AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Hand Hygiene Day 2021: ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಮ್ಮ ಮೊದಲ ಆದ್ಯತೆ ಯಾವುದಾಗಿರಬೇಕು?

ಪ್ರತಿಯೊಬ್ಬರೂ ಕೈಗಳನ್ನು ಆಗಾಗೆ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಈ ಅಭ್ಯಾಸ ನಮ್ಮನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ ಎಂದು ಡಬ್ಲ್ಯೂಹೆಚ್ಒ ತಿಳಿಸಿದೆ.

World Hand Hygiene Day 2021: ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಮ್ಮ ಮೊದಲ ಆದ್ಯತೆ ಯಾವುದಾಗಿರಬೇಕು?
ಪ್ರಾತಿನಿಧಿಕ ಚಿತ್ರ
preethi shettigar
|

Updated on:May 05, 2021 | 12:54 PM

Share

ಕೈಗಳ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಇದರ ಪ್ರಾಮುಖ್ಯತೆಯನ್ನು ಅರ್ಥೈಸುವ ಸಲುವಾಗಿ ಮೇ 5 ರಂದು ವಿಶ್ವ ಕೈ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ಕೊರೊನಾ ಸೋಂಕಿಗೆ ಇಡೀ ದೇಶವೇ ಒಳಗಾಗಿರುವ ಇಂತಹ ಕಾಲಘಟ್ಟದಲ್ಲಿ ಈ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯವಾಗಿದೆ. ಕೈಗಳನ್ನು ಸ್ವಚ್ಛವಾಗಿಡುವ ಮತ್ತು ಆ ಮೂಲಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಜಗತ್ತಿನಾದ್ಯಂತ ಕೈಗಳನ್ನು ಸ್ವಚ್ಛವಾಗಿರಿಸಿಕೊಂಡು ನೈರ್ಮಲ್ಯದ ಸುಧಾರಣೆ ಕಡೆಗೆ ಜನರನ್ನು ಒಟ್ಟುಗೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೈಗಳ ನೈರ್ಮಲ್ಯವನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ಜೀವಿಗಳ ಹರಡುವಿಕೆಯನ್ನು ತಡೆಯಬಹುದು. ಹೀಗಾಗಿ ಈ ವರ್ಷದ ವಿಶ್ವ ಕೈ ನೈರ್ಮಲ್ಯ ದಿನಾಚರಣೆಯ ವಿಷಯವನ್ನು ಆರೈಕೆಯ ಹಂತದಲ್ಲಿ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಎಂದು ನಮೂದಿಸಲಾಗಿದೆ. ಕ್ಷಣಗಳು ನಿಮ್ಮ ಜೀವ ಉಳಿಸಬಲ್ಲದು – ನಿಮ್ಮ ಕೈಗಳನ್ನು ಸ್ವಚ್ಛವಾಗಿಡಿ ಎನ್ನುವುದು ಈ ಬಾರಿಯ ವಿಶ್ವ ಕೈ ನೈರ್ಮಲ್ಯ ದಿನದ ಘೋಷಣೆಯಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಕೈಗಳನ್ನು ಆಗಾಗೆ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಈ ಅಭ್ಯಾಸ ನಮ್ಮನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ ಎಂದು ಡಬ್ಲ್ಯೂಹೆಚ್ಒ ತಿಳಿಸಿದೆ.

ವಿಶ್ವ ಕೈ ನೈರ್ಮಲ್ಯ ದಿನದ ಆಧಾರದ ಮೇಲೆ ಸಿಡಿಸಿ (ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ) ಮತ್ತು ಡಬ್ಲ್ಯುಎಚ್‌ಒ (ವಿಶ್ವ ಆರೋಗ್ಯ ಸಂಸ್ಥೆ) ಕೊರೊನಾ ಸೋಂಕನ್ನು ದೂರವಾಗಿಸುವ ನಿಟ್ಟಿನಲ್ಲಿ ಕೈಗಳನ್ನು ಸ್ವಚ್ಛವಾಗಿಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಹಂತ 1: ಹರಿಯುವ ನೀರಿನಿಂದ ನಿಮ್ಮ ಕೈಗಳನ್ನು ಮೊದಲು ಒದ್ದೆ ಮಾಡಿಕೊಳ್ಳಿ

ಹಂತ 2: ಇದರ ನಂತರ, ನೀವು ಸೋಪ್ ಅನ್ನು ಪರಿಣಾಮಕಾರಿಯಾಗಿ ಬಳಸಬೇಕಾಗುತ್ತದೆ. ಅಂದರೆ ಕೈಗಳ ಎಲ್ಲಾ ಭಾಗಕ್ಕೂ ತಾಗುವಂತೆ ನೋಡಿಕೊಳ್ಳಬೇಕು.

ಹಂತ 3: ಬಳಿಕ ನಿಮ್ಮ ಬೆರಳ ತುದಿ, ಅಂಗೈ ಮತ್ತು ಉಗುರುಗಳಿಗೆ ತಾಗುವಂತೆ ಚೆನ್ನಾಗಿ ನೀರು ಮತ್ತು ಸೋಪನ್ನು ಬಳಸಿ.

ಹಂತ 4: ಈಗ ನೀವು ಕನಿಷ್ಟ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಚೆನ್ನಾಗಿ ಉಜ್ಜಬೇಕು.

ಹಂತ 5: ಇದಾದನಂತರ ನಿಮ್ಮ ಕೈಗಳನ್ನು ಹರಿಯುವ ನೀರಿನಿಂದ ಮತ್ತೆ ಪುನಃ ಸ್ವಚ್ಛಗೊಳಿಸಬೇಕು.

ಹಂತ 6: ಬಳಿಕ ನಿಮ್ಮ ಕೈಗಳನ್ನು ಟವೆಲ್​ನಿಂದ ಒರೆಸಿಕೊಳ್ಳಿ ಅಥವಾ ನೀವು ಕೈಯನ್ನು ಒಣಗಲು ಬಿಡಬಹುದು.

ಹಂತ 7: ಆದರೆ ನಲ್ಲಿಯನ್ನು ಕೇವಲ ಕೈಗಳಿಂದ ಮುಟ್ಟಿ ಬಂದ್ ಮಾಡಬೇಡಿ, ಪರ್ಯಾಯವಾಗಿ ಟಿಶ್ಯೂ ಪೇಪರ್ ಕೈಯಲ್ಲಿ ಹಿಡಿದು ನಲ್ಲಿ ಬಂದ್ ಮಾಡಿ.

ಕೈ ತೊಳೆಯುವ ಪ್ರಮುಖ ಸಮಯಗಳು ಯಾವುವು?

* ಆಹಾರವನ್ನು ತಯಾರಿಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಬೇಕು.

* ಆಹಾರವನ್ನು ತಿನ್ನುವ ಮೊದಲು ಮತ್ತು ನಂತರ ಕೈ ತೊಳೆಯಬೇಕು.

* ಪ್ರಾಣಿಗಳನ್ನು ಮುಟ್ಟಿದ ನಂತರ ಕೈ ತೊಳೆಯಬೇಕು.

* ಕಸವನ್ನು ಮುಟ್ಟಿದ ನಂತರ ಕೈ ತೊಳೆಯಿರಿ.

ಇದನ್ನೂ ಓದಿ:

ಜೀವಿಸುವ ಹಕ್ಕಿನಲ್ಲಿ ಆರೋಗ್ಯವೂ ಸೇರಿದೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಎಲ್ಲರ ಕರ್ತವ್ಯ, ಕೂಡಲೇ ಬೆಡ್ ಪ್ರಮಾಣ​ ಹೆಚ್ಚಿಸಿ: ಹೈಕೋರ್ಟ್

World Asthma Day 2021 ಕೊರೊನಾ ಸಮಯದಲ್ಲಿ ಅಸ್ತಮಾ ರೋಗಿಗಳಲ್ಲಿ ಇರಲಿ ಮುನ್ನೆಚ್ಚರಿಕೆ

Published On - 12:49 pm, Wed, 5 May 21

Follow Us
preethi shettigar
preethi shettigar
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು