ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಭಾರತವು ನಿರಂತರವಾಗಿ ಉನ್ನತ ಮಟ್ಟಕ್ಕೆ ಏರುತ್ತಿರುವುದರಿಂದ ಜನರು ಭಾರತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಕ್ರೂಸ್ ಪ್ರವಾಸೋದ್ಯಮದ (Cruise Tourism) ಉದಯವು ನಮ್ಮ ಯುವಶಕ್ತಿಗೆ ಮತ್ತಷ್ಟು ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಭಾರತದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಪ್ರಾರಂಭವಾಗುತ್ತಿರುವ ಸಮಯದಲ್ಲಿ ಕ್ರೂಸ್ ಟೂರಿಸಂ ಮತ್ತು ಹೆರಿಟೇಜ್ ಟೂರಿಸಂನ ಈ ಸಂಗಮವು ದೇಶದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
ವಾರಾಣಸಿಯಲ್ಲಿ ಜಗತ್ತಿನ ಅತಿ ಉದ್ದನೆಯ ನದಿ ವಿಹಾರವಾದ ಗಂಗಾ ವಿಲಾಸ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2014ರ ಮೊದಲು ಜಲಮಾರ್ಗಗಳ ಬಳಕೆ ತುಂಬಾ ಸೀಮಿತವಾಗಿತ್ತು. ಭಾರತದ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಜಲಮಾರ್ಗಗಳನ್ನು ಹೆಚ್ಚು ಉಪಯೋಗಿಸಿಕೊಳ್ಳಲು ನಾವು ಪ್ರಯತ್ನಗಳನ್ನು ಮಾಡಿದ್ದೇವೆ. ಭಾರತದ ಹೊಸ ಲಾಜಿಸ್ಟಿಕ್ಸ್ ನೀತಿಯಲ್ಲಿ ಜಲಮಾರ್ಗಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಜಲಮಾರ್ಗಗಳು ಭಾರತದ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದಿದ್ದಾರೆ.
Beginning of cruise service on River Ganga is a landmark moment. It will herald a new age of tourism in India. https://t.co/NOVFLFrroE
— Narendra Modi (@narendramodi) January 13, 2023
ಈ ವಿಹಾರ ಪ್ರತಿಯೊಬ್ಬರಿಗೂ ಪ್ರವಾಸೋದ್ಯಮವನ್ನು ಆನಂದಿಸುವುದು ಮತ್ತು ಭಾರತದಲ್ಲಿನ ನದಿಗಳ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಕ್ರೂಸ್ 25 ವಿವಿಧ ನದಿ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆ. ಇದು ಪ್ರವಾಸಿಗರಿಗೆ ಭಾರತದ ಅಮೂಲ್ಯ ಮತ್ತು ಪ್ರಸಿದ್ಧ ಭಕ್ಷ್ಯಗಳನ್ನು ಅನುಭವಿಸಲು ಅವಕಾಶ ನೀಡುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
This cruise will traverse through 25 various River Systems, giving a sense of joy. It will also let tourists experience the precious and famous delicacies of India.
– PM @narendramodi #LongestRiverCruise pic.twitter.com/hHsat7K8MK
— BJP (@BJP4India) January 13, 2023
ಇಂದು ನಮ್ಮ ಕಾಶಿಯ ರಸ್ತೆಗಳು ಅಗಲವಾಗುತ್ತಿವೆ, ಗಂಗಾ ನದಿಯ ಘಾಟ್‌ಗಳು ಸ್ವಚ್ಛವಾಗುತ್ತಿವೆ ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ನಂತರ ಭಕ್ತರಲ್ಲಿ ಅಭೂತಪೂರ್ವ ಉತ್ಸಾಹ ಗೋಚರಿಸುತ್ತಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ದೃಢವಾದ ಸಂಪರ್ಕವು ಬಹಳ ಮುಖ್ಯವಾಗಿದೆ. ನಾವು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ನಾನು ಎಲ್ಲಾ ಪ್ರವಾಸಿಗರಿಗೆ ಸಂತೋಷದ ಪ್ರಯಾಣವನ್ನು ಬಯಸುತ್ತೇನೆ. ನಮ್ಮ ನದಿಗಳು ಜಲಶಕ್ತಿ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚು ಅಗತ್ಯವಿರುವ ಉತ್ತೇಜನವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
India has been making her heritage strengths the ignition for a highly developed transportation system in her modern avatar.
– PM @narendramodi
#LongestRiverCruise pic.twitter.com/BTCYjmeT7n— BJP (@BJP4India) January 13, 2023
ಎಲ್ಲಾ ವಿದೇಶಿ ಸಂದರ್ಶಕರಿಗೆ ನನ್ನ ಬಳಿ ಸಂದೇಶವಿದೆ, ಭಾರತವು ನೀವು ಊಹಿಸಬಹುದಾದ ಮತ್ತು ನಿಮ್ಮ ಊಹೆಗೆ ಮೀರಿದ ಎಲ್ಲವನ್ನೂ ಹೊಂದಿದೆ. ಭಾರತವನ್ನು ಪದಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ, ಅದನ್ನು ಅನುಭವಿಸಲು ಮಾತ್ರ ಸಾಧ್ಯ ಎಂದು ಮೋದಿ ಹೇಳಿದ್ದಾರೆ.
WATCH LIVE
PM @narendramodi to flag off MV Ganga Vilas Cruise, the world’s longest river cruise
?: https://t.co/1Zj6BusuAu pic.twitter.com/7C1IQZ8ZVI
— MyGovIndia (@mygovindia) January 13, 2023
ಗಂಗಾ ನಮಗೆ ಕೇವಲ ನದಿಯಲ್ಲ. ಇದು ಭಾರತದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಹೊಸ ವಿಧಾನದೊಂದಿಗೆ ನಾವು ನಮಾಮಿ ಗಂಗೆ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಭಾರತದ ಪರಿಸ್ಥಿತಿಗಳು ಏನೇ ಇದ್ದರೂ ಗಂಗಾ ಮಾತೆ ಭಾರತೀಯರನ್ನು ಪೋಷಿಸಿದ್ದಾಳೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.