ಬ್ಲಾಕ್ ಮನಿ ಇರೋ ಸ್ವಿಸ್ ಈಗ ಖುಲ್ಲಂ ಖುಲ್ಲಾ, ಕಪ್ಪು ಕುಳಗಳ ಸೆಕೆಂಡ್ ಲಿಸ್ಟ್ ರಿವೀಲ್
ತೆರಿಗೆ ಕಳ್ಳರ ಸ್ವರ್ಗ ಅಂತಾ ಕರೆಸಿಕೊಳ್ಳುತ್ತಿದ್ದ ಸ್ವಿಸ್ ಬ್ಯಾಂಕ್ಗಳು ಇದೀಗ ಮುಕ್ತವಾಗಿ ಗ್ರಾಹಕರ ಮಾಹಿತಿ ಹಂಚಿಕೆಗೆ ಮುಂದಾಗಿವೆ. 2ನೇ ಪಟ್ಟಿಯಲ್ಲಿ ಸುಮಾರು 31 ಲಕ್ಷ ಕಸ್ಟಮರ್ಗಳ ಮಾಹಿತಿ ರಿವೀಲ್ ಆಗಿದೆ. ಸ್ವಿಸ್ ಬ್ಯಾಂಕ್ ಅಂದರೆ ಮುಗಿದೇ ಹೋಗಿತು. ಕಣ್ಣ ಮುಂದೆ ಬರೀ ಕೋಟಿ ಲೆಕ್ಕದಲ್ಲೇ ಹಣ ಓಡಾಬಿಡುತ್ತದೆ. ಬಡ ರಾಷ್ಟ್ರಗಳ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ದುಡ್ಡು ಕೊಳ್ಳೆ ಹೊಡೆದು ಮುಚ್ಚಿಟ್ಟಿದ್ದ ಜಾಗ ಅದು. ಆದ್ರೆ ಇಷ್ಟುದಿನ ಯಾಱರು ಕಳ್ಳದುಡ್ಡು ಇಟ್ಟಿದ್ದಾರೆ ಅನ್ನೋದರ ಮಾಹಿತಿಯೇ ಸಿಗುತ್ತಿರಲಿಲ್ಲ. ಆದರೆ […]
ತೆರಿಗೆ ಕಳ್ಳರ ಸ್ವರ್ಗ ಅಂತಾ ಕರೆಸಿಕೊಳ್ಳುತ್ತಿದ್ದ ಸ್ವಿಸ್ ಬ್ಯಾಂಕ್ಗಳು ಇದೀಗ ಮುಕ್ತವಾಗಿ ಗ್ರಾಹಕರ ಮಾಹಿತಿ ಹಂಚಿಕೆಗೆ ಮುಂದಾಗಿವೆ. 2ನೇ ಪಟ್ಟಿಯಲ್ಲಿ ಸುಮಾರು 31 ಲಕ್ಷ ಕಸ್ಟಮರ್ಗಳ ಮಾಹಿತಿ ರಿವೀಲ್ ಆಗಿದೆ.
ಸ್ವಿಸ್ ಬ್ಯಾಂಕ್ ಅಂದರೆ ಮುಗಿದೇ ಹೋಗಿತು. ಕಣ್ಣ ಮುಂದೆ ಬರೀ ಕೋಟಿ ಲೆಕ್ಕದಲ್ಲೇ ಹಣ ಓಡಾಬಿಡುತ್ತದೆ. ಬಡ ರಾಷ್ಟ್ರಗಳ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ದುಡ್ಡು ಕೊಳ್ಳೆ ಹೊಡೆದು ಮುಚ್ಚಿಟ್ಟಿದ್ದ ಜಾಗ ಅದು. ಆದ್ರೆ ಇಷ್ಟುದಿನ ಯಾಱರು ಕಳ್ಳದುಡ್ಡು ಇಟ್ಟಿದ್ದಾರೆ ಅನ್ನೋದರ ಮಾಹಿತಿಯೇ ಸಿಗುತ್ತಿರಲಿಲ್ಲ. ಆದರೆ 2018ರ ನಂತ್ರ ಪರಿಸ್ಥಿತಿ ತಿಳಿಯಾಗುತ್ತಾ ಬಂದು, 2019ರ ಸೆಪ್ಟೆಂಬರ್‌ನಲ್ಲಿ ಮೊದಲ ಪಟ್ಟಿ ರಿವೀಲ್ ಆಗಿತ್ತು. ಇದೀಗ 2ನೇ ಲಿಸ್ಟ್ ಕೂಡ ಅನೌನ್ಸ್ ಆಗಿದೆ.
ಭಾರತ ಮೂಲದ ಹಣ ವಾಪಸ್ ಬರುತ್ತಾ? ಅಂದಹಾಗೆ 2014ರಲ್ಲಿ ಪ್ರಧಾನಿ ಮೋದಿ ಮೊದಲಬಾರಿಗೆ ಅಧಿಕಾರಕ್ಕೆ ಬರುವಾಗ ಸ್ವಿಸ್ ಬ್ಯಾಂಕ್ನ ಬ್ಲ್ಯಾಕ್ ಮನಿ ವಿಚಾರವೇ ಪ್ರಚಾರದ ಅಜೆಂಡಾ ಆಗಿತ್ತು. ಅಲ್ಲಿ ಅಡಗಿರುವ ಕಳ್ಳದುಡ್ಡು ಭಾರತಕ್ಕೆ ಬಂದರೆ ಇಲ್ಲಿನ ಬಡತವನ್ನ ತೊಲಗಿಸಬಹುದು ಎಂಬ ಆಸೆ ಹುಟ್ಟಿತ್ತು. ಆದರೆ ಫಸ್ಟ್ ಲಿಸ್ಟ್ ಕೈಗೆ ಸಿಕ್ಕರೂ ಅಂದುಕೊಂಡಷ್ಟು ಹಣ ಬಂದಿಲ್ಲ. ಈ ಹಿಂದೆ 2019ರಲ್ಲಿ ಸಿಕ್ಕ ಮೊದಲ ಪಟ್ಟಿಯಿಂದಲೂ ಅಂದುಕೊಂಡಷ್ಟು ಬ್ಲ್ಯಾಕ್ ಮನಿ ದೇಶಕ್ಕೆ ವಾಪಸ್ ಬಂದಿಲ್ಲ. ಈಗ 2ನೇ ಲಿಸ್ಟ್ ಸಿಕ್ಕಿದ್ದು ಪಿಎಂ ಮೋದಿ ಭ್ರಷ್ಟರ ಹೆಡೆಮುರಿ ಕಟ್ಟಲಿದ್ದಾರಾ ಅನ್ನೋದು ಕುತೂಹಲ ಕೆರಳಿಸಿದೆ.
86 ದೇಶಗಳ ಜೊತೆ ಮಾತ್ರ ಮಾಹಿತಿ ವಿನಿಮಯ! ಅಷ್ಟಕ್ಕೂ ಸ್ವಿಜರ್ಲೆಂಡ್ ಬ್ಯಾಂಕ್ಗಳ ಎಲ್ಲಾ ದೇಶಗಳ ಜೊತೆಗೆ ಗ್ರಾಹಕರ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಸ್ವಿಸ್ ಸರ್ಕಾರ ಆರಿಸಿಕೊಂಡಿರುವ 86 ದೇಶಗಳ ಜೊತೆ ಮಾತ್ರ ಈ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. 86 ದೇಶಗಳ ಪಟ್ಟಿಯಲ್ಲಿ ಭಾರತವೂ ಇದ್ದು, ತೆರಿಗೆಗಳ್ಳರ ಇಂಚಿಂಚು ಮಾಹಿತಿ ಲಭ್ಯವಾಗುತ್ತಿದೆ.
ಒಟ್ನಲ್ಲಿ ಸ್ವಿಸ್ ಬ್ಯಾಂಕಿನ ನೂರಾರು ಕತೆಗಳಿಗೆ ಈಗ ಒಂದು ಕನ್ಕ್ಲೂಷನ್ ಸಿಕ್ಕಿದೆ. ಕಳ್ಳದುಡ್ಡು ಇಟ್ಟವರ ಬಗ್ಗೆ ಮಾಹಿತಿಯೂ ಸಿಕ್ಕಿದೆ. ಈಗೇನಿದ್ದರೂ ಆ ಹಣವನ್ನು ಭಾರತಕ್ಕೆ ಮರಳಿ ತರಬೇಕಿದೆ ಅಷ್ಟೇ.