ಕಾವೇರಿ ನದಿ ನೀರು ವಿವಾದವನ್ನು ಕೇವಲ ರಾಜಕೀಯ ದೃಷ್ಟಿಯಿಂದ ಮಾತ್ರ ನೋಡಬಾರದು: ಸುಮಲತಾ ಅಂಬರೀಶ್, ಸಂಸದೆ

ಕಾವೇರಿ ನದಿ ನೀರು ವಿವಾದವನ್ನು ಕೇವಲ ರಾಜಕೀಯ ದೃಷ್ಟಿಯಿಂದ ಮಾತ್ರ ನೋಡಬಾರದು: ಸುಮಲತಾ ಅಂಬರೀಶ್, ಸಂಸದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2023 | 2:40 PM

ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ತಮಿಳುನಾಡುಗೆ ನೀರು ಹರಿಬಿಡಲಾಗಿತ್ತು, ಅದನ್ನು ವಿರೋಧಿಸಿ ಆಗ ಸಂಸದರಾಗಿದ್ದ ಅಂಬರೀಷ್ ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಿದರು. ಆದರೆ, ಕಾವೇರಿ ನದಿ ನೀರು ವಿವಾದ ಕೇವಲ ರಾಜಕೀಯಕ್ಕೆ ಸೀಮಿತವಾದುದಲ್ಲ, ಇದು ಎಲ್ಲ ಕನ್ನಡಿಗರ ಸಮಸ್ಯೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ಮಂಡ್ಯ: ತಮಿಳುನಾಡುಗೆ ಕಾವೇರಿ ನದಿ ನೀರು (Cauvery River water ) ಹರಿಬಿಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ರಾಜಕಾರಣಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ತಾವು ರೈತರ ಪರ ಅಂತ ಬಿಂಬಸಿಕೊಳ್ಳುವ ಪ್ರಯತ್ತ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸ್ಥಳೀಯ ಸುಮಲತಾ ಅಂಬರೀಶ್ (Sumalatha Ambareesh), ಕಾವೇರಿ ನದಿ ನೀರಿಗಾಗಿ ಪ್ರತಿಯೊಬ್ಬರು ಹೋರಾಡಬೇಕು, ಹೋರಾಟದಲ್ಲಿ ಮಾಧ್ಯಮ ಸಹ ದೊಡ್ಡ ಪಾತ್ರ ನಿರ್ವಹಿಸಬೇಕು ಎಂದು ಹೇಳಿದರು. ಸುಮಲತಾ ಅವರನ್ನು ಸೇರಿಸಿದರೆ ರಾಜ್ಯದಿಂದ 26 ಸಂಸದರು ಪಾರ್ಲಿಮೆಂಟ್ ನಲ್ಲಿದ್ದಾರೆ. ನೀವ್ಯಾಕೆ ಕೇಂದ್ರ ಸರ್ಕಾರವನ್ನು (Union Government) ಪ್ರಶ್ನಿಸುವುದಿಲ್ಲ ಅಂತ ಮಾಧ್ಯಮದವರು ಕೇಳಿದಾಗ ಒಂದು ಕ್ಷಣ ತಬ್ಬಿಬಾದ ಸಂಸದೆ, ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ತಮಿಳುನಾಡುಗೆ ನೀರು ಹರಿಬಿಡಲಾಗಿತ್ತು, ಅದನ್ನು ವಿರೋಧಿಸಿ ಆಗ ಸಂಸದರಾಗಿದ್ದ ಅಂಬರೀಶ್ ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಿದರು. ಆದರೆ, ಕಾವೇರಿ ನದಿ ನೀರು ವಿವಾದ ಕೇವಲ ರಾಜಕೀಯಕ್ಕೆ ಸೀಮಿತವಾದುದಲ್ಲ, ಇದು ಎಲ್ಲ ಕನ್ನಡಿಗರ ಸಮಸ್ಯೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ