ಶೀಘ್ರವೇ 2 ಮತ್ತು 3ನೇ ಹಂತದ ಪ್ರಯೋಗ ಆರಂಭಿಸುತ್ತೇವೆ: ಏಮ್ಸ್ ವೈದ್ಯಕೀಯ ವಿಭಾಗದ ಡಾ.ಸಂಜೀವ್ ಸಿನ್ಹಾ
ಶೀಘ್ರವೇ 2 ಮತ್ತು 3ನೇ ಹಂತದ ಪ್ರಯೋಗ ಆರಂಭಿಸುತ್ತೇವೆ ಎಂದು ಏಮ್ಸ್ ವೈದ್ಯಕೀಯ ವಿಭಾಗದ ಡಾ.ಸಂಜೀವ್ ಸಿನ್ಹಾ ಹೇಳಿಕೆ ನೀಡಿದ್ದಾರೆ. ಆ ಮೂಲಕ ಭಾರತ್ ಬಯೋಟೆಕ್ಗೆ 2 ರಿಂದ 15 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ.
ದೆಹಲಿ: ಡಿಸಿಜಿಐನ ವಿಷಯ ತಜ್ಞರ ಸಮಿತಿ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶೀಘ್ರವೇ 2 ಮತ್ತು 3ನೇ ಹಂತದ ಪ್ರಯೋಗ ಆರಂಭಿಸುತ್ತೇವೆ ಎಂದು ಏಮ್ಸ್ ವೈದ್ಯಕೀಯ ವಿಭಾಗದ ಡಾ.ಸಂಜೀವ್ ಸಿನ್ಹಾ ಹೇಳಿಕೆ ನೀಡಿದ್ದಾರೆ. ಆ ಮೂಲಕ ಭಾರತ್ ಬಯೋಟೆಕ್ಗೆ 2 ರಿಂದ 15 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ.
ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕು ಹಬ್ಬುವಿಕೆ ಹೆಚ್ಚಾಗಿದ್ದು, ಇನ್ನು ಕೆಲ ತಿಂಗಳ ಬಳಿಕ ಮೂರನೇ ಅಲೆ ಬರುವ ಸಾಧ್ಯತೆಯೂ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗಿರಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ನಿಟ್ಟಿನಲ್ಲಿ 2 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಎರಡು ಹಾಗೂ ಮೂರನೇ ಹಂತದ ವೈದ್ಯಕೀಯ ಪರೀಕ್ಷೆ ಆರಂಭಿಸುವಂತೆ ತಜ್ಞರ ಸಮಿತಿ ಭಾರತ್ ಬಯೋಟೆಕ್ ಸಂಸ್ಥೆಗೆ ಸಲಹೆ ನೀಡಿದೆ.
ವೈದ್ಯಕೀಯ ಪರೀಕ್ಷೆಯು ದೆಹಲಿ ಹಾಗೂ ಪಾಟ್ನಾದ AIIMS ಹಾಗೂ ನಾಗ್ಪುರದ ಮೆಡಿತ್ರಿನ ವೈದ್ಯಕೀಯ ವಿಜ್ಞಾನದ ಸಂಸ್ಥೆ ಸೇರಿದಂತೆ ವಿವಿಧೆಡೆ ನಡೆಯಲಿದ್ದು 525 ವಿಚಾರಗಳತ್ತ ಗಮನ ಹರಿಸಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಯಾಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲು ಅಡ್ಡಿಯಿಲ್ಲವೇ ಎಂದು ತಿಳಿಯಲು 2 ಹಾಗೂ 3ನೇ ಹಂತದ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ.
ಭಾರತ್ ಬಯೋಟೆಕ್ ಕಂಪನಿಗೆ 65 ಕೋಟಿ ರೂಪಾಯಿ ನೆರವು: ಭಾರತ್ ಬಯೋಟೆಕ್ ಕಂಪನಿಯ ಬೆಂಗಳೂರಿನ ನೂತನ ಘಟಕ್ಕೆ 65 ಕೋಟಿ ರೂಪಾಯಿ ಹಣಕಾಸು ನೆರವನ್ನು ಘೋಷಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಎನ್ಐ ಲಸಿಕೆ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಮೂರು ಸರ್ಕಾರಿ ಸ್ವಾಮ್ಯದ ಕಂಪನಿಗಳು ಬೆಂಬಲಕ್ಕೆ ಬಂದಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮಾಹಿತಿ ನೀಡಿದೆ ಎಂದು ತಿಳಿಸಿದೆ.
Financial support is being provided as a grant from GoI to the tune of appx Rs 65 Cr to Bharat Biotech’s new Bangalore facility. 3 public sectors companies are also being supported to increase the capacity of vaccine production: Ministry of Science & Technology
— ANI (@ANI) May 12, 2021
ಇದನ್ನೂ ಓದಿ:
ಬೆಂಗಳೂರು ನಗರದ ಜನ ಬೆಂಗಳೂರಿನಲ್ಲೇ ಲಸಿಕೆ ಪಡೆಯಿರಿ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಫೈಜರ್ ಕೊವಿಡ್ ಲಸಿಕೆಯನ್ನು ಮಕ್ಕಳಿಗೆ ನೀಡಲು ಅಮೇರಿಕದ ಔಷಧ ಪ್ರಾಧಿಕಾರ ಒಪ್ಪಿಗೆ
Published On - 6:10 pm, Wed, 12 May 21