ಡಿಜಿಟಲ್ ಪಾವತಿ ಸಂಸ್ಥೆಯಾದ ಗೂಗಲ್ ಪೇ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ವೈಸ್ ಮತ್ತು ವೆಸ್ಟರ್ನ್ ಯೂನಿಯನ್ ಕಂಪನಿಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಹಣ ವರ್ಗಾವಣೆ ವ್ಯವಸ್ಥೆಯನ್ನು ಶುರು ಮಾಡಿದೆ. ಇದೀಗ ನೀವು ಭಾರತದಲ್ಲಿದ್ದರೂ, ಅಮೆರಿಕದಲ್ಲಿ ಇದ್ದವರಿಂದ ಗೂಗಲ್ ಪೇ ಮೂಲಕ ಹಣ ಸ್ವೀಕರಿಸಬಹುದಾಗಿದೆ. ಇದೇ ಅವಕಾಶ ಸಿಂಗಪೂರ್ ದೇಶದವರಿಗೂ ಅನ್ವಯ ಆಗಲಿದೆ.
ಗೂಗಲ್ ಪೇನಲ್ಲಿ ಹಣ ರವಾನೆ ವ್ಯವಸ್ಥೆಯನ್ನು ವಿಸ್ತರಿಸಲು, ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಅಮೆರಿಕದಲ್ಲಿರುವ ಗೂಗಲ್ ಪೇ ಬಳಕೆದಾರರು ವೆಸ್ಟರ್ನ್ ಯೂನಿಯನ್ ಕಂಪನಿ ಮೂಲಕ 200ಕ್ಕೂ ಹೆಚ್ಚು ದೇಶಗಳಿಗೆ ಮತ್ತು ವೈಸ್ ಮೂಲಕ 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿರುವ ಜನರಿಗೆ ಹಣ ವರ್ಗಾಯಿಸಬಹುದು ಎಂದು ಗೂಗಲ್ ನಿರೀಕ್ಷೆ ಮಾಡಿದೆ.
ಯುಎಸ್ನಲ್ಲಿರುವ ಗೂಗಲ್ ಪೇ ಬಳಕೆದಾರರು ಭಾರತದಲ್ಲಿರುವ ಜನರಿಗೆ ಹೇಗೆ ಹಣಕಳಿಸಬಹುದು ಎಂಬುದು ಸಹಜವಾಗಿಯೇ ಏಳುವ ಪ್ರಶ್ನೆ. ಜೂನ್ 16ರವರೆಗೆ ವೆಸ್ಟರ್ನ್ ಯೂನಿಯನ್ ಕಂಪನಿ ಉಚಿತ ಅನಿಯಮಿತವಾಗಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆಗೆ ಅವಕಾಶ ನೀಡಿದೆ. ಹಾಗೇ, ವೈಸ್ ಇಂದಿನಿಂದ ಜೂ.16ರವರೆಗೆ ತನ್ನ ಹೊಸ ಗ್ರಾಹಕರಿಗೆ 500 ಡಾಲರ್ವರೆಗಿನ ವರ್ಗಾವಣೆಯನ್ನು ಉಚಿತವಾಗಿ ಮಾಡಲು ಅವಕಾಶ ನೀಡಿದೆ.
ಗೂಗಲ್ ಆ್ಯಪ್ ಬಳಕೆದಾರರು ಹೀಗೆ ಮಾಡಬೇಕು
ಮೊದಲು ಗೂಗಲ್ ಪೇ ಆ್ಯಪ್ ಓಪನ್ ಮಾಡಬೇಕು
ಅದರಲ್ಲಿ ಪೇ ಎಂಬಲ್ಲಿ ಕ್ಲಿಕ್ ಮಾಡಿ.
ನಂತರ ಅಲ್ಲಿ ವೆಸ್ಟರ್ನ್ ಯೂನಿಯನ್ ಮತ್ತು ವೈಸ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ.
ಆಯ್ಕೆ ಮಾಡಿದ ನಂತರ ಸ್ಕ್ರೀನ್ ಮೇಲೆ ಕಾಣಿಸುವ ನಿಯಮಗಳನ್ನು ಅನುಸರಿಸಿ, ನಿಮ್ಮ ಟ್ರಾನ್ಸಾಕ್ಷನ್ ಪೂರ್ಣಗೊಳಿಸಿ.
ಕಳೆದ ನವೆಂಬರ್ನಲ್ಲಿ ಗೂಗಲ್ ತನ್ನ ಡಿಜಿಟಲ್ ಪೇಮೆಂಟ್ ಆ್ಯಪ್ ಗೂಗಲ್ ಪೇ ಯನ್ನು ಯುಎಸ್ನಲ್ಲಿ ಅಪ್ಡೇಟ್ ಮಾಡಿತ್ತು. ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಬಳಕೆದಾರರಿಬ್ಬರಿಗೂ ಈ ಅಪ್ಡೇಟೆಡ್ ವರ್ಷನ್ ಬಳಕೆಗೆ ಅವಕಾಶ ಮಾಡಿಕೊಡಲಾಗಿತ್ತು.
ಇದನ್ನೂ ಓದಿ: ಐಪಿಎಲ್ ನಡೆದಿದ್ದರೆ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರುತ್ತಿತ್ತು; ರೆಡ್ಡಿಟ್ ಬಳಕೆದಾರನ ದತ್ತಾಂಶ ವಿಶ್ಲೇಷಣಾ ಪಲಿತಾಂಶ
ಶೀಘ್ರವೇ 2 ಮತ್ತು 3ನೇ ಹಂತದ ಪ್ರಯೋಗ ಆರಂಭಿಸುತ್ತೇವೆ: ಏಮ್ಸ್ ವೈದ್ಯಕೀಯ ವಿಭಾಗದ ಡಾ.ಸಂಜೀವ್ ಸಿನ್ಹಾ