Thank You Coronavirus Helpers: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡೂಡಲ್​ ಗೌರವ ಸಲ್ಲಿಸಿದ ಗೂಗಲ್​

Google Doodles: ಕೊವಿಡ್​ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಿದ ವೈಜ್ಞಾನಿಕ ಕ್ಷೇತ್ರದ ಎಲ್ಲ ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಬರೆಯಲಾಗಿದೆ.

Thank You Coronavirus Helpers: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡೂಡಲ್​ ಗೌರವ ಸಲ್ಲಿಸಿದ ಗೂಗಲ್​
ಇಂದಿನ ಗೂಗಲ್​ ಡೂಡಲ್​
Follow us
|

Updated on:Apr 26, 2021 | 10:15 AM

ಜಗತ್ತಿಗೆ ಕೊರೊನಾ ಸೋಂಕು ಕಾಲಿಟ್ಟು ವರ್ಷಗಳೇ ಕಳೆದಿವೆ. ಎಲ್ಲ ರಾಷ್ಟ್ರಗಳೂ ಸಹ ಈ ಸೋಂಕಿನ ವಿರುದ್ಧ ಹೋರಾಡುತ್ತಿವೆ. ಇದನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ, ವೈರಸ್ ವಿರುದ್ಧ ಬದುಕಬೇಕು ಎಂಬ ಕಹಿ ಸತ್ಯವನ್ನು ಅರ್ಥಮಾಡಿಕೊಂಡು, ಅದರೊಟ್ಟಿಗೆ ಬದುಕಲು ಸಿದ್ಧವಾಗುತ್ತಿವೆ.

ಈ ಮಧ್ಯೆ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿ ವಿವಿಧ ಕ್ಷೇತ್ರಗಳ ಸಿಬ್ಬಂದಿ ಮುಂಚೂಣಿಯಲ್ಲಿ ನಿಂತು ಕೊರೊನಾ ವೈರಸ್​ ವಿರುದ್ಧ ಹೋರಾಡಿದ್ದಾರೆ. ಜನರ ಸುರಕ್ಷತೆಗಾಗಿ ತಮ್ಮ ಪ್ರಾಣಗಳನ್ನೇ ಪಣಕ್ಕಿಟ್ಟುಕೊಂಡಿದ್ದಾರೆ. ಇನ್ನು ಇವರೆಲ್ಲರೊಟ್ಟಿಗೆ ಕೊರೊನಾ ವಿರುದ್ಧ ಹೋರಾಟದಲ್ಲಿ ತುಂಬ ಪ್ರಮುಖ ಪಾತ್ರ ವಹಿಸಿದ್ದು ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರ. ಕೊರೊನಾ ಲಸಿಕೆ ಕಂಡು ಹಿಡಿಯುವ ಮೂಲಕ ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸುತ್ತಿದೆ. ಇದೀಗ ಈ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ, ಸರ್ಚ್ ಎಂಜಿನ್​ ದೈತ್ಯ ಗೂಗಲ್ ತನ್ನ​ ಡೂಡಲ್​ ಮೂಲಕ ಗೌರವ ಅರ್ಪಿಸಿದೆ. ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಗೌರವ ಸಲ್ಲಿಸಲು ಎನಿಮೇಟೆಡ್​ ಡೂಡಲ್​ ರಚಿಸಿದೆ. ಇದರಲ್ಲಿ ಮೊದಲ G ಒಂದು ಹಾರ್ಟ್​ ಮಾರ್ಕ್​​ನ್ನು ಕೊನೆಯಲ್ಲಿರುವ E ಗೆ ಕಳಿಸುವಂತೆ ರಚಿಸಲಾಗಿದೆ. ಕೊನೆಯಲ್ಲಿರುವ E ಯನ್ನು ವಿಜ್ಞಾನಿಗಳು ಮತ್ತು ಸಂಶೋಧಕರು ರಿಸರ್ಚ್​ ಮಾಡುತ್ತಿರುವಂತೆ ಇಡಲಾಗಿದೆ.

ಈ ಗೂಗಲ್​ ಡೂಡಲ್ ಮೇಲೆ ಕ್ಲಿಕ್​ ಮಾಡಿದರೆ, ಧನ್ಯವಾದಗಳು- ಕೊವಿಡ್​ ವಿರುದ್ಧ ಹೋರಾಟಕ್ಕೆ ಸಹಕಾರ ನೀಡಿದ ವೈಜ್ಞಾನಿಕ ಕ್ಷೇತ್ರದ ಎಲ್ಲ ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಬರೆಯಲಾಗಿದೆ.

ಕೆಲವು ವಿಶೇಷ ಸಂದರ್ಭಗಳಲ್ಲಿ ಗೂಗಲ್​ ತನ್ನ ಡೂಡಲ್​ ಮೂಲಕ ಪ್ರಸ್ತುತಪಡಿಸುತ್ತದೆ. ಕಳೆದವರ್ಷವೂ ಸಹ ಕೊರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಟ ನಡೆಸುತ್ತಿದ್ದ ಸಿಬ್ಬಂದಿಗೆ ಡೂಡಲ್ ಗೌರವ ಅರ್ಪಿಸಿತ್ತು.

ಇದನ್ನೂ ಓದಿ: Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​

ಕೊರೊನಾ: ತುಮಕೂರಿನಲ್ಲಿ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಬಲಿ, ನೇಣು ಬಿಗಿದುಕೊಂಡು ಶ್ರೀರಂಗಪಟ್ಟಣದಲ್ಲಿ ಮತ್ತೊಬ್ಬ ಸಾವು

Google Says Thank You Coronavirus Helpers with a special Doodles to honor healthcare workers

Published On - 10:04 am, Mon, 26 April 21

ತಾಜಾ ಸುದ್ದಿ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!