ಕೇರಳದಲ್ಲಿ ಮತ್ತೆ ಬಾಂಬ್ ಸದ್ದು ಕೇಳಿಸಿದೆ, ತಿರುವನಂತಪುರಂ ಬಳಿಯ ಪೆರುಮಾತುರದಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಮನೆಗಳ ಮೇಲೆ ನಾಡ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ವಾಹನದ ಬಳಿ ಬಾಂಬ್ ಸ್ಫೋಟಗೊಂಡಿದ್ದರಿಂದ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಈ ಸಂಬಂಧ ಅಟ್ಟಿಂಗಲ್ ನಿವಾಸಿಗಳಾದ ಸಫೀರ್, ಆಕಾಶ್ ಮತ್ತು ಅಬ್ದುಲ್ ರಹಿಮಾನ್ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, ಇಬ್ಬರು ಸ್ಥಳೀಯರು ಕಾರಿನಲ್ಲಿ ಮದ್ಯ ಸೇವಿಸುತ್ತಿರುವುದನ್ನು ನೋಡಿ ಗ್ಯಾಂಗ್ ಒಂದು ಕೋಪಗೊಂಡಿತ್ತು ಮತ್ತು ದಾಂಧಲೆ ನಡೆಸಿತು.
ಸಮೀಪದ ಮನೆಗಳಲ್ಲಿ ಆಶ್ರಯ ಪಡೆದ ಯುವಕರನ್ನು ತಂಡವು ಬೆನ್ನಟ್ಟಿತ್ತು, ಆಗ ದುಷ್ಕರ್ಮಿಗಳು ನಾಡ ಬಾಂಬ್ ಅನ್ನು ಅಲ್ಲಿದ್ದ ಮನೆಗಳ ಮೇಲೆ ಎಸೆದು ಭಯದ ವಾತಾವರಣ ಸೃಷ್ಟಿಸಿದರು.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳೊಬ್ಬರ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಕೇರಳ: ಕಳಮಶ್ಶೇರಿ ಸ್ಫೋಟ; ಆರೋಪಿ ಡೊಮಿನಿಕ್ ಮನೆಯಲ್ಲೇ ತಯಾರಿಸಿದ್ದ ಬಾಂಬ್
ಮತ್ತೊಂದು ಘಟನೆ
ಕೇರಳದ ಎರ್ನಾಕುಲಂನಲ್ಲಿ ಕ್ರೈಸ್ತ ಸಮುದಾಯದವರು ಕಳಮಶ್ಶೇರಿ ಎಂಬಲ್ಲಿ ಪ್ರಾರ್ಥನಾ ಸಭೆ ನಡೆಸುತ್ತಿದ್ದ ಜಾಗದಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿತ್ತು. ಮೂವರು ಮೃತಪಟ್ಟಿದ್ದರು.
ಕೊಚ್ಚಿಯಿಂದ ಈಶಾನ್ಯಕ್ಕೆ ಸುಮಾರು 10 ಕಿ.ಮೀ ದೂರದಲ್ಲಿರುವ ಕಳಮಶ್ಶೇರಿಯ ಯಹೋವನ ಪಂಥದ ಕಾರ್ಯಕ್ರಮದ ವೇಳೆ ಸ್ಫೋಟ ಸಂಭವಿಸಿದೆ.
ಘಟನೆ ನಡೆದ ಕೆಲವು ಗಂಟೆಗಳ ಬಳಿಕ, ಯಹೋವನ ಪಂಥದ ಸದಸ್ಯನೆಂದು ಹೇಳಿಕೊಂಡ 48 ವರ್ಷದ ಡಾಮಿನಿಕ್ ಮಾರ್ಟಿನ್ ಎಂಬಾತ್ ತಾನೇ ಸ್ಫೋಟಕ್ಕೆ ಕಾರಣ ಎಂದು ಪೊಲೀಸರಿಗೆ ಶರಣಾಗಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Tue, 31 October 23