ಗೂಗಲ್​ ಪೇ ಬಳಕೆದಾರರಿಗೊಂದು ಗುಡ್​ನ್ಯೂಸ್; ಯುಎಸ್​ನಲ್ಲಿದ್ದುಕೊಂಡು, ಭಾರತದಲ್ಲಿದ್ದವರಿಗೂ ಹಣ ವರ್ಗಾವಣೆ ಮಾಡಬಹುದು !

ಕಳೆದ ನವೆಂಬರ್​ನಲ್ಲಿ ಗೂಗಲ್​ ತನ್ನ ಡಿಜಿಟಲ್​ ಪೇಮೆಂಟ್ ಆ್ಯಪ್​ ಗೂಗಲ್​ ಪೇ ಯನ್ನು ಯುಎಸ್​​ನಲ್ಲಿ ಅಪ್​​ಡೇಟ್ ಮಾಡಿತ್ತು.

ಗೂಗಲ್​ ಪೇ ಬಳಕೆದಾರರಿಗೊಂದು ಗುಡ್​ನ್ಯೂಸ್; ಯುಎಸ್​ನಲ್ಲಿದ್ದುಕೊಂಡು, ಭಾರತದಲ್ಲಿದ್ದವರಿಗೂ ಹಣ ವರ್ಗಾವಣೆ ಮಾಡಬಹುದು !
ಗೂಗಲ್​ ಪೇ ಚಿತ್ರ
Follow us
Lakshmi Hegde
|

Updated on: May 12, 2021 | 6:39 PM

ಡಿಜಿಟಲ್​ ಪಾವತಿ ಸಂಸ್ಥೆಯಾದ ಗೂಗಲ್ ಪೇ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ವೈಸ್​ ಮತ್ತು ವೆಸ್ಟರ್ನ್ ಯೂನಿಯನ್ ಕಂಪನಿಗಳ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಹಣ ವರ್ಗಾವಣೆ ವ್ಯವಸ್ಥೆಯನ್ನು ಶುರು ಮಾಡಿದೆ. ಇದೀಗ ನೀವು ಭಾರತದಲ್ಲಿದ್ದರೂ, ಅಮೆರಿಕದಲ್ಲಿ ಇದ್ದವರಿಂದ ಗೂಗಲ್ ಪೇ ಮೂಲಕ ಹಣ ಸ್ವೀಕರಿಸಬಹುದಾಗಿದೆ. ಇದೇ ಅವಕಾಶ ಸಿಂಗಪೂರ್​ ದೇಶದವರಿಗೂ ಅನ್ವಯ ಆಗಲಿದೆ.

ಗೂಗಲ್​ ಪೇನಲ್ಲಿ ಹಣ ರವಾನೆ ವ್ಯವಸ್ಥೆಯನ್ನು ವಿಸ್ತರಿಸಲು, ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗಿದೆ. ಈ ವರ್ಷದ ಅಂತ್ಯದೊಳಗೆ ಅಮೆರಿಕದಲ್ಲಿರುವ ಗೂಗಲ್​ ಪೇ ಬಳಕೆದಾರರು ವೆಸ್ಟರ್ನ್ ಯೂನಿಯನ್ ಕಂಪನಿ ಮೂಲಕ 200ಕ್ಕೂ ಹೆಚ್ಚು ದೇಶಗಳಿಗೆ ಮತ್ತು ವೈಸ್ ಮೂಲಕ 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿರುವ ಜನರಿಗೆ ಹಣ ವರ್ಗಾಯಿಸಬಹುದು ಎಂದು ಗೂಗಲ್ ನಿರೀಕ್ಷೆ ಮಾಡಿದೆ.

ಯುಎಸ್​ನಲ್ಲಿರುವ ಗೂಗಲ್ ಪೇ ಬಳಕೆದಾರರು ಭಾರತದಲ್ಲಿರುವ ಜನರಿಗೆ ಹೇಗೆ ಹಣಕಳಿಸಬಹುದು ಎಂಬುದು ಸಹಜವಾಗಿಯೇ ಏಳುವ ಪ್ರಶ್ನೆ. ಜೂನ್​ 16ರವರೆಗೆ ವೆಸ್ಟರ್ನ್ ಯೂನಿಯನ್​ ಕಂಪನಿ ಉಚಿತ ಅನಿಯಮಿತವಾಗಿ ಗೂಗಲ್​ ಪೇ ಮೂಲಕ ಹಣ ವರ್ಗಾವಣೆಗೆ ಅವಕಾಶ ನೀಡಿದೆ. ಹಾಗೇ, ವೈಸ್​ ಇಂದಿನಿಂದ ಜೂ.16ರವರೆಗೆ ತನ್ನ ಹೊಸ ಗ್ರಾಹಕರಿಗೆ 500 ಡಾಲರ್​​ವರೆಗಿನ ವರ್ಗಾವಣೆಯನ್ನು ಉಚಿತವಾಗಿ ಮಾಡಲು ಅವಕಾಶ ನೀಡಿದೆ.

ಗೂಗಲ್ ಆ್ಯಪ್ ಬಳಕೆದಾರರು ಹೀಗೆ ಮಾಡಬೇಕು ಮೊದಲು ಗೂಗಲ್ ಪೇ ಆ್ಯಪ್ ಓಪನ್ ಮಾಡಬೇಕು ಅದರಲ್ಲಿ ಪೇ ಎಂಬಲ್ಲಿ ಕ್ಲಿಕ್ ಮಾಡಿ. ನಂತರ ಅಲ್ಲಿ ವೆಸ್ಟರ್ನ್​ ಯೂನಿಯನ್ ಮತ್ತು ವೈಸ್​ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆ ಮಾಡಿದ ನಂತರ ಸ್ಕ್ರೀನ್ ಮೇಲೆ ಕಾಣಿಸುವ ನಿಯಮಗಳನ್ನು ಅನುಸರಿಸಿ, ನಿಮ್ಮ ಟ್ರಾನ್ಸಾಕ್ಷನ್​ ಪೂರ್ಣಗೊಳಿಸಿ.

ಕಳೆದ ನವೆಂಬರ್​ನಲ್ಲಿ ಗೂಗಲ್​ ತನ್ನ ಡಿಜಿಟಲ್​ ಪೇಮೆಂಟ್ ಆ್ಯಪ್​ ಗೂಗಲ್​ ಪೇ ಯನ್ನು ಯುಎಸ್​​ನಲ್ಲಿ ಅಪ್​​ಡೇಟ್ ಮಾಡಿತ್ತು. ಆ್ಯಂಡ್ರಾಯ್ಡ್​ ಮತ್ತು ಆ್ಯಪಲ್​ ಬಳಕೆದಾರರಿಬ್ಬರಿಗೂ ಈ ಅಪ್​ಡೇಟೆಡ್ ವರ್ಷನ್ ಬಳಕೆಗೆ ಅವಕಾಶ ಮಾಡಿಕೊಡಲಾಗಿತ್ತು.

ಇದನ್ನೂ ಓದಿ:  ಐಪಿಎಲ್​ ನಡೆದಿದ್ದರೆ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರುತ್ತಿತ್ತು; ರೆಡ್ಡಿಟ್ ಬಳಕೆದಾರನ ದತ್ತಾಂಶ ವಿಶ್ಲೇಷಣಾ ಪಲಿತಾಂಶ

ಶೀಘ್ರವೇ 2 ಮತ್ತು 3ನೇ ಹಂತದ ಪ್ರಯೋಗ ಆರಂಭಿಸುತ್ತೇವೆ: ಏಮ್ಸ್ ವೈದ್ಯಕೀಯ ವಿಭಾಗದ ಡಾ.ಸಂಜೀವ್ ಸಿನ್ಹಾ

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ