ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಹಿರೋಷಿಮಾದ(Hiroshima) ಶೆರಾಟನ್ ಹೋಟೆಲ್‌ಗೆ ಆಗಮಿಸಿದ್ದು ಜಪಾನ್‌ನಲ್ಲಿ (Japan) ನೆಲೆಸಿರುವ ಭಾರತೀಯರನ್ನು ಭೇಟಿಯಾಗಿದ್ದಾರೆ. ಮೇ 19 ಮತ್ತು 21 ರ ನಡುವೆ ನಡೆಯಲಿರುವ ವಾರ್ಷಿಕ G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಇಂದು ಸಂಜೆ ಜಪಾನ್‌ಗೆ ಬಂದಿಳಿದಿದ್ದಾರೆ. 1974 ರಲ್ಲಿ ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆಗಳನ್ನು ನಡೆಸಿದ ನಂತರ ಭಾರತದ ಪ್ರಧಾನಿಯೊಬ್ಬರು ಜಪಾನ್ ನಗರಕ್ಕೆ ಇದು ಮೊದಲ ಭೇಟಿಯಾಗಿದೆ. 1945 ರಲ್ಲಿ ಪರಮಾಣು ಬಾಂಬ್ ದಾಳಿಗೆ ಒಳಗಾದ ಹಿರೋಷಿಮಾಕ್ಕೆ ಪ್ರಧಾನಿ ಜವಾಹರಲಾಲ್ ನೆಹರು ಅವರು 1957 ರಲ್ಲಿ ಭೇಟಿ ನೀಡಿದ್ದರು. ಮೇ 19 ಮತ್ತು 21 ರ ನಡುವೆ ನಡೆಯಲಿರುವ ವಾರ್ಷಿಕ ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಜಪಾನ್‌ಗೆ ಬಂದಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರ ಹಿರೋಷಿಮಾದ ಶೆರಾಟನ್ ಹೋಟೆಲ್‌ಗೆ ಆಗಮಿಸಿದ ಭಾರತೀಯರನ್ರಾನು ಭೇಟಿ ಮಾಡಿದರು.
ಜಪಾನ್‌ಗೆ ಆಗಮಿಸುವ ಮುನ್ನ ನಿಕ್ಕಿ ಏಷ್ಯಾಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು, ಹಿರೋಷಿಮಾದಲ್ಲಿ ನಡೆಯುವ ಜಿ7 ಶೃಂಗಸಭೆಯಲ್ಲಿ ‘ಜಾಗತಿಕ ದಕ್ಷಿಣ ರಾಷ್ಟ್ರಗಳ ಧ್ವನಿಗಳು ಮತ್ತು ಕಾಳಜಿಗಳ ಬಗ್ಗೆ ಮಾತನಾಡುವುದಾಗಿ ಹೇಳಿದ್ದರು.
#WATCH | Japan: Prime Minister Narendra Modi interacts with the members of the Indian diaspora as he reaches Sheraton Hotel in Hiroshima. pic.twitter.com/9Zj5Ye76tS
— ANI (@ANI) May 19, 2023
ಈ ವರ್ಷ ಭಾರತವು G20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ ಈ G7 ಶೃಂಗಸಭೆಯಲ್ಲಿ ನನ್ನ ಉಪಸ್ಥಿತಿಯು ವಿಶೇಷವಾಗಿ ಅರ್ಥಪೂರ್ಣವಾಗಿದೆ. ನಾನು G7 ದೇಶಗಳು ಮತ್ತು ಇತರ ಆಹ್ವಾನಿತ ಪಾಲುದಾರರೊಂದಿಗೆ ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಒಟ್ಟಾಗಿ ಪರಿಹರಿಸುವ ಅಗತ್ಯತೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಚೀನಾದೊಂದಿಗಿನ ಸಹಜ ಬಾಂಧವ್ಯಕ್ಕೆ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಜಿ7 ಶೃಂಗಸಭೆಯಲ್ಲಿ ಜಾಗತಿಕ ದಕ್ಷಿಣ ರಾಷ್ಟ್ರಗಳ ಕಾಳಜಿ ಬಗ್ಗೆ ಮಾತನಾಡುವೆ: ನರೇಂದ್ರ ಮೋದಿ
ವಿವಾದಿತ ಹಿಮಾಲಯ ಗಡಿಯಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಘರ್ಷಣೆ ನಡೆಸಿ 24 ಜನರನ್ನು ಕೊಂದಿದ್ದರಿಂದ 2020 ರಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿವೆ. ಭಾರತ-ಚೀನಾ ಸಂಬಂಧಗಳು ಪರಸ್ಪರ ಗೌರವ, ಪರಸ್ಪರ ಸೂಕ್ಷ್ಮತೆ ಮತ್ತು ಪರಸ್ಪರ ಹಿತಾಸಕ್ತಿಗಳ ಆಧಾರದ ಮೇಲೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಪಾನಿನ ಸುದ್ದಿ ಸಂಸ್ಥೆ ನಿಕ್ಕಿ ಏಷ್ಯಾಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ