊಬ್ಬರಾಗಿ ಒಳಗಡೆ ಬರುತ್ತಾರೆ. ಅವರಲ್ಲೊಬ್ಬರು ಸುಮಲತಾರನ್ನು ತಮ್ಮ ಕಡೆ ಬರುವಂತೆ ಕರೆಯುತ್ತಾರೆ. ಅವರು ಗುಂಪನ್ನು ಸೇರುವ ಮೊದಲೇ ನಾಯಕರು ಎಡಭಾಗದ ಕಡೆ ಹೊರಡುತ್ತಾರೆ.
ಮಂಡ್ಯ: ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಸಮಸ್ಯೆ ಹಾಗೂ ವಿವಾದ ಎರಡೂ ಉಲ್ಬಣಗೊಳ್ಳುತ್ತಿವೆ. ಸದ್ಯಕ್ಕೆ ಎಲ್ಲರ ಗಮನ ಕೆಆರ್ ಆಸ್ ಡ್ಯಾಂ (KRS Reservoir) ಮೇಲಿದೆ. ಯಾಕೆಂದರೆ ತಮಿಳುನಾಡುಗೆ ಇಲ್ಲಿಂದಲೇ ನೀರು ಹರಿಬಿಡಲಾಗುತ್ತಿದೆ. ಜಲಾಶಯದ ವಸ್ತುಸ್ಥಿತಿ ಅರಿಯಲು ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ನಿಯೋಗವೊಂದು ಡ್ಯಾಂಗೆ ಆಗಮಿಸಿತ್ತು. ಮಿಡಿಯಾದವರನನ್ನು ಒಳ ಬಿಡದ ಕಾರಣ ನಿಯೋಗದ ಸದಸ್ಯರು ಮಾತ್ರ ಡ್ಯಾಂನೊಳಗಡೆ ಬಂದರು. ಎಲ್ಲಕ್ಕಿಂತ ಮೊದಲು ಒಳಗೆ ಬಂದವರೆಂದರೆ, ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh). ಅಸಲಿಗೆ ಸುಮಲತಾ ಒಳಗಡೆ ಪ್ರವೇಶಿಸುತ್ತಿದ್ದಂತೆ ಎಡಭಾಗಕ್ಕೆ ಹೋಗಬೇಕಿತ್ತು ಆದರೆ ಅವರು ಬಲಭಾಗಲ್ಲಿ ಒಂಟಿಯಾಗಿ ನಡೆದು ಬರುತ್ತಾರೆ. ಅವರ ಹಿಂದೆ ಬರುವ ಆರ್ ಅಶೋಕ (A Ashoka) ಒಳಗಡೆ ಬಂದು ಪೊಲೀಸರೊಂದಿಗೆ ಯಾವಕಡೆ ಹೋಗಬೇಕೆಂದು ವಿಚಾರಿಸುತ್ತಾರೆ. ಅಮೇಲೆ ಬಿಜೆಪಿ ನಿಯೋಗದ ಸದಸ್ಯರು ಒಬ್ಬೊಬ್ಬರಾಗಿ ಒಳಗಡೆ ಬರುತ್ತಾರೆ. ಅವರಲ್ಲೊಬ್ಬರು ಸುಮಲತಾರನ್ನು ತಮ್ಮ ಕಡೆ ಬರುವಂತೆ ಕರೆಯುತ್ತಾರೆ. ಅವರು ಗುಂಪನ್ನು ಸೇರುವ ಮೊದಲೇ ನಾಯಕರು ಎಡಭಾಗದ ಕಡೆ ಹೊರಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ