ಭಾರತದ ವೈವಿಧ್ಯತೆ ಸಾರಿದ ‘ಗೂಗಲ್ ಡೂಡಲ್​’; ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಇಂಟರ್​ನೆಟ್​ ದೈತ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2021 | 2:22 PM

ಈ ಡೂಡಲ್​ ಚಿತ್ರಿಸಿದ ಓಂಕಾರ್​ ಫೊಂಡೇಕರ್, ಏಕತೆಯನ್ನು ಪ್ರಧಾನವಾಗಿಟ್ಟುಕೊಂಡು ನಾನು ಡೂಡಲ್​ ಚಿತ್ರಿಸಿದ್ದೇನೆ. ಐಕ್ಯತಾ ಭಾವವನ್ನು ಪ್ರತಿಯೊಬ್ಬ ಭಾರತೀಯನೂ ಅಳವಡಿಸಿಕೊಳ್ಳಬೇಕು ಎಂಬುದೇ ನನ್ನ ಆಶಯ ಎಂದಿದ್ದಾರೆ.

ಭಾರತದ ವೈವಿಧ್ಯತೆ ಸಾರಿದ ‘ಗೂಗಲ್ ಡೂಡಲ್​’; ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಇಂಟರ್​ನೆಟ್​ ದೈತ್ಯ
ಗಣರಾಜ್ಯೋತ್ಸವಕ್ಕಾಗಿ ವಿಶೇಷ ಗೂಗಲ್​ ಡೂಡಲ್​
Follow us on

ಇಂಟರ್​ನೆಟ್​ ದೈತ್ಯ ಗೂಗಲ್​ ಭಾರತದ 72ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್​ ಮೂಲಕ ಗೌರವ ಸಲ್ಲಿಸಿದೆ. ಮುಂಬೈ ಮೂಲದ ಕಲಾವಿದ ಓಂಕಾರ್​ ಫೊಂಡೇಕರ್​ ರಚಿಸಿದ ಕೇಸರಿ-ಬಿಳಿ-ಹಸಿರು ಮಿಶ್ರಿತ ಡೂಡಲ್​ ಇದಾಗಿದ್ದು, ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದೆ. ಅದರಲ್ಲೂ ಮೈಸೂರು ದಸರಾ ಆನೆ ಅಂಬಾರಿಯೂ ಇರುವುದು ವಿಶೇಷ.

ಭಾರತ ಹೊಂದಿರುವಷ್ಟು ವೈವಿಧ್ಯತೆಯನ್ನು ಜಗತ್ತಿನಲ್ಲಿ ಇನ್ಯಾವ ದೇಶವೂ ಹೊಂದಿಲ್ಲ. ಇಂಥ ವೈವಿಧ್ಯ ದೇಶದಲ್ಲಿ 72 ವರ್ಷಗಳ ಹಿಂದೆ ಇದೇ ದಿನ ಸಂವಿಧಾನ ಜಾರಿಗೆ ಬಂತು. ಅದು ದೇಶದ ಸಂಕ್ರಮಣ ಕಾಲ ಎನಿಸಿತು. ಅಂದಿನಿಂದ ಇಡೀ ದೇಶ ಸಾರ್ವಭೌಮ ಗಣರಾಜ್ಯವಾಗಿ ಬದಲಾಯಿತು. ಅಂದಿನಿಂದಲೂ ಪ್ರತಿವರ್ಷ ಜನವರಿ 26ರನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ಬಾರಿ ಗೂಗಲ್​ ಕೂಡ ಭಾರತೀಯರೊಂದಿಗೆ ಸೇರಿ ಗಣರಾಜ್ಯೋತ್ಸವ ಆಚರಿಸಿದೆ. ಇಂದಿನ ಡೂಡಲ್​ನಲ್ಲಿ ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳು, ಸಂಗೀತ, ಸಾಂಪ್ರದಾಯಿಕ ಉಡುಗೆಗಳ ಚಿತ್ರವನ್ನು ಒಳಗೊಂಡಿದೆ. ಹಾಗೇ, ವ್ಯಕ್ತಿಯೊಬ್ಬ ಕ್ರಿಕೆಟ್​ ಆಡುತ್ತಿರುವುದು, ಸಿನಿಮಾ ನಿರ್ದೇಶಕ ಕ್ಯಾಮರಾ ಹಿಡಿದುಕೊಂಡಿರುವ ಚಿತ್ರವನ್ನೂ ನೋಡಬಹುದು.

ಈ ಡೂಡಲ್​ ಚಿತ್ರಿಸಿದ ಓಂಕಾರ್​ ಫೊಂಡೇಕರ್, ಏಕತೆಯನ್ನು ಪ್ರಧಾನವಾಗಿಟ್ಟುಕೊಂಡು ನಾನು ಡೂಡಲ್​ ಚಿತ್ರಿಸಿದ್ದೇನೆ. ಐಕ್ಯತಾ ಭಾವವನ್ನು ಪ್ರತಿಯೊಬ್ಬ ಭಾರತೀಯನೂ ಅಳವಡಿಸಿಕೊಳ್ಳಬೇಕು ಎಂಬುದೇ ನನ್ನ ಆಶಯ. ಜಾಗತಿಕ ವೇದಿಕೆಯಾದ ಗೂಗಲ್​ ಡೂಡಲ್​ನಲ್ಲಿ ಭಾರತ ಏಕತೆಯನ್ನು ಚಿತ್ರಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗುತ್ತಿದೆ ಎಂದೂ ಹೇಳಿದ್ದಾರೆ.

72ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ