ಎಲ್ಲ ಟ್ರೇನುಗಳ 2ಎಸ್ ಕೋಚ್​ಗಳು ಇನ್ನುಮುಂದೆ ಅನ್​ರಿಸರ್ವ್ಡ್​ ಕ್ಲಾಸ್ ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ: ಇಂಡಿಯನ್ ರೇಲ್ವೇಸ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 01, 2022 | 12:10 AM

2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ.

ಎಲ್ಲ ಟ್ರೇನುಗಳ 2ಎಸ್ ಕೋಚ್​ಗಳು ಇನ್ನುಮುಂದೆ ಅನ್​ರಿಸರ್ವ್ಡ್​ ಕ್ಲಾಸ್ ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ: ಇಂಡಿಯನ್ ರೇಲ್ವೇಸ್
ಇಂಡಿಯನ್ ರೇಲ್ವೇಸ್
Follow us on

ನಿಮಗೆ ಗೊತ್ತಿದೆ, ಕೋವಿಡ್-19 ಪಿಡುಗು ರೈಲು ಸಂಚಾರ, ಸೀಟು ಆಥವಾ ಬರ್ತ್​ಗಳ ಬುಕಿಂಗ್ ಮೇಲೂ ಪ್ರಭಾವ ಬೀರಿತ್ತು. ಕೋವಿಡ್ ಸೋಂಕಿನ ಪ್ರಭಾವ ಈಗ ತಗ್ಗಿರುವ ಕಾರಣ ಇಂಡಿಯನ್ ರೇಲ್ವೇಸ್ (Indian Railways) ಎಲ್ಲ ಟ್ರೇನುಗಳು ಮೊದಲು ಅಂಕಿತಗೊಂಡಿದ್ದ ರೈಲುಗಾಡಿಯ ನಂಬರ್ ಅನುಸಾರವಾಗಿಯೇ ಸಂಚಾರ ಆರಂಭಿಸಿವೆ. ಸಾಮಾನ್ಯ ಟ್ರೇನ್​ಗಳಲ್ಲಿ ಮೊದಲಿನ ಹಾಗೆ ಅಂದರೆ, ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಇರುತ್ತಿದ್ದ ಹಾಗೆ ಸಾಮಾನ್ಯ ಕೋಚ್ಗಳನ್ನು (general coaches), ರಿಸರ್ವ್ಡ್ (reserved) (ಕಾಯ್ದಿಟ್ಟ) ಮತ್ತು ಅನ್​ರಿಸರ್ವ್ಡ್​(ಸಾಮಾನ್ಯ) (unreserved) ಎಂದು ಗುರುತಿಲಸಲಾಗಿದೆ. ಇದನ್ನು ಮತ್ತಷ್ಟು ಸರಳ ಭಾಷೆಯಲ್ಲಿ ಹೇಳುವುದಾದರೆ, ಕೋವಿಡ್ ಪಿಡುಗುಗಿಂತ ಮುಂಚೆ ಒಂದು ನಿರ್ದಿಷ್ಟ ಟ್ರೇನು 4 ಅನ್ರಿಸರ್ವ್ಡ್ ಜನರಲ್ ಸೀಟಿಂಗ್ ಕೋಚ್ಗಳನ್ನು ಹೊಂದಿದ್ದರೆ ಅವನ್ನು ಈಗ 2ಎಸ್ (ಸೆಕೆಂಡ್ ಸೀಟಿಂಗ್) ಅನ್​ರಿಸರ್ವ್ಡ್​ ವರ್ಗ (ಕ್ಲಾಸ್) ಕೋಚ್​ಗಳಾಗಿ ಪರಿಗಣಿಸಲಾಗುತ್ತದೆ ಅಂತ ರೇಲ್ವೆ ಇಲಾಖೆ ಪ್ರಕಟಣೆಯೊಂದು ತಿಳಿಸುತ್ತದೆ.

2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ. ನೀವು ಸೀಟನ್ನು 120 ದಿನಗಳಷ್ಟು ಮೊದಲು ಮುಂಗಡ ಬುಕಿಂಗ್ ಮಾಡಬಹುದಿತ್ತು. ಅಂದರೆ ಈಗಾಗಲೇ ಬುಕಿಂಗ್ ಆಗಿರುವುದು ಕೊನೆಗೊಂಡ ಕೂಡಲೇ ಈ ಕೋಚ್ ಗಳು ಅನ್​ರಿಸರ್ವ್ಡ್​ (ಸಾಮಾನ್ಯ) ಆಗಿಬಿಡುತ್ತವೆ.

ರೇಲ್ವೇಸ್ ಪ್ರಕಟಣೆ

ಅಷ್ಟಾಗಿಯೂ ಒಂದು ರೈಲು ಕೆಲ ಜಿಎಸ್​ಸಿಜೆಡ್ ಅಥವಾ ಅದೇ ರೀತಿಯ ಕೋಚ್‌ಗಳನ್ನು ಕಾಯ್ದಿರಿಸಿದ ಎರಡನೇ ಸಿಟ್ಟಿಂಗ್ ಕೋಚ್‌ಗಳಾಗಿ (2S ವರ್ಗ) ಕೋವಿಡ್ ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಓಡುತ್ತಿದ್ದರೆ, ಅವುಗಳು ಈಗಲೂ ಆ ರೈಲುಗಳಲ್ಲಿ ಕಾಯ್ದಿರಿಸಿದ ಸಿಟ್ಟಿಂಗ್ ಕೋಚ್‌ಗಳಾಗಿ ಮುಂದುವರಿಯುತ್ತವೆ.

ರಜಾದಿನ ವಿಶೇಷ (Holiday Special) ಅಥವಾ ಇತರ ವಿಶೇಷ ರೈಲುಗಳಲ್ಲಿ, ಸಾಂಕ್ರಾಮಿಕ ರೋಗದ ಮುಂಚಿನ ಅವಧಿಯಲ್ಲಿ ಚಾಲ್ತಿಯಲ್ಲಿರುವಂತೆ ಸಾಮಾನ್ಯ ಕೋಚ್‌ಗಳನ್ನು ಕಾಯ್ದಿರಿಸಲಾಗಿದೆ ಅಥವಾ ಕಾಯ್ದಿರಿಸಲಾಗಿಲ್ಲ ಅಂತಲೇ ಪರಿಗಣಿಸಲಾಗುವುದು.

ಇದನ್ನೂ ಓದಿ:   ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!