ಬಾಗಲೂರು ಬಳಿ ಹೊನ್ನಿನ ಮಳೆ, ಬಂಗಾರಕ್ಕಾಗಿ ಮುಗಿಬಿದ್ದ ಜನ!

|

Updated on: Oct 10, 2020 | 1:31 PM

ಚೆನ್ನೈ: ಮಳೆ ಬಂದಾಗ ಆಲಿಕಲ್ಲು ಬೀಳುವುದು ಸಾಮಾನ್ಯ ಆದ್ರೆ ಇಲ್ಲಿ ಹಳದಿ ಲೋಹ ಅಂದ್ರೆ ಚಿನ್ನದ ಮಳೆಯಾಗಿದೆಯಂತೆ. ನಂಬುವುದಕ್ಕೆ ಕಷ್ಟ ಆದ್ರೂ ಇದು ನಿಜ ಅಂತ ಗ್ರಾಮದ ಜನ ಚಿನ್ನ ತರಲು ಮುಗಿಬಿದ್ದಿದ್ದಾರೆ. ಹೌದು ತಮಿಳುನಾಡು ಬಳಿಯ ಬಾಗಲೂರಿನಲ್ಲಿ ನಿನ್ನೆ ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಮಳೆ ಬಂದು ಹೋಗಿದ್ದ ಸಂದರ್ಭದಲ್ಲಿ ಸಣ್ಣ ಸಣ್ಣ ಚಿನ್ನದ ತುಂಡುಗಳು ಧರೆಗೆ ಬಿದ್ದಿವೆಯಂತೆ. ಈ ಸುದ್ದಿ ಹಬ್ಬುತ್ತಿದ್ದಂತೆ ಜನ ಚಿನ್ನ ಪತ್ತೆ ಹಚ್ಚಲು ಮುಗಿಬಿದ್ದಿದ್ದಾರೆ. ಜನ ಮರುಳೋ ಜಾತ್ರೆ ಮರುಳೋ […]

ಬಾಗಲೂರು ಬಳಿ ಹೊನ್ನಿನ ಮಳೆ, ಬಂಗಾರಕ್ಕಾಗಿ ಮುಗಿಬಿದ್ದ ಜನ!
Follow us on

ಚೆನ್ನೈ: ಮಳೆ ಬಂದಾಗ ಆಲಿಕಲ್ಲು ಬೀಳುವುದು ಸಾಮಾನ್ಯ ಆದ್ರೆ ಇಲ್ಲಿ ಹಳದಿ ಲೋಹ ಅಂದ್ರೆ ಚಿನ್ನದ ಮಳೆಯಾಗಿದೆಯಂತೆ. ನಂಬುವುದಕ್ಕೆ ಕಷ್ಟ ಆದ್ರೂ ಇದು ನಿಜ ಅಂತ ಗ್ರಾಮದ ಜನ ಚಿನ್ನ ತರಲು ಮುಗಿಬಿದ್ದಿದ್ದಾರೆ.

ಹೌದು ತಮಿಳುನಾಡು ಬಳಿಯ ಬಾಗಲೂರಿನಲ್ಲಿ ನಿನ್ನೆ ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಮಳೆ ಬಂದು ಹೋಗಿದ್ದ ಸಂದರ್ಭದಲ್ಲಿ ಸಣ್ಣ ಸಣ್ಣ ಚಿನ್ನದ ತುಂಡುಗಳು ಧರೆಗೆ ಬಿದ್ದಿವೆಯಂತೆ. ಈ ಸುದ್ದಿ ಹಬ್ಬುತ್ತಿದ್ದಂತೆ ಜನ ಚಿನ್ನ ಪತ್ತೆ ಹಚ್ಚಲು ಮುಗಿಬಿದ್ದಿದ್ದಾರೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಮಣ್ಣು ಅಗೆದು ಭೂಮಿ ಮೇಲೆ ಚಿನ್ನವಿದೆಯಾ ಅಂತ ಹುಡುಕುತ್ತಿದ್ದಾರೆ.

ಒಬ್ಬ ವ್ಯಕ್ತಿಗೆ ನಾಲ್ಕರಿಂದ ಐದು ಗ್ರಾಂ ಚಿನ್ನದ ನಾಣ್ಯದಂತಹ ತುಂಡುಗಳು ಸಿಕ್ಕಿದ್ದು, ನಾಣ್ಯ ನೋಡಲು ಜನರು ನಾ ಮುಂದು ತಾ ಮುಂದು ಎಂದು ನುಗ್ಗುತ್ತಿದ್ದಾರೆ. ಆತ ಖುಷಿಯಿಂದ ಕುಣಿದಾಡುತ್ತಿದ್ದಾನೆ. ಇನ್ನು ಮಳೆ ಬಿದ್ದಿದ್ದರಿಂದ ಚಿನ್ನ ಬಿದ್ದಿದೆ ಎಂದು ಕೆಲ ಜನ ಹೇಳುತಿದ್ದಾರೆ.