ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಚಮತ್ಕಾರ; ಐದು ದಿನಗಳಿಂದ ಗರ್ಭಗುಡಿಯಲ್ಲಿದ್ದ ನಾಗರ ಇಂದು ಹೊರಟ್ಟಿದ್ದು ಹೀಗೆ

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಚಮತ್ಕಾರ; ಐದು ದಿನಗಳಿಂದ ಗರ್ಭಗುಡಿಯಲ್ಲಿದ್ದ ನಾಗರ ಇಂದು ಹೊರಟ್ಟಿದ್ದು ಹೀಗೆ

TV9 Web
| Updated By: ಆಯೇಷಾ ಬಾನು

Updated on: Aug 21, 2023 | 3:43 PM

ಗೋಕರ್ಣ ಶ್ರೀ ಮಹಾಬಲೇಶ್ವರನ ಗರ್ಭಗುಡಿಯ ಬಾಗಿಲಲ್ಲಿ ಅಡಗಿದ್ದ ಹಾವನ್ನು ಹೊರತೆಗೆದು ಸುರಕ್ಷಿತವಾಗಿ ಬಿಡಲು ಉರಗ ತಜ್ಞರಾದ ಅಶೋಕ ನಾಯ್ಕ ತದಡಿ, ಸ್ನೇಕ್ ಬಾಬಣ್ಣ ನಿರಂತರ ಪ್ರಯತ್ನ ಮಾಡಿದ್ದರು. ಆದರೆ ಬಾಗಿಲ ಮೇಲ್ಭಾಗದಲ್ಲಿ ಚಿಕ್ಕ ಸಂಧಿಯಲ್ಲಿ ಹಾವು ಸೇರಿಕೊಂಡ ಕಾರಣ ಹೊರತೆಗೆಯಲಾಗಿರಲಿಲ್ಲ. ಹಲವು ದಿನ ಒಂದೇ ಸ್ಥಳದಲ್ಲಿ ಉಳಿದುಕೊಂಡಿದ್ದ ನಾಗರ ಹಾವು ಇಂದು ನಾಗರ ಪಂಚಮಿಯ ದಿನ ಹೊರಗೆ ಹೋಗಿದೆ.

ಕಾರವಾರ, ಆ.21: ಗೋಕರ್ಣ ಶ್ರೀ ಮಹಾಬಲೇಶ್ವರನ ಗರ್ಭಗುಡಿಯಲ್ಲಿ ಅಪರೂಪದ ಘಟನೆ ನಡೆದಿದೆ. ಸುಮಾರು ಐದು ದಿನಗಳ ಕಾಲ ಗರ್ಭಗುಡಿಯ ಬಾಗಿಲನ ಮೇಲೆ ಠಿಕಾಣಿ ಹೂಡಿದ್ದ ನಾಗರಾಜ ಇಂದು ದೇವಸ್ಥಾನದಿಂದ ಹೊರಕ್ಕೆ ಹೋಗಿದ್ದಾರೆ. ನಾಗರ ಹಾವು ಹೊರ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಂಜೆ ದೇವರ ದರ್ಶನಕ್ಕೆ ಭಕ್ತರನ್ನು ಬಿಡುವ ಸಮಯದಲ್ಲಿ ಹಾವು ಕಾಣಿಸಿಕೊಂಡಿತ್ತು. ನಂತರ ಹಾವನ್ನು ಹೊರತೆಗೆದು ಸುರಕ್ಷಿತವಾಗಿ ಬಿಡಲು ಉರಗ ತಜ್ಞರಾದ ಅಶೋಕ ನಾಯ್ಕ ತದಡಿ, ಸ್ನೇಕ್ ಬಾಬಣ್ಣ ನಿರಂತರ ಪ್ರಯತ್ನ ಮಾಡಿದ್ದರು. ಆದರೆ ಬಾಗಿಲ ಮೇಲ್ಭಾಗದಲ್ಲಿ ಚಿಕ್ಕ ಸಂಧಿಯಲ್ಲಿ ಹಾವು ಸೇರಿಕೊಂಡ ಕಾರಣ ಹೊರತೆಗೆಯಲಾಗಿರಲಿಲ್ಲ. ಹಲವು ದಿನ ಒಂದೇ ಸ್ಥಳದಲ್ಲಿ ಉಳಿದುಕೊಂಡಿದ್ದ ನಾಗರ ಹಾವು ಇಂದು ನಾಗರ ಪಂಚಮಿಯ ದಿನ ಹೊರಗೆ ಹೋಗಿದೆ. ನಾಗರಾಜ ಹೊರಗೆ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಮೂಲಕ ದೇವಸ್ಥಾನ ಆಡಳಿತ ಮತ್ತು ಸಿಬ್ಬಂದಿಗಳಿಗಿದ್ದ ಆತಂಕ ದೂರವಾಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ