AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?

Daily Devotional: ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?

ಅಕ್ಷಯ್​ ಪಲ್ಲಮಜಲು​​
|

Updated on: Jan 01, 2026 | 7:00 AM

Share

ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಯಾರು ಬೇಕಾದರೂ ಇಟ್ಟುಕೊಳ್ಳಬಹುದು. ದೇವರ ಮನೆ ಸೂಕ್ತ ಸ್ಥಳವಾಗಿದ್ದು, ತ್ರಿಕಾಲ ಆರತಿಯೊಂದಿಗೆ ಹಾಲ್‌ನಲ್ಲಿಯೂ ಇಡಬಹುದು. ಮಲಗುವ ಕೋಣೆ ಅಥವಾ ಅಶುದ್ಧ ಸ್ಥಳಗಳಲ್ಲಿ ಇಡಬಾರದು. ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಶನಿ ದೋಷ, ನವಗ್ರಹ ದೋಷ ನಿವಾರಣೆಯಾಗಿ, ಮನೆಗೆ ಶುಭ ಫಲಗಳು ಪ್ರಾಪ್ತವಾಗುತ್ತವೆ.

ಬೆಂಗಳೂರು, ಜ.1: ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ ಎಂಬ ಪ್ರಶ್ನೆಗೆ ಸ್ಪಷ್ಟ ಮಾಹಿತಿಯನ್ನು ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ನೀಡಿದ್ದಾರೆ. ಮಾಲಾಧಾರಿಗಳು ಮಾತ್ರವಲ್ಲದೆ, ಶ್ರದ್ಧಾ ಭಕ್ತಿ ಇರುವ ಯಾರಾದರೂ ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಬಹುದು. ಅಯ್ಯಪ್ಪ ಸ್ವಾಮಿ ಚಿನ್ಮುದ್ರೆಯಲ್ಲಿ, 18 ಮೆಟ್ಟಿಲುಗಳೊಂದಿಗೆ ಕುಳಿತಿರುವ ಭಂಗಿಯಲ್ಲಿರುವ ಫೋಟೋ ಜನಪ್ರಿಯವಾಗಿದೆ. ಇನ್ನು ಅಯ್ಯಪ್ಪನ ಫೋಟೋವನ್ನು ಇಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಸಿಂಹದ್ವಾರದ ಮೇಲೆ ಅಥವಾ ವಾಹನಗಳಲ್ಲಿ ವರ್ಷವಿಡೀ ಇಡುವುದು ಸೂಕ್ತವಲ್ಲ. ವಾಹನದಲ್ಲಿ ಯಾತ್ರೆಯ ಸಮಯದಲ್ಲಿ ರಕ್ಷಣೆಯಾಗಿ ಇಡಬಹುದು. ಮನೆಯಲ್ಲಿ, ದೇವರ ಮನೆ ಅತ್ಯಂತ ಶುಭಕರವಾದ ಸ್ಥಳ. ಹಾಲ್‌ನಲ್ಲಿ ಇಡಲು ಬಯಸಿದರೆ, ಫೋಟೋಗೆ ತ್ರಿಕಾಲ ಆರತಿ ಮಾಡಬೇಕು. ಮಲಗುವ ಕೋಣೆ ಅಥವಾ ಅಶುದ್ಧ ಸ್ಥಳಗಳಲ್ಲಿ ಫೋಟೋ ಇಡುವುದು ಸರಿಯಲ್ಲ. ಶುದ್ಧ ಮತ್ತು ಪವಿತ್ರ ಸ್ಥಳಗಳಲ್ಲಿ ಇಟ್ಟು, ನಿತ್ಯ ಕರ್ಪೂರದ ಆರತಿ, ಪ್ರಾರ್ಥನೆ ಮತ್ತು ವಾರಕ್ಕೊಮ್ಮೆ ಬೆಲ್ಲದಿಂದ ಮಾಡಿದ ಸಿಹಿ ನೈವೇದ್ಯವನ್ನು ಅರ್ಪಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. “ಸ್ವಾಮಿಯೇ ಶರಣಂ ಅಯ್ಯಪ್ಪ” ಘೋಷವನ್ನು ಪಠಿಸುವುದು ಶ್ರೇಷ್ಠ. ಹೀಗೆ ಶ್ರದ್ಧೆಯಿಂದ ಪೂಜಿಸುವುದರಿಂದ ಸಾಡೇಸಾತಿ, ಅಷ್ಟಮ, ಪಂಚಮ ಶನಿ ಕಾಟಗಳ ತೀವ್ರತೆ ಕಡಿಮೆಯಾಗುತ್ತದೆ. ನವಗ್ರಹ ದೋಷ ನಿವಾರಣೆಯಾಗಿ, ಮಾಟ-ಮಂತ್ರದ ದೃಷ್ಟಿ ಮನೆಯನ್ನು ಪ್ರವೇಶಿಸುವುದಿಲ್ಲ. ಮನೆಯ ಕಲಹಗಳು ಇತ್ಯರ್ಥವಾಗಿ, ಮಾನಸಿಕ ತೃಪ್ತಿ ಮತ್ತು ಸಂತೃಪ್ತಿ ಪ್ರಾಪ್ತವಾಗುತ್ತದೆ. ಇವೆಲ್ಲವೂ ನಂಬಿಕೆಯ ಆಧಾರದ ಮೇಲೆ ನಿಂತಿವೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ