ಭೋಪಾಲ್: 40-50 ವಯೋಮಾನದ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಆದರೆ ಜೀನ್ಸ್ ಮತ್ತು ಮೊಬೈಲ್ ಫೋನ್ ಹೊಂದಿರುವ ಹುಡುಗಿಯರು ಈ ರೀತಿ ಪ್ರಭಾವಿತರಾಗುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ (Congress) ನಾಯಕ ದಿಗ್ವಿಜಯ ಸಿಂಗ್ (Digvijaya Singh) ಭಾನುವಾರ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಜನ್ ಜಾಗರಣ ಶಿಬಿರದಲ್ಲಿ ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ ಸಿಂಗ್ ಈ ಹೇಳಿಕೆ ನೀಡಿದ್ದಾರೆ. “ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಹೀಗೊಂದು ಆಸಕ್ತಿಕರ ಸಂಗತಿ ಹೇಳಿದರು. 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರಧಾನಿ ಮೋದಿಯವರಿಂದ ಸ್ವಲ್ಪ ಹೆಚ್ಚು ಪ್ರಭಾವಿತರಾಗುತ್ತಾರೆ, ಆದರೆ ಜೀನ್ಸ್ ಧರಿಸುವ ಮತ್ತು ಮೊಬೈಲ್ ಇಟ್ಟುಕೊಂಡ ಹುಡುಗಿಯರು ಮೋದಿಯವರ ಪ್ರಭಾವಕ್ಕೊಳಗಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳುತ್ತಿರುವುದು ವಿಡಿಯೊದಲ್ಲಿದೆ. ಬಿಜೆಪಿ ಈ ಹೇಳಿಕೆಯನ್ನು ವಯಸ್ಸಿನ ಬಗ್ಗೆ ಪೂರ್ವಗ್ರಹ ಎಂದು ಟೀಕಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ವಿರುದ್ಧವೂ ಟೀಕಾ ಪ್ರಹಾರ ಮಾಡಿದ ಬಿಜೆಪಿ, ಸಿಂಗ್ ಅವರ ಹೇಳಿಕೆಯು “ಮೇ ಲಡ್ಕಿ ಹೂಂ, ಲಡ್ ಸಕ್ತಿ ಹೂಂ” ಎಂಬ ಎಂಬ ಪೊಳ್ಳು ಘೋಷಣೆಗಳನ್ನು ನೀಡುವ ಮೂಲಕ ಚುನಾವಣೆಗೆ ಮುನ್ನ ಮಹಿಳೆಯರು ವ್ಯಕ್ತಿಗಳಲ್ಲ ಮತ್ತು ನಾಗರಿಕರು ಕೇವಲ ವೋಟ್ ಬ್ಯಾಂಕ್ ಎಂದು ನಂಬಿರುವ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದೆ.
ಸಿಂಗ್ “ವಯಸ್ಸಿನೊಂದಿಗೆ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ”. “ಅವರು ಮಹಿಳೆಯರ ಬಗ್ಗೆ ಈ ಕೆಳಗಿನ ಮಟ್ಟದ ಆಲೋಚನೆ ಹೊಂದಿದ್ದಾರೆ. ದಿಗ್ವಿಜಯ ಸಿಂಗ್ ಈಗ ಹುಚ್ಚುತನದ ಹಂತವನ್ನು ಎದುರಿಸುತ್ತಿದ್ದಾರೆ. ಅಂತಹ ವ್ಯಕ್ತಿಯನ್ನು ಏಕೆ ಇರಿಸಲಾಗಿದೆ ಎಂದು ನಾನು ಸೋನಿಯಾ ಗಾಂಧಿಯನ್ನು ಕೇಳುತ್ತೇನೆ. ಇದೇ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ನ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅವರನ್ನು ತಾಂಚ್ ಮಾಲ್ ಎಂದು ಕರೆದಿದ್ದರು. ಮಹಿಳೆಯರು ಪೂಜ್ಯರು ಅವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ” ಎಂದು ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
#WATCH | Veer Savarkar in his book has written that the Hindu religion doesn’t have any relation with Hindutva. He also wrote that cow… can’t be our mother and there is no problem in eating cow beef: Congress leader Digvijaya Singh in Madhya Pradesh’s Bhopal pic.twitter.com/wYsk4YXmDJ
— ANI (@ANI) December 25, 2021
ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರು ಗೋವಿನ ಆರಾಧನೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ ನಂತರ ಸಿಂಗ್ ಅವರು ಶನಿವಾರ ಈ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ಸಾವರ್ಕರ್ ಅವರು ತಮ್ಮ ಪುಸ್ತಕವೊಂದರಲ್ಲಿ ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವುದಾಗಿ ಎಂದು ಪಕ್ಷದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಹೇಳಿದರು. “ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಮ್ಮ ಪುಸ್ತಕದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ವಾದಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ರಾಮೇಶ್ವರ್ ಶರ್ಮಾ, ಸಾವರ್ಕರ್ ಅವರನ್ನು ಸಿಂಗ್ ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಎಎನ್‌ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದು, ದಿಗ್ವಿಜಯ ಸಿಂಗ್ ಅವರು ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ನಿರ್ಧಾರದಲ್ಲಿ ಅವರಿಗೆ ಯಾವುದೇ ಪ್ರಮುಖ ಪಾತ್ರವಿಲ್ಲ, ಅವರು ಪ್ರಚಾರದಲ್ಲಿರಲು ಇದೆಲ್ಲವನ್ನೂ ಹೇಳುತ್ತಿದ್ದಾರೆ. ಇದು ಬರೀ ಅಸಂಬದ್ಧ ಎಂದಿದ್ದಾರೆ.
ಇದನ್ನೂ ಓದಿ: Urban Local Bodies Election: ಮತ ಕೇಳುವ ವಿಚಾರಕ್ಕೆ ಮತಗಟ್ಟೆ ಬಳಿ JDS, ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ