Mother’s Day 2021: ಅಮ್ಮಂದಿರ ದಿನಕ್ಕೆ ಗೂಗಲ್ ಡೂಡಲ್​ ಗೌರವ; ನೀವ್ಯಾಕೆ ತಡ ಮಾಡುತ್ತೀರಿ ನಿಮ್ಮ ತಾಯಿಗೊಂದು ಸ್ಪೆಶಲ್​ ವಿಶ್ ಮಾಡಿ 

|

Updated on: May 09, 2021 | 9:10 AM

Google Doodle: ಜಗತ್ತಿನಲ್ಲಿ ಪ್ರತಿಫಲ ಬಯಸದೆ ಪ್ರೀತಿ ನೀಡುವ ಏಕೈಕ ಜೀವಿಯೆಂದರೆ ಅದು ಅಮ್ಮ. ಮಕ್ಕಳ ಪ್ರತಿ ಕಷ್ಟದಲ್ಲೂ ಜತೆಯಾಗುತ್ತಾಳೆ. ತಿದ್ದುತ್ತಾಳೆ..

Mother’s Day 2021: ಅಮ್ಮಂದಿರ ದಿನಕ್ಕೆ ಗೂಗಲ್ ಡೂಡಲ್​ ಗೌರವ; ನೀವ್ಯಾಕೆ ತಡ ಮಾಡುತ್ತೀರಿ ನಿಮ್ಮ ತಾಯಿಗೊಂದು ಸ್ಪೆಶಲ್​ ವಿಶ್ ಮಾಡಿ 
ಅಮ್ಮಂದಿರ ದಿನಕ್ಕೆ ಗೂಗಲ್​ ಡೂಡಲ್​ ಗೌರವ
Follow us on

ಇಂದು ಅಮ್ಮಂದಿರ ದಿನ (Mother’s Day). ತಾಯಿ ಎಂಬ ಪದಕ್ಕಿರುವ ತೂಕ ಲೆಕ್ಕಾಚಾರಕ್ಕೆ ನಿಲುಕದ್ದು. ಜಗತ್ತಿನ ಪ್ರತಿ ತಾಯಿಯೂ ಗೌರವ, ಪ್ರೀತಿಗೆ ಅರ್ಹರು. ಜಗತ್ತಿನೆ ಕೆಲವು ದೇಶಗಳಲ್ಲಿ ಅಮ್ಮಂದಿರ ದಿನವನ್ನು ಮಾರ್ಚ್​ನಲ್ಲಿಯೇ ಆಚರಿಸಲಾಗುತ್ತದೆ. ಆದರೆ ಹೆಚ್ಚಿನ ದೇಶಗಳು ಮೇ ತಿಂಗಳಲ್ಲಿ ಆಚರಿಸುತ್ತವೆ. ಇಂದು ಅಮ್ಮಂಗೆ ವಿಶ್​ ಮಾಡೋದು, ಕೇಕ್​ ಕತ್ತರಿಸಿ ಸಂಭ್ರಮಿಸುವುದು.. ಹೀಗೆ ಒಬ್ಬೊಬ್ಬರೂ ಒಂದೊಂದು ವಿಧದಲ್ಲಿ ಅಮ್ಮನ ದಿನವನ್ನು ಆಚರಿಸುತ್ತಾರೆ.

ಇನ್ನು ಟೆಕ್​ ದಿಗ್ಗಜ ಗೂಗಲ್​ ಕೂಡ ತನ್ನ ಡೂಡಲ್​ ಮೂಲಕ ಅಮ್ಮಂದಿರ ದಿನಕ್ಕೆ ಶುಭಾಶಯ ಕೋರಿದೆ. ವಿಶ್ವದ ಎಲ್ಲ ಅಮ್ಮಂದಿರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಮಕ್ಕಳಿಗಾಗಿ ಮಾಡುವ ಅವರ ತ್ಯಾಗ, ಮಮತೆ, ತಾಯ್ತನವನ್ನು ನಿಭಾಯಿಸುತ್ತ ಸಮಾಜಕ್ಕೆ ನೀಡುವ ಕೊಡುಗೆಯನ್ನು ಸ್ಮರಿಸುವ ದೃಷ್ಟಿಯಿಂದ ಡೂಡಲ್​​ ರಚಿಸಿದೆ.

ಜಗತ್ತಿನಲ್ಲಿ ಪ್ರತಿಫಲ ಬಯಸದೆ ಪ್ರೀತಿ ನೀಡುವ ಏಕೈಕ ಜೀವಿಯೆಂದರೆ ಅದು ಅಮ್ಮ. ಮಕ್ಕಳ ಪ್ರತಿ ಕಷ್ಟದಲ್ಲೂ ಜತೆಯಾಗುತ್ತಾಳೆ. ತಿದ್ದುತ್ತಾಳೆ.. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದರೂ ಅವರಿಗೆ ಕೆಟ್ಟದಾಗಲಿ ಎಂದು ಎಂದಿಗೂ ಬಯಸುವುದಿಲ್ಲ.

ಭಾರತದಲ್ಲಿ ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಲಂಡನ್​ನಲ್ಲಿ ಮಾರ್ಚ್​​ ತಿಂಗಳ ನಾಲ್ಕನೇ ಭಾನುವಾರ ಅಮ್ಮಂದಿರ ದಿನ ಆಚರಿಸಿದರೆ ಗ್ರೀಸ್​​ನಲ್ಲಿ ಫೆಬ್ರವರಿ 2ರಂದು ಆಚರಣೆ ಮಾಡಲಾಗುತ್ತದೆ. ಮೊಟ್ಟ ಮೊದಲ ಬಾರಿಗೆ ತಾಯಂದಿರ ದಿನವನ್ನು ಆಚರಿಸಿದ್ದು ಯುಎಸ್​ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Mother’s Day 2021 Date: ತಾಯಿಯ ಸಂತೋಷಕ್ಕೆ ನೀವು ಕಾರಣರಾಗಿ, ಹೇಳಿ ವಿಶ್ವ ಅಮ್ಮಂದಿರ ದಿನದ ಶುಭಾಶಯ

Gold Rate Today: ಚಿನ್ನದ ಬೇಡಿಕೆ ಕುಸಿತ; ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿನ ಬಂಗಾರ, ಬೆಳ್ಳಿ ದರ ಮಾಹಿತಿ ಇಲ್ಲಿದೆ

Published On - 9:04 am, Sun, 9 May 21