Mother’s Day 2021 Date: ತಾಯಿಯ ಸಂತೋಷಕ್ಕೆ ನೀವು ಕಾರಣರಾಗಿ, ಹೇಳಿ ವಿಶ್ವ ಅಮ್ಮಂದಿರ ದಿನದ ಶುಭಾಶಯ

ಸಾಮಾನ್ಯವಾಗಿ ಅಮ್ಮಂದಿರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಅಥವಾ ಅವರಿಗೆ ವಿಶೇಷವಾದದ್ದನ್ನು ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಲಾಕ್​ಡೌನ್ ಜಾರಿಯಾಗಿದ್ದು, ಅಮ್ಮನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಒಂದು ಒಳ್ಳೆ ಅವಕಾಶ ಸಿಕ್ಕಿದಂತಾಗಿದೆ.

Mother's Day 2021 Date: ತಾಯಿಯ ಸಂತೋಷಕ್ಕೆ ನೀವು ಕಾರಣರಾಗಿ, ಹೇಳಿ ವಿಶ್ವ ಅಮ್ಮಂದಿರ ದಿನದ ಶುಭಾಶಯ
ಪ್ರಾತಿನಿಧಿಕ ಚಿತ್ರ
Follow us
preethi shettigar
|

Updated on:May 07, 2021 | 10:12 AM

ಮೇ ತಿಂಗಳ ಎರಡನೇ ಭಾನುವಾರದಂದು ಪ್ರತಿ ವರ್ಷ ಅಮ್ಮಂದಿರ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ತಾಯಿ ಮಕ್ಕಳ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಅಷ್ಟೇ ಅಲ್ಲ ಜೀವನದ ಹಾದಿಯಲ್ಲಿನ ಪ್ರತಿಯೊಂದು ಏಳು ಬಿಳಿನಲ್ಲೂ ಬೆನ್ನೆಲುಬಾಗಿರುತ್ತಾಳೆ. ಹೀಗಾಗಿಯೇ ಅಮ್ಮನಿಗೆ ವಿಶೇಷವಾದ ಸ್ಥಾನ ನೀಡಲಾಗಿದೆ.

ಅಮ್ಮ ಮಾಡುವ ಪ್ರತಿಯೊಂದು ತ್ಯಾಗಕ್ಕೆ, ನೀಡುವ ಮಮತೆಗೆ ಧನ್ಯವಾದ ಹೇಳಲು ಕೇವಲ ಒಂದು ದಿನ ಸಾಕಾಗುವುದಿಲ್ಲ. ಆದರೆ ಅಮ್ಮನಿಗಾಗಿ ಏನಾದರೂ ವಿಶೇಷವಾದದನ್ನು ಮಾಡಲು ಅಥವಾ ಅವಳ ಇಚ್ಛೆಯಂತೆ ನಡೆದುಕೊಳ್ಳಲು ಈ ದಿನ ಅವಕಾಶ ಮಾಡಿಕೊಡುತ್ತದೆ ಎನ್ನುವುದು ಮಾತ್ರ ನಿಜ.

ವಿಶ್ವ ಅಮ್ಮಂದಿರ ದಿನವನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ವಿಶೇಷ ದಿನವನ್ನು ಅಮೆರಿಕದ 28 ನೇ ಅಧ್ಯಕ್ಷ ವುಡ್ರೊ ವಿಲ್ಸನ್ ಅಧಿಕೃತವಾಗಿ ಸ್ಥಾಪಿಸಿದರು. ಹಿಸ್ಟರಿ ಡಾಟ್ ಕಾಮ್ ಪ್ರಕಾರ, ವಿಶ್ವ ಅಮ್ಮಂದಿರ ದಿನವು ಪ್ರಾಚೀನ ಗ್ರೀಕರು ಮತ್ತು ರೋಮನ್ನರ ಕಾಲದ್ದಾಗಿದ್ದು, ಅವರು ತಮ್ಮ ಮಾತೃ ದೇವತೆಗಳಾದ ರಿಯಾ ಮತ್ತು ಸೈಬೆಲೆ ಅವರನ್ನು ಗೌರವಿಸಲು ಈ ದಿನವನ್ನು ಮೊದಲು ಆಚರಣೆಗೆ ತಂದರು. ಆದಾಗ್ಯೂ, ಈ ದಿನದ ಆಧುನಿಕ ಉಲ್ಲೇಖವನ್ನು ಮದರಿಂಗ್ ಸಂಡೇಯಲ್ಲಿ ಕಾಣಬಹುದು. ಇದನ್ನು ಯುಕೆ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ನಾಲ್ಕನೇ ಭಾನುವಾರವನ್ನಾಗಿ ಕೂಡ ಆಚರಿಸಲಾಯಿತು.

ಮದರಿಂಗ್ ಸಂಡೇ ಎಂಬ ಈ ಹಬ್ಬವು ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡಿದೆ. ಜನರು ಚರ್ಚ್‌ಗೆ ಭೇಟಿ ನೀಡಿ ಅಲ್ಲಿ ಈ ದಿನವನ್ನು ಆಚರಿಸುತ್ತಾರೆ. ಹೀಗೆ ಮೇ 9 ರಂದು ಭೇಟಿ ನೀಡುವ ಚರ್ಚ್​ಗೆ ಮದರ್ ಚರ್ಚ್ ಎಂದೂ ಕೂಡ ಕರೆಯುತ್ತಾರೆ.

ಅಂತಿಮವಾಗಿ ಮೇ ಎರಡನೇ ಭಾನುವಾರದಂದು ಅನ್ನಾ ಜಾರ್ವಿಸ್ ಅವರ ಪರಿಶ್ರಮದಿಂದಾಗಿ ವಿಶ್ವ ಅಮ್ಮಂದಿರ ದಿನ ಆಚರಣೆಗೆ ಬಂತು. ನಂತರದಲ್ಲಿ ಯುಎಸ್​ನ ಅಧ್ಯಕ್ಷ ವಿಲ್ಸನ್ 1914 ರಲ್ಲಿ ವಿಶ್ವ ಅಮ್ಮಂದಿರ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಒಟ್ಟಾರೆಯಾಗಿ ಇವರೆಲ್ಲರ ಪ್ರಯತ್ನದ ಫಲವಾಗಿ ಇಂದು ವಿಶ್ವದಾದ್ಯಂತ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತಿದೆ. ಅಂತೆಯೇ ಈ ಬಾರಿಯೂ ಮೇ 9 ರಂದು ವಿಶ್ವ ತಾಯಂದಿರ ದಿನಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ.

ಸಾಮಾನ್ಯವಾಗಿ ಅಮ್ಮಂದಿರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಅಥವಾ ಅವರಿಗೆ ವಿಶೇಷವಾದದ್ದನ್ನು ಮಾಡುವ ಮೂಲಕ ಅಥವಾ ಅವರ ಇಚ್ಛೆಯಂತೆ ನಡೆದುಕೊಳ್ಳುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಲಾಕ್​ಡೌನ್ ಜಾರಿಯಾಗಿದ್ದು, ಅಮ್ಮನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಒಂದು ಒಳ್ಳೆ ಅವಕಾಶ ಸಿಕ್ಕಿದಂತಾಗಿದೆ. ಹೀಗಾಗಿ ತಾಯಿಯೊಂದಿಗೆ ಒಂದು ದಿನ ಕುಳಿತು ಆಕೆಯ ಸುಖ -ದುಖಃಗಳನ್ನು ಕೇಳಿ ಅಥವಾ ಅಮ್ಮನ ಅಂತರಂಗವನ್ನು ಅರಿಯಲು ಪ್ರಯತ್ನಿಸಿ ಆಗಲೇ ಅಮ್ಮಂದಿರ ದಿನಕ್ಕೆ ಅರ್ಥ ನೀಡಿದಂತಾಗುತ್ತದೆ.

ಈ ವಿಶೇಷ ದಿನದಂದು ನಾವು ತಾಯಂದಿರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಕೆಲವು ಸಣ್ಣ ವಿಧಾನಗಳನ್ನು ಗಮನಿಸುವುದಾದರೇ ಅಮ್ಮನಿಗಾಗಿ ಅಡುಗೆಯನ್ನು ಮಾಡಿ ಬಡಿಸಿ, ಆಕೆಯನ್ನು ವಿಶ್ರಾಂತಿ ಪಡೆಯಲು ತಿಳಿಸಿ ಮತ್ತು ಆ ಕೆಲಸವನ್ನು ನೀವು ಮಾಡಿ ಅಥವಾ ಅಮ್ಮನಿಗೆ ಇಷ್ಟವಾಗುವ ಸಣ್ಣ ವಿಷಯವನ್ನಾದರು ಮಾಡಿ ಸಂತೋಷಪಡಿಸಿ. ಒಟ್ಟಾರೆ ವಿಶ್ವ ಅಮ್ಮಂದಿರ ದಿನವನ್ನು ಅಮ್ಮನೊಂದಿಗೆ ಕಳೆಯಿರಿ ಎನ್ನುವುದು ಟಿವಿ9 ಡಿಜಿಟಲ್​ನ ಆಶಯ.

ಇದನ್ನೂ ಓದಿ:

ಆರೋಗ್ಯ ಚೆನ್ನಾಗಿರಬೇಕಂದ್ರೆ ಸ್ಮಾರ್ಟ್​ಫೋನ್ ಬಳಕೆ ಬಿಟ್ಟುಬಿಡಿ; ಆದರೆ ಹೇಗೆ ಬಿಡೋದು?

World Hand Hygiene Day 2021: ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಮ್ಮ ಮೊದಲ ಆದ್ಯತೆ ಯಾವುದಾಗಿರಬೇಕು?

Published On - 9:52 am, Fri, 7 May 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್