Go First Airline: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 27, 2023 | 5:26 PM

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ವಿಮಾನವೊಂದರ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆ ನಡೆಸುತ್ತಿದ್ದ ಗೋ ಫಸ್ಟ್ ಏರ್‌ಲೈನ್‌ಗೆ ಇಂದು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 10 ಲಕ್ಷ ರೂ. ದಂಡ ವಿಧಿಸಲಾಗಿದೆ.

Go First Airline: 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ಗೋ ಫಸ್ಟ್ ಏರ್‌ಲೈನ್‌ಗೆ 10 ಲಕ್ಷ ದಂಡ
ಗೋ ಫಸ್ಟ್ ವಿಮಾನ (ಸಂಗ್ರಹ ಚಿತ್ರ)
Image Credit source: Twitter/@GoFirstairways
Follow us on

ದೆಹಲಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Bangalore Airport) 55 ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಮಾಡಿದ ವಿಮಾನವೊಂದರ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆ ನಡೆಸುತ್ತಿದ್ದ ಗೋ ಫಸ್ಟ್ ಏರ್‌ಲೈನ್‌ಗೆ (Go First Airline) ಇಂದು ಹಲವಾರು ವಾಯು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 10 ಲಕ್ಷ ರೂ. ದಂಡ ವಿಧಿಸಲಾಗಿದೆ. ಘಟನೆಯ ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಈ ಬಗ್ಗೆ ಹಲವು ತಪ್ಪುಗಳನ್ನು ಮತ್ತು ವಿಮಾನಯಾನ ನಿಯಮಗಳ ಉಲ್ಲಂಘನೆಗಾಗಿ ವಿಮಾನಯಾನ ಸಂಸ್ಥೆಗೆ ನೋಟಿಸ್ ಕಳುಹಿಸಿತು ಮತ್ತು ವಿವರಣೆಯನ್ನು ಕೇಳಿತ್ತು.

ವಿಮಾನದಲ್ಲಿ ಪ್ರಯಾಣಿಕರನ್ನು ಹತ್ತುವುದಕ್ಕೆ ಸಂಬಂಧಿಸಿದಂತೆ ಟರ್ಮಿನಲ್ ಸಂಯೋಜಕರು, ವಾಣಿಜ್ಯ ಸಿಬ್ಬಂದಿ ಮತ್ತು ಸಿಬ್ಬಂದಿ ನಡುವೆ ಅಸಮರ್ಪಕ ಸಂವಹನ, ಸಮನ್ವಯತೆ ಕಂಡುಬಂದಿದೆ ಎಂದು ಗೋ ಫಸ್ಟ್‌ನ ಪ್ರತಿಕ್ರಿಯೆಯಲ್ಲಿ ಬಹಿರಂಗಪಡಿಸಿದೆ ಎಂದು DGCA ಹೇಳಿದೆ, ವಿಮಾನಯಾನವು ಟೇಕಾಫ್ ನಿರ್ವಹಣೆ, ಲೋಡ್ ಮತ್ತು ಟ್ರಿಮ್‌ಗೆ ಸಾಕಷ್ಟು ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಹೇಳಿದೆ.

ಇದನ್ನು ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ಗೋ ಫಸ್ಟ್‌ಗೆ ಡಿಜಿಸಿಎ ನೋಟಿಸ್

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೋಗುವ ಜಿ8 116 ಹತ್ತಬೇಕಿದ್ದ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ಕಡಿಮೆ ದರದ ವಿಮಾನಯಾನ ಗೋ ಫರ್ಸ್ಟ್‌ಗೆ ಏವಿಯೇಷನ್ ರೆಗ್ಯುಲರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಮಂಗಳವಾರ ಶೋಕಾಸ್ ನೋಟಿಸ್ ನೀಡಿತ್ತು. ನಿಯಂತ್ರಕರು ಘಟನೆಯ ವರದಿಯನ್ನು ಕೇಳಿದ್ದರು, ಇದನ್ನು ಮಂಗಳವಾರ ವಿಮಾನಯಾನ ಸಂಸ್ಥೆ ಸಲ್ಲಿಸಿದೆ. ಅದೇ ವೇಳೆ ನಿಯಮಾವಳಿಗಳನ್ನು ಅನುಸರಿಸಲು ಡಿಜಿಸಿಎ ವಿಫಲವಾಗಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. Go First ನಲ್ಲಿ CAR ಸೆಕ್ಷನ್ 3, ಸರಣಿ C, ಭಾಗ II ರ ಪ್ಯಾರಾ 9 ಮತ್ತು 13 ರಲ್ಲಿ ನಿರ್ದಿಷ್ಟಪಡಿಸಿದ ನಿಬಂಧನೆಗಳನ್ನು ಅನುಸರಿಸಲು ವಿಫಲವಾಗಿದ್ದು DGCA ಯಿಂದ ನೀಡಲಾದ ನಿಯಮ 134 ರ ಪ್ಯಾರಾ (1A) ಅನ್ನು ಉಲ್ಲಂಘಿಸಿದೆ. M/s Go First 2019 ರ ATC 02 ರ ಪ್ಯಾರಾ 5.2 ರಲ್ಲಿ ನಿರ್ದಿಷ್ಟಪಡಿಸಿದ ನಿಬಂಧನೆಯನ್ನು ಅನುಸರಿಸಲು ವಿಫಲವಾಗಿದೆ ಡಿಜಿಸಿಎ ಹೇಳಿಕೆ ನೀಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ