ಪ್ರಕಾಶಂ ಜಿಲ್ಲೆಯ ಗಿಡ್ಡಲೂರಿನಲ್ಲಿ ಕೇವಲ ಎರಡು ಗಂಟೆಯಲ್ಲಿ ಕಳ್ಳತನ ಪ್ರಕರಣವನ್ನು ಭೇದಿಸುವ ಮೂಲಕ ಪ್ರಕಾಶಂ ಜಿಲ್ಲೆಯ ಪೊಲೀಸರು (Prakasam district police) ದಾಖಲೆ ಮಾಡಿದ್ದಾರೆ. ಗಿಡ್ಡಲೂರು ಮಂಡಲದ ಮಕಿಟ್ಟಮೀದಪಲ್ಲಿ ಗ್ರಾಮದ ಬಳಿ ಇರುವ ಕಾಸಿನಾಯನ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದರು (temple lift). ದೇವಸ್ಥಾನದ ಒಳಗಿದ್ದ ಕಾಶಿನಾಯನ ಪಂಚಲೋಹ ಮೂರ್ತಿ ಹಾಗೂ ದೇವಸ್ಥಾನದ ಹೊರಗಿದ್ದ ಕಮಾಂಡರ್ ಜೀಪನ್ನು ಕಳ್ಳರು ಕದ್ದೊಯ್ದಿದ್ದಾರೆ.
ದೇವಸ್ಥಾನದ ಅರ್ಚಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂತ್ರಜ್ಞಾನ ಬಳಸಿ ತಕ್ಷಣ ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಯು ತಿರುಗಿದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳರ ಜಾಡು ಗುರುತಿಸಿದ್ದಾರೆ. ಆದರೆ, ಪೊಲೀಸರು ತಮ್ಮನ್ನು ಗುರುತಿಸುತ್ತಾರೆ ಎಂಬ ಭಯದಿಂದ ಆರೋಪಿಗಳು ಪೆದ್ದರವೀಡು ಗ್ರಾಮದ ಬಳಿ ಜೀಪನ್ನು ಬಿಟ್ಟು ಓಡಿ ಹೋಗಿದ್ದಾರೆ.
ಸ್ಥಳಕ್ಕಾಗಮಿಸಿದ ಇನ್ಸ್ಪೆಕ್ಟರ್ ಫಿರೋಜ್ ಹಾಗೂ ಎಸ್‌ಐ ಬ್ರಹ್ಮಾನಾಯ್ಡು ಕಳ್ಳತನವಾಗಿದ್ದ ದೇಗುಲದ ಮಾಲನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ವಸ್ತುಗಳನ್ನು ದೇಗುಲದ ಆಡಳಿತದವರಿಗೆ ಹಸ್ತಾಂತರಿಸಲಾಗಿದೆ. ಕಳ್ಳತನ ಪ್ರಕರಣವನ್ನು ತ್ವರಿತವಾಗಿ ಭೇದಿಸಿ ಕದ್ದ ವಸ್ತುಗಳನ್ನು ಹಿಂದಿರುಗಿಸಿದ ಪೊಲೀಸರಿಗೆ ದೇಗುಲದವರು ಕೃತಜ್ಞತೆ ಸಲ್ಲಿಸಿದರು.
ಕಳ್ಳರು ಎಲ್ಲಿಂದ ಬಂದರು.. ಯಾವ ಏರಿಯಾದವರು..? ಹೊರಗಿನಿಂದ ಬಂದಿದ್ದರಾ? ಈ ಕುರಿತು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳ್ಳರಿಗಾಗಿ ಸಿಬ್ಬಂದಿ ತೀವ್ರ ಶೋಧ ನಡೆದಿದೆ. ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
To read in Telugu click here