ಕಳೆದ 40 ವರ್ಷಗಳಲ್ಲೇ ಕಂಡರಿಯದಷ್ಟು ಭೀಕರ ಪ್ರವಾಹಕ್ಕೆ ಗೋವಾ (Goa Floods) ತತ್ತರಿಸಿದೆ. ಮಳೆ ಸಂಬಂಧ ದುರ್ಘಟನೆಯಿಂದ ಇದುವರೆಗೆ ಒಂದು ಸಾವಾಗಿದ್ದು, ಬರೋಬ್ಬರಿ 1,000 ಮನೆಗಳಿಗೆ ಹಾನಿಯಾಗಿದೆ. ವಿಪರೀತ ಮಳೆಯಿಂದ ಜಲಾವೃತಗೊಂಡಿರುವ ಕೆಳಪ್ರದೇಶಗಳಿಂದ ನೂರಾರು ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅದರಲ್ಲೂ ಗೋವಾದ ಸತ್ತಾರಿ, ಬಿಚೋಲಿಮ್, ಪೊಂಡಾ, ಧರ್ಬಂಡೋರಾ, ಬಾರ್ಡೆಜ್ ಮತ್ತು ಪರ್ನೆಮ್ ತಾಲೂಕುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ತಿಳಿಸಿದ್ದಾರೆ.
ಬಿಚೋಲಿಮ್ ತಾಲೂಕಿನ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿ ಕೊಟ್ಟಿದ್ದು, ಅಲ್ಲಿನ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ. ಸದ್ಯಕ್ಕಂತೂ ಮಳೆ, ಪ್ರವಾಹ ಹೆಚ್ಚಾದ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ಗೋವಾ 1982ರಿಂದ ಈಚೆಗೆ ಇಂಥ ಭೀಕರ ಪ್ರವಾಹವನ್ನು ಕಂಡಿರಲಿಲ್ಲ. ಈಗ ಸುಮಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ಸರ್ವನಾಶವಾಗಿದೆ. ವಿಪತ್ತು ನಿರ್ವಹಣಾ ತಂಡಗಳು ಶುಕ್ರವಾರದಿಂದಲೂ ಎಡಬಿಡದೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ. ಉತ್ತರ ಗೋವಾದ ಪರ್ನೆಮ್ ತಾಲೂಕಿನ ಚಪೋರಾ ನದಿ, ಅಪಾಯ ಮಟ್ಟವನ್ನೂ ಮೀರಿ ಹರಿಯುತ್ತಿದ್ದು, ಕೆಳ ಪ್ರದೇಶದಲ್ಲಿರುವ ಸುಮಾರು 88 ಮನೆಗಳಿಗೆ ಹಾನಿಯನ್ನುಂಟು ಮಾಡಿದೆ. ಈ ನದಿಯಿಂದಾಗಿ ಬಾರ್ಡೆಜ್ ತಾಲೂಕಿನ 167 ಮನೆಗಳಿಗೆ ಹಾನಿಯಾಗಿದೆ ಎಂದು ಸಾವಂತ್ ಮಾಹಿತಿ ನೀಡಿದ್ದಾರೆ.
Rescue work continues. CM @DrPramodPSawant visiting flood affected areas in Bicholim Taluka. pic.twitter.com/9CIgFAq08S
— CMO Goa (@goacm) July 23, 2021
ಇದನ್ನೂ ಓದಿ: Vegetable Roll: ಉಳಿದ ಅನ್ನವನ್ನು ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದರೆ ಈ ವಿಧಾನವನ್ನು ಒಮ್ಮೆ ಟ್ರೈ ಮಾಡಿ