World Asthma Day 2021 ಕೊರೊನಾ ಸಮಯದಲ್ಲಿ ಅಸ್ತಮಾ ರೋಗಿಗಳಲ್ಲಿ ಇರಲಿ ಮುನ್ನೆಚ್ಚರಿಕೆ

ಆಸ್ತಮಾ ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲದ ಕಾಯಿಲೆಯಾಗಿದೆ. ಇದು ವ್ಯಕ್ತಿಯ ಅನಾರೋಗ್ಯಕ್ಕೇ ಕಾರಣವಾಗುತ್ತದೆ. ಇದರಿಂದಾಗಿ ಉಸಿರಾಡಲು ಕಷ್ಟವಾಗುತ್ತದೆ.

World Asthma Day 2021 ಕೊರೊನಾ ಸಮಯದಲ್ಲಿ ಅಸ್ತಮಾ ರೋಗಿಗಳಲ್ಲಿ ಇರಲಿ ಮುನ್ನೆಚ್ಚರಿಕೆ
ವಿಶ್ವ ಅಸ್ತಮಾ ದಿನ (ಟ್ವಿಟರ್)
Follow us
ಆಯೇಷಾ ಬಾನು
|

Updated on: May 04, 2021 | 11:50 AM

ಮೇ 4 ಇಂದು ವಿಶ್ವ ಅಸ್ತಮಾ ದಿನ.. ಪ್ರತಿ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರವನ್ನು ವಿಶ್ವ ಅಸ್ತಮಾ ದಿನವೆಂದು ಆಚರಿಸಲಾಗುತ್ತದೆ. ಈ ದಿನ ಜಗತ್ತಿನಾದ್ಯಂತ ಅಸ್ತಮಾ ರೋಗದ ಬಗ್ಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಿ ಅಸ್ತಮಾದ ಬಗ್ಗೆ ಜಾಗೃತಿ ಮೂಡಿಸಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಈ ದಿನವನ್ನು ಆಚರಿಸಲಾಗುತ್ತೆ. ಆಸ್ತಮಾ ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲದ ಕಾಯಿಲೆಯಾಗಿದೆ. ಇದು ವ್ಯಕ್ತಿಯ ಅನಾರೋಗ್ಯಕ್ಕೇ ಕಾರಣವಾಗುತ್ತದೆ. ಇದರಿಂದಾಗಿ ಉಸಿರಾಡಲು ಕಷ್ಟವಾಗುತ್ತದೆ.

ಈ ಕಾಯಿಲೆಯಿಂದ ವ್ಯಕ್ತಿಯ ಶ್ವಾಸಕೋಶದಲ್ಲಿ ಶ್ವಾಸನಾಳದ ಕೊಳವೆಗಳ ಊತಕ್ಕೆ ಕಾರಣವಾಗುತ್ತದೆ ಮತ್ತು ಅದು ತೀವ್ರವಾಗಿ ಹಾನಿಯಾಗುತ್ತದೆ. ಸಾಮಾನ್ಯ ಉಸಿರಾಟದ ಸಮಯದಲ್ಲಿ, ಶ್ವಾಸಕೋಶದಲ್ಲಿ ಶ್ವಾಸನಾಳದ ಕೊಳವೆಗಳು ಸರಾಗವಾದ ಉಸಿರಾಟ ಕ್ರಿಯೆಗೆ ಸಹಾಯಕವಾಗಿರುತ್ತವೆ. ಆದರೆ ಆಸ್ತಮಾದಿಂದ ಬಳಲುತಿದ್ದವರಿಗೆ ಶ್ವಾಸನಾಳದ ಕೊಳವೆಗಳ ಊತ ಅಥವಾ ಸ್ನಾಯುಗಳು ಗಟ್ಟಿಯಾಗುವುದರಿಂದ ಸರಾಗವಾದ ಗಾಳಿಯ ಚಲನೆ ಕಷ್ಟವಾಗುತ್ತದೆ. ಹೀಗಾಗಿ ಆಸ್ತಮಾ ಇರುವವರಿಗೆ ಉಸಿರಾಟದ ತೊಂದರೆ ಎದುರಾಗುತ್ತೆ. ಅದರಲ್ಲೂ ಕೊವಿಡ್ ಸಮಯದಲ್ಲಿ ಅಸ್ತಮಾ ಇರುವವರು ಹೆಚ್ಚಿನ ಜಾಗೃತೆವಹಿಸಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಕೊರೊನಾ ಸೋಂಕಿಗೆ ಹೆದರುವ ಭಯವಿಲ್ಲ. ಅಸ್ತಮಾ ಲಕ್ಷಣಗಳು ಆಸ್ತಮಾದಿಂದ ಬಳಲುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಅಸ್ತಮಾ ಲಕ್ಷಣಗಳು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ವಿಭಿನ್ನವಾಗಿರುತ್ತವೆ. ವ್ಯಕ್ತಿಯ ಜೀವನ ಶೈಲಿ, ಆಹಾರ ಪದ್ಧತಿ ಕೂಡ ಅಸ್ತಮಾ ಲಕ್ಷಣಗಳ ಮೇಲೆ ಪ್ರಭಾವ ಬೀರುತ್ತದೆ.

ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. -ನೀಲಿ ಬಣ್ಣದ ಗೆರೆಗಳು ನಿಮ್ಮ ಬೆರಳಿನ ಉಗುರುಗಳು, ತುಟಿಗಳು ಅಥವಾ ಮುಖದಲ್ಲಿ ಕಾಣಿಸಿಕೊಂಡರೆ -ಅಸಾಮಾನ್ಯ ಉಸಿರಾಟ -ನೀವು ಉಸಿರಾಡುವಾಗ ನಿಮ್ಮ ಪಕ್ಕೆಲುಬುಗಳ ಸುತ್ತಲಿನ ಚರ್ಮವು ಒಳಕ್ಕೆ ಎಳೆಯುವಂತಾದಾಗ -ಮಾತನಾಡಲು, ನಡೆಯಲು ಅಥವಾ ಉಸಿರಾಡಲು ತೊಂದರೆಯಾದಾಗ ವೈದ್ಯರನ್ನು ಸಂಪರ್ಕಿಸಿ. ನೀವು ಆಸ್ತಮಾದಿಂದ ಬಳಲುತ್ತಿದ್ದರೆ ನಿಮ್ಮ ಉಸಿರಾಟ ಕ್ರಿಯೆ ನಿಮ್ಮ ಸುತ್ತಲಿನ ಪ್ರಪಂಚದ ಎಲ್ಲಾ ಬದಲಾವಣೆಗಳಿಗೂ ಪ್ರತಿಕ್ರಿಯಿಸುತ್ತದೆ. ಎಂದರೆ ಹವಮಾನ ಬದಲಾವಣೆಯಾದಾಗ, ಅಥವಾ ನೀವು ಶೀತವಾಗುವಂತಹ ಯಾವುದೇ ಹಣ್ಣು, ತರಕಾರಿ, ಮುಂಜಾನೆ ಬೇಗ ಎದ್ದಾಗ ಇಂತಹ ಯಾವುದೇ ಬದಲಾವಣೆಗಳು ಅಸ್ತಮಾ ಇರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವೈದ್ಯಕೀಯ ತಜ್ಞರು ಈ ವಿದ್ಯಮಾನವನ್ನು ಆಸ್ತಮಾ ಪ್ರಚೋದಕಗಳು(Asthma Triggers) ಎಂದು ಕರೆಯುತ್ತಾರೆ, ಇದು ಅಸ್ತಮಾ ಲಕ್ಷಣಗಳನ್ನು ಸೃಷ್ಟಿಸಬಹುದು ಅಥವಾ ಅವುಗಳನ್ನು ಹೆಚ್ಚು ಗಂಭೀರಗೊಳಿಸಬಹುದು.

ಅಸ್ತಮಾಕ್ಕೆ ಕಾರಣವಾಗುವ ಸಂಗತಿಗಳು -ವಾಯು ಮಾಲಿನ್ಯ -ವ್ಯಾಯಾಮ -ಧೂಮಪಾನ, ತಂಬಾಕು -ಧೂಳು, ಅಲರ್ಜಿ. -ಜ್ವರ, ಶೀತ, ಸೋಂಕು, ಇತ್ಯಾದಿ -ಮನೆ ಶುದ್ಧಗೊಳಿಸಲು ಬಳಸುವ ದ್ರಾವಣಗಳು ಅಥವಾ ಹೆಚ್ಚು ವಾಸನೆ ಇರುವ ಸುಗಂಧ ದ್ರವ್ಯಗಳು -ಹವಾಮಾನ ಬದಲಾವಣೆ ಅಥವಾ ತಂಪಾದ ಗಾಳಿ -ದುಃಖ, ಆತಂಕ ಅಥವಾ ಒತ್ತಡ

ಆಸ್ತಮಾ ಇರುವ ಕೆಲವು ಜನರಲ್ಲಿ ದೀರ್ಘಾವಧಿಯವರೆಗೆ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಮತ್ತು ಕೆಲವರು ಅಸ್ತಮಾದಿಂದಾಗಿ ಪ್ರತಿದಿನವೂ ಸಮಯವನ್ನು ಎದುರಿಸುತ್ತಿರುತ್ತಾರೆ.

ಆಸ್ತಮಾವನ್ನು ತಡೆಯಲು ಕೆಲ ಸಲಹೆಗಳು -ಶುದ್ಧ, ತಾಜಾ ಮನೆಯಲ್ಲೇ ತಯಾರಿಸಿದ ಬಿಸಿ ಆಹಾರ ಸೇವನೆ -ಪ್ರತಿ ದಿನ ಮನೆಯಲ್ಲೇ ವ್ಯಾಯಾಮ -ಯೋಗಾಭ್ಯಾಸ ಮತ್ತು ದೈಹಿಕ ಚಟುವಟಿಕೆ ಅದರಲ್ಲೂ ಪ್ರಾಣಾಯಾಮ ಮಾಡುವುದು ಉತ್ತಮ -ವೈದ್ಯರು ಹೇಳಿರುವ ನಿಮ್ಮ ದಿನ ನಿತ್ಯದ ಔಷಧಿಯನ್ನು ತಪ್ಪದೇ ತೆಗೆದುಕೊಳ್ಳಿ -ನಿಮ್ಮ ಉಸಿರಾಟದಲ್ಲಾಗುವ ಬದಲಾವಣೆ ಮೇಲೆ ಗಮನವಿರಲಿ -ನಿಮಗೆ ಯಾವ ಯಾವಾಗ ಆಸ್ತಮಾದಿಂದ ತೊಂದರೆಯಾಗುತ್ತದೆ ಎಂಬ ಬಗ್ಗೆ ಗಮನ ಹರಿಸಿ ಅದರಿಂದ ದೂರವಿರಿ -ನ್ಯುಮೋನಿಯಾ ಮತ್ತು ಶೀತ ಜ್ವರ ಬಂದಾಗ ನಿರ್ಲಕ್ಷ್ಯವಹಿಸದಿರಿ -ಅಲರ್ಜಿ ಮತ್ತು ಮಾಲಿನ್ಯಕಾರಕಗಳಿಂದ ದೂರವಿರಿ

ಇದನ್ನೂ ಓದಿ: 30 ವರ್ಷಗಳಿಂದಲೂ ಶ್ವಾಸನಾಳದ ಅಸ್ತಮಾದಿಂದ ಬಳಲುತ್ತಿದ್ದಾರೆ ಖ್ಯಾತ ನಟಿ ಕಾಜಲ್​ ಅಗರ್​ವಾಲ್

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್