ಮೊದಲು ಮಾಧ್ಯಮದವರಿಗೆ ಡೋಸ್​ ಕೊಡಿ; ಕಾಂಗ್ರೆಸ್​ ಕಾರ್ಯಕರ್ತರಿಗೆ ಸಲಹೆ ನೀಡಿದ ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ

| Updated By: Lakshmi Hegde

Updated on: Dec 20, 2021 | 1:26 PM

ಕಾಂಗ್ರೆಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಯಾರಾದರೂ ಯಾವುದೇ ಸಭೆ, ಸಮಾರಂಭಗಳಿಗೆ ಹೊರಟಿದ್ದರೆ, ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಬಳಿಗೆ ಹೋಗಿ ನಾವು ಇಂಥ ಕೆಲಸಕ್ಕೆ ಹೊರಟಿದ್ದೇವೆ ಎಂದು ಹೇಳಿ ಎಂದಿದ್ದಾರೆ.

ಮೊದಲು ಮಾಧ್ಯಮದವರಿಗೆ ಡೋಸ್​ ಕೊಡಿ; ಕಾಂಗ್ರೆಸ್​ ಕಾರ್ಯಕರ್ತರಿಗೆ ಸಲಹೆ ನೀಡಿದ ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ
ಪ್ರಾತಿನಿಧಿಕ ಚಿತ್ರ
Follow us on

ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ (Rajasthan Congress Chief) ಗೋವಿಂದ್ ಸಿಂಗ್ ದೋಟಾಸ್ರಾ ಈಗ ತಮ್ಮ ಹೇಳಿಕೆಯೊಂದರ ಮೂಲಕ ವಿವಾದ ಸೃಷ್ಟಿಸಿದ್ದಾರೆ. ನಿನ್ನೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಮೊದಲು ಮಾಧ್ಯಮದವರಿಗೆ ಒಂದು ಡೋಸ್​ ಕೊಡಿ. ಅವರಿಗೆ ನೀವು ಡೋಸ್​ ಕೊಡದೆ ಹೋದರೆ, ಬಿಜೆಪಿಯಿಂದ ತೆಗೆದುಕೊಳ್ಳುತ್ತಾರೆ. ನಂತರ ನಮ್ಮ ವಿರುದ್ಧವಾಗಿ ಸುದ್ದಿ ಪ್ರಕಟಿಸುತ್ತಾರೆ ಎಂದು ಹೇಳಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಡೋಸ್​ ಎಂಬ ಶಬ್ದವನ್ನು ಅವರು ಹಣ ಎಂಬ ಅರ್ಥದಲ್ಲಿ ಬಳಸಿದ್ದು, ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಯಾರಾದರೂ ಯಾವುದೇ ಸಭೆ, ಸಮಾರಂಭಗಳಿಗೆ ಹೊರಟಿದ್ದರೆ, ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಬಳಿಗೆ ಹೋಗಿ ನಾವು ಇಂಥ ಕೆಲಸಕ್ಕೆ ಹೊರಟಿದ್ದೇವೆ ಎಂದು ಹೇಳಿ. ಅವರು ನಿಮ್ಮೊಂದಿಗೆ ಬರುತ್ತಾರೆ. ಯಾಕೆಂದರೆ ಅವರಿಗೆ ಡೋಸ್​ ಬೇಕಾಗಿರುತ್ತದೆ. ಒಂದೊಮ್ಮೆ ನೀವು ಆ ಡೋಸ್ ಕೊಡದೆ ಹೋದರೆ ಬಿಜೆಪಿಯಿಂದ ಪಡೆದು, ನಮ್ಮ ವಿರುದ್ಧ ಸುದ್ದಿಗಳನ್ನು ಪ್ರಕಟಿಸುತ್ತಾರೆ.  ಕಾಂಗ್ರೆಸ್​ ಒಳ್ಳೆಯ ಉತ್ಪನ್ನಗಳನ್ನು ಹೊಂದಿರುವುದರಿಂದ, ಮಾಧ್ಯಮ ಸಿಬ್ಬಂದಿ ಅತ್ತಿತ್ತ ನೋಡಲು ಕಾಂಗ್ರೆಸ್ ಕಾರ್ಯಕರ್ತರು ಬಿಡಬಾರದು ಎಂದು ಹೇಳಿದ್ದಾರೆ.  ನಮ್ಮ ಪಕ್ಷ ಪತ್ರಕರ್ತರಿಗೆ ಗ್ಯಾರಂಟಿ ನೀಡಿದರೆ ಅವರೂ ನಮ್ಮ ಪರವಾಗಿ ಇರುತ್ತಾರೆ. ಮುಂದಿನ ವರ್ಷಗಳಲ್ಲಿ ಬರುವ ವಿಧಾನಸಭೆ ಚುನಾವಣೆಗಳು, ಲೋಕಸಭೆ ಚುನಾವಣೆಗಳಲ್ಲಿ ನಮ್ಮ ಪರವಾಗಿಯೇ ಸುದ್ದಿಗಳು ಬರುತ್ತವೆ. ನಾವೂ ಗೆಲ್ಲಬಹುದು ಎಂದು ದೋಟಾಸ್ರಾ ತಿಳಿಸಿದ್ದಾರೆ.

ಈಗಾಗಲೇ ಹಲವು ಪ್ರತಿಪಕ್ಷಗಳು ಮಾಧ್ಯಮದವರನ್ನು ದೂರುತ್ತಿವೆ. ದೇಶದ ಮಾಧ್ಯಮಗಳು ಬಿಜೆಪಿ ಪರ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್​, ಟಿಎಂಸಿಗಳು ಆರೋಪ ಮಾಡಿವೆ. ಅದರಲ್ಲೂ ಚುನಾವಣೆ ಸಮೀಪ ಈ ಆರೋಪಗಳು ಹೆಚ್ಚುತ್ತವೆ.ಈ ದೇಶದ ಪ್ರಮುಖ ಮಾಧ್ಯಮಗಳನ್ನೆಲ್ಲ ಬಿಜೆಪಿ ಖರೀದಿ ಮಾಡಿದೆ. ಹಾಗಾಗಿಯೇ ಅವು ಕೇಂದ್ರದ ಪರವೇ ಮಾತನಾಡುತ್ತವೆ ಎಂಬ ಆರೋಪ ಹಲವು ಬಾರಿ ಕೇಳಿಬಂದಿದೆ. ಬರೀ ಮಾಧ್ಯಮಗಳಷ್ಟೇ ಅಲ್ಲ, ಕೇಂದ್ರ ತನಿಖಾ ದಳಗಳು, ಚುನಾವಣಾ ಆಯೋಗಗಳೆಲ್ಲವೂ ಬಿಜೆಪಿಯ ಅಡಿಯಾಳಾಗಿವೆ ಎಂದೂ ಪ್ರತಿಪಕ್ಷಗಳು ಕ್ಯಾತೆ ತೆಗೆದಿವೆ.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ, ಧಾರವಾಡ ಕೃಷಿ ವಿವಿ ಮಹಿಳೆಯರನ್ನ ಸಶಕ್ತರನ್ನಾಗಿಸಿದ್ದು ಹೇಗೆ?

 

Published On - 8:25 am, Mon, 20 December 21