ತೆಲಂಗಾಣ ಡಿಸಿಎಂಗೂ ಕಳ್ಳರ ಕಾಟ; ಭಟ್ಟಿ ವಿಕ್ರಮಾರ್ಕ ಮಲ್ಲು ಮನೆಯಲ್ಲಿ ಚಿನ್ನದ ಬಿಸ್ಕತ್, ಹಣ, ಚಿನ್ನಾಭರಣ ದರೋಡೆ

|

Updated on: Sep 28, 2024 | 5:29 PM

ತೆಲಂಗಾಣದ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಅವರ ಮನೆಯಲ್ಲಿ ದರೋಡೆ ನಡೆದಿದೆ. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಡಿಸಿಎಂ ಮನೆಯಿಂದ 2.2 ಲಕ್ಷ ರೂ. ಹಣ, 100 ಗ್ರಾಂ ಚಿನ್ನದ ಬಿಸ್ಕತ್, ವಿದೇಶಿ ಕರೆನ್ಸಿ ಹಾಗೂ ಆಭರಣಗಳನ್ನು ಕದ್ದೊಯ್ಯಲಾಗಿತ್ತು.

ತೆಲಂಗಾಣ ಡಿಸಿಎಂಗೂ ಕಳ್ಳರ ಕಾಟ; ಭಟ್ಟಿ ವಿಕ್ರಮಾರ್ಕ ಮಲ್ಲು ಮನೆಯಲ್ಲಿ ಚಿನ್ನದ ಬಿಸ್ಕತ್, ಹಣ, ಚಿನ್ನಾಭರಣ ದರೋಡೆ
ಭಟ್ಟಿ ವಿಕ್ರಮಾರ್ಕ ಮಲ್ಲು
Follow us on

ಹೈದರಾಬಾದ್: ತೆಲಂಗಾಣದ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಅವರ ಮನೆಯಲ್ಲಿ ದರೋಡೆ ನಡೆದಿತ್ತು. ಡಿಸಿಎಂ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ 2.2 ಲಕ್ಷ ರೂಪಾಯಿ ನಗದು, ಚಿನ್ನದ ಬಿಸ್ಕತ್ ಮತ್ತು ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಬಿಹಾರ ಮೂಲದ ರೋಷನ್ ಕುಮಾರ್ ಮಂಡಲ್ ಮತ್ತು ಉದಯ್ ಕುಮಾರ್ ಠಾಕೂರ್ ಎಂಬ ಶಂಕಿತರನ್ನು ಪಶ್ಚಿಮ ಬಂಗಾಳದ ಖರಗ್‌ಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದರು. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ನಂತರ ಅವರನ್ನು ಬಂಧಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ 3 ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳ ಬಿಡುಗಡೆ

ಅಧಿಕಾರಿಗಳು ಆರೋಪಿಗಳಿಂದ 2.2 ಲಕ್ಷ ರೂ. ನಗದು, 100 ಗ್ರಾಂ ಚಿನ್ನದ ಬಿಸ್ಕತ್ತು ಮತ್ತು ಬ್ರಿಟಿಷ್ ಪೌಂಡ್‌ಗಳು, ಯುಎಇ ದಿರ್ಹಾಮ್‌ಗಳು ಮತ್ತು ಸ್ವಿಸ್ ಫ್ರಾಂಕ್‌ಗಳನ್ನು ಒಳಗೊಂಡ ವಿದೇಶಿ ಕರೆನ್ಸಿ ಸೇರಿದಂತೆ ಕದ್ದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಕ್ರಮಾರ್ಕ ಅವರು ಅಧಿಕೃತ ಪ್ರವಾಸದ ನಿಮಿತ್ತ ವಿದೇಶಕ್ಕೆ ತೆರಳಿದ್ದಾಗ ಈ ದರೋಡೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಡಿಸಿಎಂ ಮನೆಯಿಂದ ಕದ್ದ ಬೆಳ್ಳಿ ಪಾತ್ರೆಗಳು ಮತ್ತು ಮುತ್ತಿನ ಆಭರಣಗಳಂತಹ ಇತರೆ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೇ ಪೊಲೀಸ್ ಅಧಿಕಾರಿ ದೇಬಶ್ರೀ ಸನ್ಯಾಲ್ ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ; ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ವಿಶ್ವಾಸ

ವಿಚಾರಣೆ ವೇಳೆ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅವರ ತಪ್ಪೊಪ್ಪಿಗೆಯ ನಂತರ, ಪಶ್ಚಿಮ ಬಂಗಾಳದ ಪೊಲೀಸರು ತೆಲಂಗಾಣದ ಪೊಲೀಸರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ