ಕಾಶ್ಮೀರದಲ್ಲಿ ಇಂದು ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ
ಮೊಬೈಲ್ ಅಂತರ್ಜಾಲ ಸೇವೆಯನ್ನು ಕಾಶ್ಮೀರ ಕಣಿವೆ ಭಾಗದಲ್ಲಿ, ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯಂದು ಸ್ಥಗಿತಗೊಳಿಸುವ ಕ್ರಮ 2005ರಿಂದಲೂ ನಡೆಯುತ್ತಿದೆ.
ಶ್ರೀನಗರ: ಕಾಶ್ಮೀರದಲ್ಲಿ ಇಂದು (ಜ.26) ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಗಣರಾಜ್ಯೋತ್ಸವ ದಿನಾಚರಣೆಯು ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಮೊಬೈಲ್ ಅಂತರ್ಜಾಲ ಸೌಲಭ್ಯವನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ, ಶಾಂತಿಯುತವಾಗಿ ಗಣರಾಜ್ಯೋತ್ಸವ ನೆರವೇರಬೇಕು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮೊಬೈಲ್ ಸಂಪರ್ಕ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಅಂತರ್ಜಾಲ (ಇಂಟರ್ನೆಟ್) ಸೇವೆಯನ್ನು, ಕಾಶ್ಮೀರ ಕಣಿವೆ ಭಾಗದಲ್ಲಿ, ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯಂದು ಸ್ಥಗಿತಗೊಳಿಸುವ ಕ್ರಮ 2005ರಿಂದಲೂ ನಡೆಯುತ್ತಿದೆ. ಭದ್ರತೆಯ ಕಾರಣಗಳಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. 2005ರಲ್ಲಿ ಉಗ್ರಗಾಮಿಗಳು ಮೊಬೈಲ್ ಫೋನ್ ಬಳಸಿ, IED (ಇಂಪ್ರೊವೈಸ್ಡ್ ಎಕ್ಸ್ಪ್ಲೋಸಿವ್ ಡಿವೈಸ್) ಸ್ಪೋಟ ಮಾಡಿದ್ದರು. ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದ ಸ್ಥಳದಲ್ಲಿ ಈ ದುಷ್ಕೃತ್ಯ ನಡೆದಿತ್ತು. ಆ ಬಳಿಕ, ಪ್ರತಿವರ್ಷ ಮೊಬೈಲ್ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗುತ್ತಿದೆ.
ಆಪರೇಷನ್ ಸ್ನೋ ಲೆಪಾರ್ಡ್; ಗಾಲ್ವಾನ್ ಕಣಿವೆ ಸಂಘರ್ಷದ ವಿವರ ಮೊದಲ ಬಾರಿಗೆ ಬಹಿರಂಗ
Published On - 12:33 pm, Tue, 26 January 21