ಗುವಾಹಟಿ: 27 ವರ್ಷದ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ (Facebook) ಲೈವ್ ಬಂದು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ತನ್ನ ಪ್ರೇಯಸಿ ತನ್ನನ್ನು ಮದುವೆಯಾಗಲು ನಿರಾಕರಿಸಿದಳು. ಅವಳ ಕುಟುಂಬವು ಅವಳ ಮೇಲೆ ಒತ್ತಡ ಹೇರಿದೆ ಎಂದು ಆತ ಹೇಳಿಕೊಂಡಿದ್ದಾನೆ. ಸೋಮವಾರ ಈತ ಆತ್ಮಹತ್ಯೆ ಮಾಡಿಕೊಂಡಿದ್ದು ಆಘಾತಕ್ಕೊಳಗಾದ ಕುಟುಂಬವು ಇಲ್ಲಿಯವರೆಗೆ ಪೊಲೀಸರ ಮೊರೆ ಹೋಗಲಿಲ್ಲ. ಇದೀಗ ಆತನ ಸಾವಿಗೆ ಆತನ ಪ್ರೇಯಸಿಯ ಮನೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೆಡಿಕಲ್ ಸೇಲ್ಸ್ ವೃತ್ತಿ ಮಾಡುತ್ತಿದ್ದ ಜಯದೀಪ್ ರಾಯ್ ಸಿಲ್ಚಾರ್‌ನಲ್ಲಿರುವ ತಮ್ಮ ಬಾಡಿಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅವರ ಕುಟುಂಬವು ಹತ್ತಿರದ ಕಲಾಯಿನ್‌ನಲ್ಲಿ ವಾಸಿಸುತ್ತಿತ್ತು. “ನಾನು ಮದುವೆಯ ಪ್ರಸ್ತಾಪ ಮಾಡಿದ್ದೆ. ಎಲ್ಲರ ಮುಂದೆ ಅವಳು ನಿರಾಕರಿಸಿದಳು. ನಂತರ ಅವಳ ಮಾವ ನನ್ನ ಬಳಿಗೆ ಬಂದು ನಮ್ಮ ಸಂಬಂಧದ ಕಾರಣದಿಂದ ಆಕೆಯ ಹತ್ಯೆಮಾಡುವುದಾಗಿ ಹೇಳಿದರು. ಅವಳು ನನ್ನಿಂದಾಗಿ ನೋವು ಅನುಭವಿಸಬಾರುದು ಎಂದು ನಾನು ಈ ಲೋಕ ತೊರೆಯುತ್ತಿದ್ದೇನೆ ಎಂದು ಹೇಳಿ ರಾಯ್ ಆತ್ಮಹತ್ಯೆ ಮಾಡಿದ್ದಾನೆ.
ನನ್ನ ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಸಹೋದರಿ, ಅಣ್ಣ, ಸೊಸೆ ಮತ್ತು ಸೋದರ ಮಾವನಿಗೆ ಕ್ಷಮಿಸಿ ಎಂದು ಹೇಳುತ್ತಿದ್ದೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ, ಆದರೆ ನಾನು ನನ್ನ ಗೆಳತಿಯನ್ನು ಹೆಚ್ಚು ಪ್ರೀತಿಸುತ್ತೇನೆ. ಅವಳಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದು ರಾಯ್ ಹೇಳಿದ್ದಾನೆ.
ನಮ್ಮ ಕುಟುಂಬ ತೀವ್ರ ಆಘಾತದಲ್ಲಿದೆ. ಏನು ಮಾಡಬೇಕೆಂದು ನಮಗೆ ಅರ್ಥವಾಗುತ್ತಿಲ್ಲ. ಹಾಗಾಗಿ ಇಲ್ಲಿಯವರೆಗೆ ನಾವು ಯಾವುದೇ ಎಫ್‌ಐಆರ್ ದಾಖಲಿಸಿಲ್ಲ. ಇಂದು ಸಿಲ್ಚಾರ್ ಪೊಲೀಸ್ ಠಾಣೆಗೆ ತೆರಳಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ರಾಯ್ ಅವರ ಸಹೋದರ ರೂಪಂ ರೇ ಹೇಳಿದ್ದಾರೆ.
ಇದನ್ನೂ ಓದಿ:ಭಗವಾನ್ ರಾಮ ಮತ್ತು ಹನುಮಾನ್ ಮೇಲಿನ ಭಕ್ತಿ ಬಿಜೆಪಿಯ ಕಾಪಿರೈಟ್ ಅಲ್ಲ: ಬಿಜೆಪಿ ನಾಯಕಿ ಉಮಾಭಾರತಿ
ಮಹಿಳೆಯ ಕುಟುಂಬದವರು ಇಂಥಾ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ನನ್ನ ಸಹೋದರನಿಗೆ ಒತ್ತಾಯಿಸಿದರು. ಆಕೆಯ ಮಾವ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ನನ್ನ ಸಹೋದರ ಒಳ್ಳೆಯ ವ್ಯಕ್ತಿ ಮತ್ತು ನಮ್ಮ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ಅವನು ಚೆನ್ನಾಗಿ ಸಂಪಾದಿಸಿದನು, ಅದರಿಂದ ಮಹಿಳೆಯ ಕುಟುಂಬಕ್ಕೆ ಏನು ತೊಂದರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ರೇ.
ಫೇಸ್‌ಬುಕ್ ಲೈವ್‌ನಲ್ಲಿ, ಸಂತ್ರಸ್ತ ಜಯದೀಪ್ ರಾಯ್, ಸುಮಾರು ವರ್ಷದ ಪ್ರೇಮದ ನಿರಾಕರಣೆಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾನೆ. ನಮಗೆ ಇನ್ನೂ ಕುಟುಂಬದಿಂದ ಯಾವುದೇ ಔಪಚಾರಿಕ ದೂರು ಬಂದಿಲ್ಲ. ಆದರೆ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Fri, 30 December 22