ಪಂಜಾಬ್‌ನಲ್ಲಿ ದರೋಡೆಕೋರರು ವ್ಯಾಪರಿಗಳಿಂದ ಮತ್ತು ಜನರಿಂದ ಸುಲಿಗೆ ಮಾಡಿದ ಹಣವನ್ನು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ( NIA) ಚಾರ್ಜ್ ಶೀಟ್ನಲ್ಲಿ ಈ ಅಂಶ ಹೊರಬಿದ್ದಿದೆ. ಇತ್ತೀಚೆಗೆ ಸಲ್ಲಿಸಿದ ಆರೋಪಪಟ್ಟಿ ಪ್ರಕಾರ, ಖಲಿಸ್ತಾನ್ ಬೆಂಬಲಿಗರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಸಹಾಯದಿಂದ ಪಂಜಾಬ್ನಲ್ಲಿರುವ ದರೋಡೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದಾರೆ. ಇನ್ನು ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಿಗಿಭದ್ರತೆ ಇರುವ ಕಾರಣ ನೇಪಾಳದ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದಾರೆ ಎಂದು ಎನ್ಐಎ ವರದಿಯಲ್ಲಿ ತಿಳಿಸಿದೆ.
ಈ ಶಸ್ತ್ರಾಸ್ತ್ರಗಳನ್ನು ಪಂಜಾಬ್ ದರೋಡೆಕೋರರಿಗೆ ಕಳುಹಿಸಲು ವಿದೇಶದಲ್ಲಿ ಕುಳಿತಿರುವ ಖಲಿಸ್ತಾನಿ ಉಗ್ರರು ಆದೇಶ ನೀಡುತ್ತಿದ್ದಾರೆ. ಇನ್ನು ಈ ಕೃತ್ಯಕ್ಕಾಗಿ ಇಂಟರ್ನೆಟ್ ಮಾಧ್ಯಮ, ಸಿಗ್ನಲ್ ಅಪ್ಲಿಕೇಶನ್ ಮತ್ತು ವಾಟ್ಸಾಪ್ಗಳನ್ನು ಬಳಸಲಾಗುತ್ತದೆ. ಈ ದರೋಡೆಕೋರರು ವಿದೇಶದಲ್ಲಿ ಕುಳಿತಿರುವ ಖಲಿಸ್ತಾನಿ ಉಗ್ರರು ಆದೇಶದಂತೆ ಕೆಲಸ ಮಾಡುತ್ತಾರೆ. ಜತೆಗೆ ಭಾರತದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಖಲಿಸ್ತಾನಿ ಉಗ್ರರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು NIA ವರದಿಯಲ್ಲಿ ಹೇಳಿದೆ.
ಈ ಕೃತ್ಯಕ್ಕೆ ಖಲಿಸ್ತಾನಿನ ಭಯೋತ್ಪಾದಕರು ಜೈಲಿನಲ್ಲಿರುವ ದರೋಡೆಕೋರರು ಹಾಗೂ ಗೂಂಡಾಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಭಯೋತ್ಪಾದಕ ಅರ್ಷ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ, ದರೋಡೆಕೋರ ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಅನೇಕ ಗುಂಪುಗಳು ಇವರ ಜತೆಗೆ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: NIA ಪೊಲೀಸರ ಕಾರ್ಯಚರಣೆ; ಕರ್ನಾಟಕದ ಭಯೋತ್ಪಾದನಾ ಚಟುವಟಿಕೆಯ ಕಿಂಗ್ ಪಿನ್ ಅರಾಫತ್ ಅಲಿ ಬಂಧನ
ಎನ್ಐಎ 2020ರಲ್ಲಿ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಅರ್ಷ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ ಇಂತಹ ಕೃತ್ಯಗಳಲ್ಲಿ ತೋಡಗಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಈ ದರೋಡೆಕೋರರ ಗುಂಪುಗಳು ಭಯೋತ್ಪಾದಕ ನಿಧಿ, ಭಯೋತ್ಪಾದಕ ಜಾಲಗಳನ್ನು ಸಂಘಟಿಸುವುದು , ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆಯನ್ನು ಸಂಘಟಿಸುವುದು ಮತ್ತು ಪಂಜಾಬ್‌ನಲ್ಲಿ ಉದ್ದೇಶಿತ ಹತ್ಯೆಗಳನ್ನು ಮಾಡುವುದು ಇದರ ಮುಖ್ಯ ಕೆಲಸವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2022 ಆಗಸ್ಟ್ ಮೂವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಇದರಿಂದ ದುಬೈ, ಪಾಕಿಸ್ತಾನ, ನೇಪಾಳ ಮತ್ತು ಭಾರತದಾದ್ಯಂತ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಪತ್ತೆ ಮಾಡಲು ಸಹಕಾರಿಯಾಗಿತ್ತು.
ಎನ್ಐಎ ದಿನದಿಂದ ದಿನಕ್ಕೆ ಒಂದೊಂದೇ ಸತ್ಯಗಳು ತನ್ನ ಚಾರ್ಜ್ ಶೀಟ್ನಲ್ಲಿ ತಿಳಿಸುತ್ತಿದೆ. ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಜಾಲವನ್ನು ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇನ್ನು ಕೆನಡಾದಲ್ಲಿ ಕುಳಿತು ಅರ್ಷ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ ಈ ಎಲ್ಲ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Tue, 3 October 23