ಗೇಮಿಂಗ್ ಚಟ: ಅಮ್ಮನ ATM ಕಾರ್ಡಿಂದ 90ಸಾವಿರ ಉಜ್ಜಾಡಿದ ಮಗನಿಗೆ ಅಪ್ಪ ಕೊಟ್ಟ ಶಿಕ್ಷೆ ಏನು?

| Updated By: ಸಾಧು ಶ್ರೀನಾಥ್​

Updated on: Sep 21, 2020 | 5:02 PM

ಮದುರೈ: ದೇಶಕ್ಕೆ ಮಹಾಮಾರಿ ಕೊರೊನಾ ಆವರಿಸಿದಾಗಿನಿಂದ ಜನ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಶಾಲೆ ಕಾಲೇಜುಗಳಿಲ್ಲದೆ ಮಕ್ಕಳು ಮನೆಯಲ್ಲೆ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಶಾಲೆಗಳಿಲ್ಲದೆ ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದಾರೆ. ಮೊಬೈಲ್​ಗಳಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ 12 ವರ್ಷದ ಬಾಲಕ ಲಾಕ್‌ಡೌನ್ ಮಧ್ಯೆ ಆನ್‌ಲೈನ್ ಆಟಕ್ಕೆ 90,000 ರೂ ಖರ್ಚು ಮಾಡಿದ್ದಾರೆ. 12 ವರ್ಷದ ಬಾಲಕ ಲಾಕ್‌ಡೌನ್ ಸಮಯದಲ್ಲಿ ತನ್ನ ತಾಯಿಯ ATM ಕಾರ್ಡ್ […]

ಗೇಮಿಂಗ್ ಚಟ: ಅಮ್ಮನ ATM ಕಾರ್ಡಿಂದ 90ಸಾವಿರ ಉಜ್ಜಾಡಿದ ಮಗನಿಗೆ ಅಪ್ಪ ಕೊಟ್ಟ ಶಿಕ್ಷೆ ಏನು?
Follow us on

ಮದುರೈ: ದೇಶಕ್ಕೆ ಮಹಾಮಾರಿ ಕೊರೊನಾ ಆವರಿಸಿದಾಗಿನಿಂದ ಜನ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಶಾಲೆ ಕಾಲೇಜುಗಳಿಲ್ಲದೆ ಮಕ್ಕಳು ಮನೆಯಲ್ಲೆ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಶಾಲೆಗಳಿಲ್ಲದೆ ಮಕ್ಕಳು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಿದ್ದಾರೆ. ಮೊಬೈಲ್​ಗಳಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ 12 ವರ್ಷದ ಬಾಲಕ ಲಾಕ್‌ಡೌನ್ ಮಧ್ಯೆ ಆನ್‌ಲೈನ್ ಆಟಕ್ಕೆ 90,000 ರೂ ಖರ್ಚು ಮಾಡಿದ್ದಾರೆ.

12 ವರ್ಷದ ಬಾಲಕ ಲಾಕ್‌ಡೌನ್ ಸಮಯದಲ್ಲಿ ತನ್ನ ತಾಯಿಯ ATM ಕಾರ್ಡ್ ಬಳಸಿ ಆನ್‌ಲೈನ್​ನಲ್ಲಿ ಆಟಗಳನ್ನು ಆಡಲು ಪ್ರಾರಂಭಿಸಿ ಅದು ಈಗ 90,000 ರೂ ನಷ್ಟಕ್ಕೆ ಕಾರಣವಾಗಿರುವ ಘಟನೆ ತಮಿಳುನಾಡಿನ ಮೇಲಕಿದಾರಂ ಪ್ರದೇಶದಲ್ಲಿ ನಡೆದಿದೆ.

ತಾಯಿ ಎಟಿಎಂನಿಂದ ಹಣ ಡ್ರಾ ಮಾಡಲು ಹೋದಾಗ ಆಕೆಗೆ ತನ್ನ ಕಾರ್ಡ್​ನಿಂದ ಹಣ ಖಾಲಿಯಾಗಿರುವುದು ಗೊತ್ತಾಗಿದೆ. ಮಗನ ಆನ್‌ಲೈನ್ ಗೇಮಿಂಗ್​ನಿಂದಾಗಿ 90 ಸಾವಿರ ಹಣ ಖರ್ಚಾಗಿದೆ. ಕೊರೊನಾ ಸಮಯದಲ್ಲಿ ಮಗ ಹೊರಗೆ ಹೋದರೆ ಅವನಿಗೆ ಅಪಾಯ ಎಂದು ಪೋಷಕರು ಮಗನನ್ನು ಆಚೆ ಬಿಡುತ್ತಿರಲಿಲ್ಲ. ಮನೆಯಲ್ಲೇ ಇರಲು ಹೇಳುತ್ತಿದ್ದರು. ಹೀಗಾಗಿ ಬಾಲಕ ಆನ್​ಲೈನ್ ಗೇಮ್ ವ್ಯಸನಿಯಾಗಿದ್ದಾರೆ ಎಂದು ಬಾಲಕನ ತಂದೆ ಸೆಂಥಿಲ್ ಕುಮಾರ್ ಹೇಳಿದ್ದಾರೆ.

ಕುಮಾರ್ ಇ-ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಅವರ ಪತ್ನಿ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ವೇಲೆ ಹಣ ಪಾವತಿಸಲು ತಮ್ಮ ಮಗನ ಸಹಾಯ ಪಡೆಯುತ್ತಿದ್ದರು. ಹೀಗಾಗಿ ಬಾಲಕನು ಆನ್‌ಲೈನ್‌ನಲ್ಲಿ ಹಣ ಪಾವತಿಸುವುದನ್ನು ಕಲಿತಿದ್ದ ಹಾಗೂ ಕಾರ್ಡ್​ನ ಪಾಸ್ ವರ್ಡ್ ತಿಳಿದುಕೊಂಡಿದ್ದ. ಹೀಗಾಗಿ ರಾಜಾರೋಷವಾಗಿ ಆನ್​ಲೈನ್​ ಗೇಮ್ ಆಡಿ ಹಣ ಪೋಲು ಮಾಡಿದ್ದಾನೆ.

ಮಗನಿಗೆ ತಂದೆಕೊಟ್ಟ ಶಿಕ್ಷೆ ಏನು ಗೊತ್ತಾ:
ಇನ್ನು 90 ಸಾವಿರ ಕಳೆದುಕೊಂಡ ಪೋಷಕರು ಮಗನನ್ನು ಬೈಯಲಿಲ್ಲ. ಹೊಡೆಯಲೂ ಇಲ್ಲ. ಬದಲಿಗೆ 1ರಿಂದ 90 ಸಾವಿರದವರೆಗೆ ಅಂಕಿಗಳನ್ನು ಬರೆಯುವ ಶಿಕ್ಷೆ ನೀಡಿದ್ರು. ಆದರೆ 5 ದಿನಗಳಲ್ಲಿ 3,500 ಮೀರಿ ಹೋಗಲು ಸಾಧ್ಯವಾಗಲಿಲ್ಲ. ನಂತರ ಬಾಲಕ ಮೊಬೈಲ್ ಆಟಗಳನ್ನು ಆಡುವುದನ್ನು ಬಿಟ್ಟುಬಿಡುವುದಾಗಿ ಹೇಳಿದ್ದಾನೆ ಎಂದು ಕುಮಾರ್ ತಿಳಿಸಿದ್ರು.

Published On - 4:55 pm, Mon, 21 September 20